Ad imageAd image

ನಟ ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದ ವಿನೋದ್ ಪ್ರಭಾಕರ್

Bharath Vaibhav
ನಟ ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದ ವಿನೋದ್ ಪ್ರಭಾಕರ್
WhatsApp Group Join Now
Telegram Group Join Now

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ನೋಡಲು ನಟ ವಿನೋದ್‌ ಪ್ರಭಾಕರ್‌ ಗೆಳಯರೊಂದಗಿಗೆ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್‌, ಪವಿತ್ರಾಗೌಡ ಸೇರಿದಂತೆ ಹಲವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದ್ದು, ನಟ ದರ್ಶನ್‌ ನೋಡಲು ನಟ, ಗೆಳೆಯ ವಿನೋದ್‌ ಪ್ರಭಾಕರ್‌ ಮತ್ತು ಸ್ನೇಹಿತರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.

ನಟ ದರ್ಶನ್‌, ಪವಿತ್ರಾಗೌಡ ಸೇರಿದಂತೆ ಇತರೆ ಆರೋಪಿಗಳು ಈಗಾಗಲೇ ವಕೀಲರ ಜೊತೆಗೆ ಚರ್ಚೆ ನಡೆಸಿದ್ದು, ಇಂದು ಪ್ರಕರಣದಲಿ ಇದುವರೆಗಿನ ವರದಿ ಕುರಿತು ವಿಚಾರಣಾ ಕೋರ್ಟ್‌ ನಿಂದ ಅಧಿಕೃತ ದಾಖಲೆ ಪಡೆದು ಕೋರ್ಟ್‌ ಗೆ ಜಾಮೀನು ಅರ್ಜಿಗಳು ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ನಟ ದರ್ಶನ್‌ ಗೆ ವಿಶೇಷ ಸೆಲ್‌ ನಲ್ಲಿ ಇಡಲಾಗಿದ್ದು, ದರ್ಶನ್‌ ಯಾರೊಂದಿಗೆ ಹೆಚ್ಚು ಮಾತನಾಡುತ್ತಿಲ್ಲ. ಜೈಲು ಮೆನವಿನಂತೆ ನೀಡಿದ ಉಪಹಾರ ಹಾಗೂ ಊಟ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!