ಖಾನಾಪುರ :-ತಾಲ್ಲೂಕಿನ ಅರಣ್ಯ ಪ್ರದೇಶದ ಸಾಲಿನಲ್ಲಿ ಬರುವ ಕೊನೆ ಗಡಿ ಗ್ರಾಮ ಪಂಚಾಯಿತಿ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೀರ್ಥಕುಂಡೆ ವಾರ್ಡ್ ನ ಕೌಲಾಪುರ ಗ್ರಾಮದಲ್ಲಿರುವ ಖಾಸಗಿ ಕೋಳಿ ಪೌಲ್ಟ್ರಿ ಪಾರ್ಮ್ ನ ತ್ಯಾಜ್ಯ ಹಾಗೂ ಕೋಳಿಗಳ ವಾಸನೆಗೆ ನೊಣಗಳು ತುಂಬಾ ಜಾಸ್ತಿಯಾಗಿ ಹೆಜ್ಜೆಗಳ ದೂರದಲ್ಲೇ ಇರುವ ಅಂದಾಜು 600 ಜನಸಂಖ್ಯೆ ಇರುವ ಕೌಲಾಪುರ ವಾಡೆ ಗ್ರಾಮದ ಮನೆಗಳ ಒಳಗೆ ದಿನ ನಿತ್ಯ ನುಗ್ಗುತ್ತಿವೆ.
ಇನ್ನೂ ಈ ಕೋಳಿ ಪಾರ್ಮ್ ನ ತ್ಯಾಜ್ಯ ವಸ್ತುಗಳ ವಾಸನೆಯು ಸಹ ಗ್ರಾಮದ ತುಂಬೆಲ್ಲಾ ಹಬ್ಬುತ್ತಿದ್ದು ಇಲ್ಲಿ ದಿನನಿತ್ಯ ವಾಸ ಮಾಡಲು ಈ ಗ್ರಾಮಸ್ಥರು ತುಂಬಾನೇ ಹರಸಾಹಸ ಪಡುತ್ತಿದ್ದಾರೆ. ಇನ್ನೂ ಈ ನೊಣಗಳು ಎಲ್ಲೆದರಲ್ಲಿ ಕುಳಿತು ಇಲ್ಲಿರುವ ಪರಿಸರವನ್ನು ಹಾಳು ಮಾಡುತ್ತಿರುವುದರಿಂದ ಇಲ್ಲಿರುವ ಗ್ರಾಮಸ್ಥರು ಹಾಗೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿ ದಿನ ನಿತ್ಯ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
ಈ ಗ್ರಾಮವು ಕುಗ್ರಾಮ ವಾಗಿರುವುದರಿಂದ ಸಮೀಪವಾಗಿ ಯಾವುದೇ ಆಸ್ಪತ್ರೆ ಇಲ್ಲದ ಕಾರಣ ದೂರದ ಖಾನಾಪುರ ಅಥವಾ ಬೆಳಗಾವಿಗೆ ಹೋಗುವ ಪರಿಸ್ಥಿತಿ ಇದ್ದು ಇವರಿಗೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲಾ, ಇನ್ನೂ ಈ ಖಾಸಗಿ ಕೋಳಿ ಪಾರ್ಮ್ ಪ್ರಾರಂಭ ಮಾಡಿ 16 ವರ್ಷಗಳಾದರೂ ಅಂದಿನಿಂದ ಇಂದಿನವರೆಗೂ ಸಹ ನೊಣಗಳ ಹಾವಳಿಯಲ್ಲೇ ಬದುಕುತ್ತಿದ್ದು ನಮಗೆ ಏನು ಮಾಡುವುದಕ್ಕೆ ಆಗುತ್ತಿಲ್ಲಾ ಎಂದು ತಮ್ಮ ಅಸಾಯಕತೆ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನೂ ಸ್ಥಳೀಯ ಗ್ರಾಮ ಪಂಚಾಯಿತಿ ಬೈಲೂರು ಆಡಳಿತ ಮಂಡಳಿಯಿಂದ ಇದನ್ನು ಬಂದ್ ಮಾಡಿಸುವುದಕ್ಕೆ ಠರಾವು ಪಾಸ್ ಮಾಡಿ ತಹಶೀಲ್ದಾರ್ ಹಾಗೂ ಡಿ.ಸಿ ವರೆಗೂ ಮನವಿ ಸಲ್ಲಿಸಿದ್ದರು.
ಇದರಿಂದ ಎಲ್ಲಾ ಅಧಿಕಾರಿಗಳು ಬಂದು ಹೋದ್ರೂ ಸಹ ಯಾವುದೇ ರೀತಿಯ ಪ್ರಯೋಜನವಾಗಿಲ್ಲವಂತೆ, ಆದ್ದರಿಂದ ಇಂದು ಇವರ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಖಾನಾಪುರ ಶಾಸಕ ವಿಠಲ ಹಲಗೇಕರ್ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳು ಆದ ಶ್ರೀ ಮಹಮದ್ ರೋಷನ್, ಬೆಳಗಾವಿ ಉಪ ವಿಬಾಗದ ಅಧಿಕಾರಿಗಳು ಆದ ಶ್ರವಣ ನಾಯಕ್ ಅವರ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ:- ಬಸವರಾಜು.