—————————————–ಕ್ರಷಾರ್ ಮಾಲೀಕರ ಕೈ ಗೊಂಬೆಯಾದ ಅಧಿಕಾರಿಗಳು
ವರದಿ: ಅಯ್ಯಣ್ಣ ಮಾಸ್ಟರ್
ಬೆಂಗಳೂರು: ಸದಾ ಕಟಕಟ ಸೌಂಡು, ಬ್ಲಾಸ್ಟ್ ಶಬ್ದಕ್ಕೆ ಬೆಚ್ಚಿ ಬೀಳುವ ಮಕ್ಕಳು, ಮನೆಯ ಹೆಂಚಿನ ಮೇಲೆಲ್ಲ ಬ್ಲಾಸ್ಟ್ ಆದಾಗ ಹಾರುವ ಕಲ್ಲಿನ ಚೂರುಗಳು..
ಇವೆಲ್ಲವೂ ಗ್ರಾಮಸ್ಥರು ಸದಾ ಭಯದಲ್ಲಿ ಬದುಕುವಂತಹ ವಾತಾವರಣ ಸೃಷ್ಟಿಸಿವೆ. ಅಧಿಕಾರಿಗಳು ಷ ಕ್ರಷಾರ್ ಮಾಲೀಕ ಕೈ ಗೊಂಬೆ ಆಗಿ ಸಾರ್ವಜನಿಕ ಪ್ರಾಣ ಹಿಂಡುವ ಕೆಲಸ ಮಾಡುತ್ತಿದ್ದು ಅಧಿಕಾರಿಗಳು ಆಮಿಷಕ್ಕೆ ಬಲಿ ಆಗಿದ್ದಾರಂತೆ ಮೇಲ್ನೊಟಕ್ಕೆ ಕಂಡು ಬರುತ್ತಿದ್ದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಅರಸೀಕಟ್ಟೆ ಕಾವಲ್ ನಲ್ಲಿ, ನೆಹರು ನಗರ ಹೀಗೊಂದು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬುದು ಗ್ರಾಮಸ್ಥರು ಮತ್ತು ರಾಜ್ಯ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ್ ಹೆಚ್. ಆಕ್ರೋಶ ವ್ಯಕ್ತಪಡಿಸಿದರು.
ಗಣಿಗಾರಿಕೆ ನಡೆಯುವ ಸರ್ವೆ ನಂ. 116 ರ ಜಾಗ ಶಾಲೆ, ದೇವಸ್ಥಾನ ಮತ್ತು ವಾಸ ಸ್ಥಳದ ಹತ್ತಿರದಲ್ಲಿದೆ. ಸುತ್ತಲೂ ಕೃಷಿ ಜಮೀನಿದ್ದು, ಗಣಿಯಿಂದ ಹರಡುವ ಧೂಳು ಬೆಳೆಗಳನ್ನು ನಾಶ ಮಾಡುತ್ತಿದೆ. ಜತೆಗೆ ಗಣಿಗಾರಿಕೆ ನಡೆಸುವ ಸ್ಥಳ ಗುಡ್ಡ ಪ್ರದೇಶವಾಗಿದ್ದು, ಪರಿಸರಕ್ಕೂ ಹಾನಿಯಾಗಲಿದೆ ಎಂದು ಹಿರಿಯ ಭೂ ವಿಜ್ಞಾನಿಗಳು ವರದಿ ನೀಡಿದ್ದಾರೆ.
ಆದರೆ ಮಲ್ಲೇಶಪ್ಪ ಸ್ಟೋನ್ ಕ್ರಷಾರ್ ಮಾಲೀಕ ಸುರೇಶ್ ಮತ್ತು ಅರಸಿಕಟ್ಟಮ್ಮ ಸ್ಟೋನ್ ಕ್ರಷಾರ್ ಮಾಲೀಕ ರಾಜೇಶ್ ಇವರಿಬ್ಬರು ಗಣಿಗಾರಿಕೆ ನಡೆಸಲಾಗುತ್ತಿದ್ದು, ಅಧಿಕಾರಿಗಳ ಕುಮ್ಮಕ್ಕಿನಿಂದ ಗಣಿ ಮಾಲೀಕರು ಗ್ರಾಮಸ್ಥರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಗ್ರಾಮದ ಜನರು ಆರೋಪಿಸಿದ್ದಾರೆ. ನಮಗೆ ನೆಮ್ಮದಿಯ ಬದುಕು ಬೇಕು. ನಮ್ಮ ಮಕ್ಕಳು ಭಯದಿಂದ ಬದುಕುವ ಪರಿಸ್ಥಿತಿ ದೂರವಾಗಬೇಕು. ಇದಕ್ಕೆ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಗಣಿಗಾರಿಕೆ ತಕ್ಷಣ ನಿಲ್ಲಿಸ ಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.




