Ad imageAd image

ಅತ್ಯಾಚಾರ ಆರೋಪ : ಮಹಿಳೆ ವಿರುದ್ಧ ದೂರು ದಾಖಲಿಸಿದ ವಿನಯ್ ಕುಲಕರ್ಣಿ 

Bharath Vaibhav
ಅತ್ಯಾಚಾರ ಆರೋಪ : ಮಹಿಳೆ ವಿರುದ್ಧ ದೂರು ದಾಖಲಿಸಿದ ವಿನಯ್ ಕುಲಕರ್ಣಿ 
vinay kulkarni
WhatsApp Group Join Now
Telegram Group Join Now

ಬೆಂಗಳೂರು : ರೈತ ಮುಖಂಡ ಮಹಿಳೆಯ ಮೇಲೆ ಶಾಸಕ ವಿನಯ್ ಕುಲಕರ್ಣಿ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪದಲ್ಲಿ ಅವರ ವಿರುದ್ಧ F.I.R ದಾಖಲಾಗಿದ್ದು, ಇಂದು ಈ ದೂರಿಗೆ ಪ್ರತಿಯಾಗಿ ಆರೋಪ ಹೊರಿಸಿರುವ ಮಹಿಳೆಯ ವಿರುದ್ಧ ಶಾಸಕ ವಿನಯ್ ಕುಲಕರ್ಣಿ ಪ್ರತಿ ದೂರು ದಾಖಲಿಸಿದ್ದಾರೆ.

ಈ ಮಹಿಳೆ ಇದೇ ರೀತಿ ಹಲವು ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂಡುಕ್ ವಿನಯ್ ಕುಲಕರ್ಣಿ ಆರೋಪಿಸಿದ್ದಾರೆ.

ನನಗೂ ಆ ಮಹಿಳೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ಆ ಮಹಿಳೆಯನ್ನು ಮುಟ್ಟಿದ್ದರೆ ನನ್ನ ತಾಯಿಯನ್ನು ಮುಟ್ಟಿದಂತೆ.ಆಕೆ ಒಮ್ಮೆ ನನಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಅಷ್ಟು ಮಾತ್ರಕ್ಕೆ ಇಷ್ಟೆಲ್ಲಾ ಆರೋಪ ಮಾಡಿದ್ದಾರೆ ಎಂದು ವಿನಯ್ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.

ಈ ಮಹಿಳೆ ತನ್ನ ವಿಡಿಯೋ ಮತ್ತು ಫೋನ್ ಸಂಭಾಷಣೆಯನ್ನು ಪ್ರಸಾರ ಮಾಡುವ ಬ್ಲಾಕ್ ಮೇಲ್ ಮಾಡಿದ್ದಾರೆ. ಇವರೊಟ್ಟಿಗೆ ಖಾಸಗಿ ವಾಹಿನಿಯೊಂದು ಸೇರಿಕೊಂಡು ಈ ಷಡ್ಯಂತರ ನಡೆಸಿದೆ ಎಂದು ಶಾಸಕ ವಿನಯ್ ಕುಲಕರ್ಣಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ದೂರಿನ ಆಧಾರದ ಮೇಲೆ ಖಾಸಗಿ ವಾಹಿನಿ ಮತ್ತು ಮಹಿಳೆಯ ವಿರುದ್ಧ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!