Ad imageAd image

ಶಾಲೆಯನ್ನೇ ಬಾರ್ ಆಗಿ ಉಪಯೋಗಿಸುತ್ತಿರುವ ಕುಡುಕರು: ಕರೆಂಟ್ ತಗುಲಿ ಸತ್ತರು ಕೆರ್ ಮಾಡಲ್ಲ ಎಂಬಂತೆ ಅಧಿಕಾರಿಗಳು.

Bharath Vaibhav
ಶಾಲೆಯನ್ನೇ ಬಾರ್ ಆಗಿ ಉಪಯೋಗಿಸುತ್ತಿರುವ ಕುಡುಕರು: ಕರೆಂಟ್ ತಗುಲಿ ಸತ್ತರು ಕೆರ್ ಮಾಡಲ್ಲ ಎಂಬಂತೆ ಅಧಿಕಾರಿಗಳು.
WhatsApp Group Join Now
Telegram Group Join Now

ಸೇಡಂ:- ತಾಲೂಕಿನ ಚಂದಾಪುರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಒಳಾಂಗಣದಲ್ಲಿ ಸಂಜೆ ಸಮಯದಲ್ಲಿ ದಿನನಿತ್ಯ ಕುಡುಕರ ಸಹವಾಸ ಹೆಚ್ಚಾಗಿದೆ.

ಶಾಲೆಯ ಒಳಾಂಗಣಕ್ಕೆ ನುಗ್ಗಿ ಅಲ್ಲೇ ಕುಡಿದು ಬೀರ್ ಬಾಟಲ್, ಮತ್ತು ಬಿಡಿ ಸಿಗರೇಟ್, ಮುಂತಾದ ಮಾದಕ ದ್ರವ್ಯಗಳ ಸೇವನೆ ಮಾಡುತ್ತಿದ್ದು ಅಲ್ಲದೆ ಅಲ್ಲೇ ಬಾಟಲ್ ಗಳನ್ನ ಒಡೆದು ಹಾಕಿ ಮಕ್ಕಳಿಗೆ ತೊಂದರೆಯಾಗುವಂತೆ ಮಾಡುತ್ತಿದ್ದಾರೆ ಎಂದು ಪೋಷಕರು ಆಗ್ರಹಿಸಿದ್ದಾರೆ.

ಅಷ್ಟೇ ಅಲ್ಲದೆ ಶಾಲೆಯ ಪಕ್ಕದಲ್ಲೇ ಕರೆಂಟ್ ಟ್ರಸ್ಫಾರ್ಮರ್ ಇದ್ದು ವಿದ್ಯುತ್ ಕಂಬಗಳು ಶಾಲೆಯ ಆವರಣದಲ್ಲಿ ಅಳವಡಿಸಲಾಗಿದೆ. ಕಂಬಗಳಿಗೆ ಮರಗಳು ತಗುಲಿ ವೈರ್ ಗಳಿಂದ ಅಪಾಯವಾಗುವ ಸಾಧ್ಯತೆ ಇದೆ.

ಸ್ವಲ್ಪ ಮಳೆಯಾದರೆ ಸಾಕು ನೀರಿನ ಗುಂಡಿಗಳು ತುಂಬಿ ಶಾಲಾ ಆವರಣದ ಒಳಗೆ ಹೋಗಲು ಕೂಡ ಬರುವುದಿಲ್ಲ.ಪಕ್ಕದಲ್ಲೇ ಕರೆಂಟ್ ಕಂಬಗಳು ಇದ್ದು ವಿದ್ಯುತ್ ತಗುಲುವ ಅಪಾಯವಿದೆ.

ಶಾಲೆಯ ವ್ಯವಸ್ಥೆಯು ಸ್ವಲ್ಪ ಕೂಡ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲದೆ ಇವೆಲ್ಲ ನೋಡಿ ನೋಡದಂತೆ ಇದಾರೆ ಎಂದು ತಿಳಿಯುತಿದೆ.ಚಂದಾಪುರ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳು ಈ ಶಾಲೆಗೆ ಬರಲು ಭಯಪಡುತ್ತಿದ್ದಾರೆ.

ಶಾಲೆಯ ಶೌಚಾಲಯವು ಕೂಡ ಸ್ವಚ್ಚತೆ ಇಲ್ಲಾ ಕಾರಣ ಅಲ್ಲೇ ಎಣ್ಣೆ ಕುಡಿದು ಬೀರ್ ಬಾಟಲ್ ಗಳನ್ನು ಒಡೆದು ಹಾಕಿರುವ ಗಾಜಿನ ತುಂಡುಗಳು ಇರುತ್ತವೆ.ಹೆಣ್ಣು ಮಕ್ಕಳಿಗೆ ಶೌಚಾಲಯ ಹೋಗುವುದು ತುಂಬಾ ಸಮಸ್ಯೆನೆ ಆಗಿಬಿಟ್ಟಿದೆ.

ಆದರೆ ಇಷ್ಟೆಲ್ಲಾ ನೋಡಿ ಕೂಡ ಅಧಿಕಾರಿಗಳು ಯಾಕೆ ಈ ಶಾಲೆ ಕಡೆ ಗಮನ ಕೊಡುತ್ತಿಲ್ಲ ಎಂಬುದು ಪ್ರಶ್ನೆಯಾಗಿದೆ.ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಮುಖ್ಯ ಗುರುಗಳು ಯಾಕೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ತಿಳಿಯಬೇಕಿದೆ.

ವಿದ್ಯಾ ಕಲಿಸುವ ಮೊದಲು ಸ್ವಚ್ಚತೆ ಕಾಪಾಡಬೇಕು ಇಲ್ಲಿನ ಶಿಕ್ಷಕರು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕಾರಣಕ್ಕೆ ಮಕ್ಕಳಿಗೆ ಕ್ರಮ ಕೈಗೊಂಡಿಲ್ಲ ಅದ ಕಾರಣ ಮಕ್ಕಳು ಕೂಡ ಶಾಲೆಗೆ ಬರಲು ಭಯಭೀತರಾಗಿದ್ದಾರೆ ಎಂದು ತಿಳಿದು ಬಂದಿದೆ.

ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಮನವಿ ಆಗಿದೆ.ಈಗಲಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧ್ಯಕ್ಷರು ಕ್ರಮ ಕೈಗೊಳ್ಳುವರ ಎಂದು ಕಾದು ನೋಡಬೇಕಿದೆ.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!