ಬೆಳಗಾವಿ: ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಹಿರಿಯ ಮಂಡಳಿಗೆ ನನ್ನ ಹೆಸರು ಸಲ್ಲಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ್ ನಾವಲಗಟ್ಟಿ, ಎಂದು ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿರಾಗರೊಂದಿಗೆ ಮಾತಾಡಿದ ಅವರು, ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸದಸ್ಯನಾಗಿ ಸೇವೆ ಸಲ್ಲಿಸಿದ್ದೆನೆ. ಪಕ್ಷದ ಶಕ್ತಿಯನ್ನು ಬಲಪಡಿಸಲು ಶ್ರಮಿಸಿದ್ದೆನೆ. ಮತ್ತು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಯಶಸ್ವಿಯಾಗಿ ನೇತೃತ್ವ ವಹಿಸಿದ್ದೇನೆ. ನನ್ನ ನಾಯಕತ್ವದಲ್ಲಿ ಬೆಳಗಾವಿಯಿಂದ ಕರ್ನಾಟಕಕ್ಕೆ 11 ಕ್ಕೂ ಹೆಚ್ಚು ಶಾಸಕರನ್ನು ಆಯ್ಕೆ ಮಾಡಲು ನಾನು ಯಶಸ್ವಿಯಾಗಿದ್ದೇನೆ ಎಂಬುದು ಹೆಮ್ಮೆಯ ವಿಷಯ. ನಾನು ಪಂಚಾಯತ್ ಮಟ್ಟದಲ್ಲಿಯೂ ಕೆಲಸ ಮಾಡಿದ್ದೇನೆ. ಎಂದು ತಮ್ಮ ಸಾಧನೆಗಳನ್ನು ಪ್ರಸ್ತಾಪಿಸಿದರು.
ಬಿಜೆಪಿ ಆಡಳಿತದ ವಿರುದ್ಧ ಹೋರಾಡಲು ಆರಂಭಿಸಲಾಗಿದ್ದ ಪ್ರಜಾದ್ವನಿ ಉದ್ಘಾಟನೆಗೆ ಪ್ರಮುಖ ಬಿಂದುವಾಗಿದ್ದೆ. ನಾನು ನನ್ನ ಮಟ್ಟಿಗೆ ಉತ್ತಮವಾಗಿ ಕಾಂಗ್ರೆಸಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಬೆಂಬಲಿಗರು ಮತ್ತು ಹಿರಿಯ ಮಂಡಳಿಗೆ ಜೊತೆ ವಿದಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತನಾಡಿದ ಅವರು, ನಾನು 24*7 ಸಮಯದಲ್ಲಿ 30 ವರ್ಷಗಳಿಂದ ಕಾಂಗ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಸ್ಥಾನ ಅಥವಾ ಹುದ್ದೆಗಾಗಿ ಕೆಲಸ ಮಾಡಲಿಲ್ಲ,ನಾನು ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದೆ. ನಮ್ಮ ಹಿರಿಯ ಮಂಡಳಿ ನನ್ನ ಹೆಸರನ್ನು ವಿದಾನ ಪರಿಷತ್ ಚುನಾವಣೆಗೆ ಪರಿಗಣಿಸಲಿದೆ ಎಂದು ನಾನು ನಂಬಿದ್ದೇನೆ ಎಂದು ಅವರು ಹೇಳಿದರು.
ವರದಿ: ಪ್ರತೀಕ ಚಿಟಗಿ