ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರಕಾರಿ ಪದವಿ ಪೂರ್ವ ಕಾಲೇಜು ಭೀಮರಾಯನ ಗುಡಿ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಹಲವಾರು ಸಾಮಾಜಿಕ, ಸಾಂಸ್ಕೃತಿಕ, ಕಲಾತ್ಮಕ, ಶೈಕ್ಷಣಿಕ ವಲಯದ ಶಿಬಿರವನ್ನು ಡಿಸೆಂಬರ್ 4 ರಿಂದ ಡಿಸೆಂಬರ್ ಹತ್ತರವರೆಗೆ ಹಮ್ಮಿಕೊಂಡಿತ್ತು.
ಇದರಲ್ಲಿ ಹಲವಾರು ಉಪನ್ಯಾಸ, ವಿಚಾರ ಸಂಕಿರಣ, ಚರ್ಚೆ, ನಾಟಕ, ಸಿನಿಮಾಗಳ ಜೊತೆ ಹಲವಾರು ಚಟುವಟಿಕೆಗಳು ಜರುಗಿತು. ಇದರ ಅಂಗವಾಗಿ” ಮಾತಂಗಿ ದೀವಟಿಗೆ ” ಎಂಬ ಮಂಜು ಪಾಂಡವಪುರ ನಿರ್ದೇಶನದ ಸಿನಿಮಾ ಪ್ರದರ್ಶನವಾಯಿತು.
ದಿಗ್ಗಿ ಸೈದಾಪುರ ಹಾಗೂ ಭೀಮರಾಯನ ಗುಡಿಯ ಗ್ರಾಮಸ್ಥರು, ಅಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕರು ಸಿನಿಮಾವನ್ನು ವೀಕ್ಷಣೆ ಮಾಡಿದರು, ಡಾ. ಪದ್ಮ ನಾಗರಾಜು ನಿರ್ಮಾಣದ, ಪ್ರೊ, ಸಮಾತದೇಶಮಾನೆಯವರ ಆತ್ಮಕಥೆ ಆಧಾರದ ಸಿನಿಮಾವು ಗ್ರಾಮಸ್ಥರ ಮನಸ್ಸನ್ನು ಸ್ಪರ್ಶಿಸಿತು.
ಡಾ l ರವೀಂದ್ರನಾಥ ಹೊಸಮನಿ, ದೇವೇಂದ್ರಪ್ಪ ಮಡಿವಾಳಕರ್,ಡಾ l ರವೀಂದ್ರ ಪಾಟೀಲ, ಶ್ರೀ ಗುಂಡೆಕರ್ ರಾಮಚಂದ್ರರಾವ್, ಶ್ರೀ ಸಾಯಿಬಣ್ಣ ಮೇತ್ರೆ, ಜೊತೆಗೆ ಊರಿನ ಸಮಸ್ತ ಜನತೆ, ಕನ್ನಡ ಸಾಹಿತ್ಯ ಪರಿಷತ್ತು ಭೀಮರಾಯನ ಗುಡಿ ಜೊತೆಗೆ ಶ್ರೀ ಶರಣಬಸವ ಪೋ ll ಬಿರಾದಾರ, ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಕಲ್ಬುರ್ಗಿಯ ಶ್ರೀಮತಿ ಯುಗಾಂತ್ರಿ ದೇಶಮನೆ ಹಾಗೂ ಅವರ ಕುಟುಂಬದವರು ಈ ಸಿನಿಮಾ ವೀಕ್ಷಣೆಯಲ್ಲಿ ಪಾಲ್ಗೊಂಡಿದ್ದರು.