ಗದಗ : ಆಂಜನೇಯ ದೇಗುಲದಲ್ಲಿ ನಿಗೂಢ ಗೆಜ್ಜೆ ಶಬ್ದ ಕೇಳಿಬಂದಿದ್ದು, ಅದನ್ನು ಕೇಳಿಸಿಕೊಳ್ಳಲು ಗ್ರಾಮಸ್ಥರು ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ.ಗದಗ ಜಿಲ್ಲೆಯ ಕೊರ್ಲಹಳ್ಳಿಯಲ್ಲಿರುವ ಆಂಜನೇಯ ದೇವಾಲಯದಲ್ಲಿ ಈ ಘಟನೆ ನಡೆದಿದೆ.
ಆಂಜನೇಯ ದೇವಾಲಯದ ಗರ್ಭಗುಡಿಯಿಂದ ನಿಗೂಡ ಗೆಜ್ಜೆ ಶಬ್ದ ಕೇಳಿಬರುತ್ತಿದೆ ಎಂಬ ಸುದ್ದಿ ಕಳೆದ ರಾತ್ರಿ ಗ್ರಾಮದಲ್ಲಿ ಹರಡಿದ್ದು, ಊರಿನ ಜನರೆಲ್ಲಾ ದೇವಸ್ಥಾನದಲ್ಲಿ ದೌಡಾಯಿಸಿದ್ದಾರೆ.
ಕೊರ್ಲಹಳ್ಳಿಯಲ್ಲಿರುವ ಆಂಜನೇಯ ದೇವಾಲಯದಲ್ಲಿರುವ ನಡೆದ ಘಟನೆ ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ. ನಿಗೂಢವಾದ ಗೆಜ್ಜೆ ಶಬ್ದಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.




