Ad imageAd image

ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ: ವರುಣ ಚರ್ಕವರ್ತಿಗೆ ಭಾರೀ ದಂಡ

Bharath Vaibhav
ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ: ವರುಣ ಚರ್ಕವರ್ತಿಗೆ ಭಾರೀ ದಂಡ
WhatsApp Group Join Now
Telegram Group Join Now

ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರಿ ದಂಡ ವಿಧಿಸಿದೆ. ಪ್ಲೇಆಫ್ ಕನಸು ಕಾಣುತ್ತಿದ್ದ ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕನಸಿಗೆ ತಣ್ಣೀರೆರೆಚಿರುವ CSK ಎರಡು ವಿಕೆಟ್ ಅಂತರದಿಂದ ಗೆಲುವು ಸಾಧಿಸಿದೆ.

ಈಗಾಗಲೇ ಪ್ಲೇಆಫ್ ರೇಸ್ನಿಂದ ಹೊರಗುಳಿದಿರುವ ಸಿಎಸ್ಕೆ ಬುಧವಾರ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸಿದೆ. ಪಂದ್ಯದ ವೇಳೆ ವಿಕೆಟ್ ಪಡೆದು ಸಂಭ್ರಮಾಚರಣೆ ಮಾಡಿದ ವರುಣ್ ಚಕ್ರವರ್ತಿಗೆ ಪಂದ್ಯ ಶುಲ್ಕದ ಶೇ 25ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ.

ವರುಣ್ ಚಕ್ರವರ್ತಿ ಅವರು ಆರ್ಟಿಕಲ್ 2.5 ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಮಾಡಿದ್ದು, ಒಪ್ಪಿಕೊಂಡಿದ್ದಾರೆ. ಮ್ಯಾಚ್ ರೆಫರಿಯ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆಎಂದು ಘಟನೆಯನ್ನು ಉಲ್ಲೇಖಿಸದೆ ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

ಆರ್ಟಿಕಲ್ 2.5 ಅಡಿಯಲ್ಲಿಯಾವುದೇ ಆಟಗಾರ ಔಟ್ ಆದ ಬಳಿಕ ಬ್ಯಾಟ್ಸ್ಮನ್ ಕಡೆಗೆ ಯಾವುದೇ ಭಾಷೆ, ಕ್ರಿಯೆ ಅಥವಾ ಸನ್ನೆಮಾಡಿದರೆ ದಂಡ ವಿಧಿಸಲಾಗುತ್ತದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!