ಇಲಕಲ್ : ಕಂದಗಲ್ಲ ಶ್ರೀ ವೀರಭದ್ರ ದೇವರು. ಕಂದಗಲ್ಲ.ಶಿವಶಕ್ತಿಯ ಅಲುಪ್ತತೆಯ ಸಂಕೇತವಾಗಿರುವ ವೀರಭದ್ರ ದೇವರು ಅನೇಕ ಪವಾಡಗಳ ಒಡೆಯ, ರುದ್ರ ಭಯಂಕರನಾಗಿರುವ ವೀರಭದ್ರದೇವರು ಶಿವನ ಕ್ರೋಧಗ್ನಿಯ ಪುತ್ರನಾಗಿದ್ದು ಶಿವನಿಂದಕರ ಅಧರ್ಮಿಗಳ ಸಂಹಾರ ಈತನ ಧ್ಯೆಯವಾಗಿದೆ. ಜಾಗ್ರತದೇವರು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಕಾರಣಿಕ ಧೈವ ಶ್ರೀ ವೀರಭದ್ರೇಶ್ವರ. ಈ ದೇವರು ತನ್ನನ್ನು ನಂಬಿ ಬಂದ ಭಕ್ತರನ್ನು ಕೈ ಬಿಟ್ಟಿಲ್ಲ ಅಷ್ಟೊಂದು ನಂಬಿಕೆಯುಳ್ಳ ದೇವರು, ಈ ಮಾತಿಗೆ ಸಾಕ್ಷಿ ಎಂಬಂತೆ ಬಾಗಲಕೋಟ ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲದಲ್ಲಿರುವ ಪುರಾತನ ವೀರಭದ್ರೇಶ್ವರ ದೇವಸ್ಥಾನ ಭಕ್ತರ ಶ್ರದ್ದಾ ಕೇಂದ್ರವಾಗಿದೆ.
ಪೌರಾಣಿಕ ಹಾಗೂ ಐತಿಹಾಸಿಕ ಸ್ಥಾನಮಾನವನ್ನು ಹೊಂದಿರುವ ಕಂದಗಲ್ಲ ವೀರಭದ್ರೇಶ್ವರ ದೇವಸ್ಥಾನವು ಕನ್ನಡ ನಾಡಿನಲ್ಲಿ ರಾರಾಜಿಸುವ ಪುಣ್ಯಕ್ಷೆತ್ರಗಳಲ್ಲಿ ಒಂದು ಪ್ರಾಚೀನ ಕಾಲದಲ್ಲಿ ಸ್ಕಂದಶಿಲೆ, ಕಂದಗಾಲೆ ಎಂದು ಕರೆಯಲ್ಪಡುತ್ತಿತ್ತು ಕಂದಗಲ್ಲ ಗ್ರಾಮದಲ್ಲಿ ಬ್ರಹ್ಮ ರಾಕ್ಷಸರ ಉಪಟಳ ಹೆಚ್ಚಾಗಿತ್ತು. ರಾಕ್ಷಸರ ಹಿಂಸಾತ್ಮಕ್ ಕಾಟ ತಾಳಲಾರದೆ ಸ್ಕಂದಶಿಲೆಯ ಜನರು ಸಂಕಷ್ಟ ಪಡುತ್ತಿರುವಾಗ ದೇವಮಾನವ ಸ್ವರೂಪಿಯಾಗಿ ಋಷಿಯೋರ್ವರು ಸ್ಕಂದಶಿಲೆಗೆ ಆಗಮಿಸಿ ಬ್ರಹ್ಮ ರಾಕ್ಷಸರ ಕಾಟ ತಪ್ಪಿಸಿಕೊಳ್ಳಲು ಶಿವನನ್ನು ಪ್ರಾರ್ಥಿಸಿರಿ ಆತನಿಂದ ನಿಮ್ಮ್ ಕಷ್ಟ ಪರಿಹಾರವಾಗುತ್ತದೆ ಎಂದು ಹೇಳಿ ಪರಶಿವನನ್ನು ಒಲಿಸಿಕೊಳ್ಳುವ ನೇಮ್ ಹೇಳಿ ಋಷಿ ಮುನಿಯು ಮಾಯವಾಗುತ್ತಾನೆ ಸ್ಕಂದಶಿಲೆ ಪುರದ ಜನರು ಋಷಿಗಳು ಹೇಳಿದ ನಿಯಮಗಳ ಪ್ರಕಾರ ಶಿವನ ಧ್ಯಾನ ಮಾಡುತ್ತಾರೆ ಇವರ ಭಕ್ತಿಗೆ ಓಲಿದು ಶಿವನು ಪಾರ್ವತಿ ಸಮೇತ ಪ್ರತ್ಯಕ್ಷನಾಗಿ ಭಕ್ತರ ಕಷ್ಟ ಪರಿಹರಿಸಲು ವೀರಭದ್ರದೇವನನ್ನು ಕಳಿಸಿಕೊಡುತ್ತಾನೆ ಅಲ್ಲದೆ ಕಾಯಂ ಆಗಿ ಸ್ಕಂದಶಿಲೆಯಲ್ಲಿ ವಾಸವಾಗಿ ಭಕ್ತರನ್ನು ರಕ್ಷಿಸು ಎಂದು ಅಪ್ಪಣೆ ಮಾಡಿ ವೀರಭದ್ರದೇವರನ್ನು ಕಳಿಸಿಕೊಡುತ್ತಾನೆಂದು ಪೌರಾಣಿಕ ಹಿನ್ನೆಲೆ ಇದೆ.
ಐತಿಹಾಸಿಕವಾಗಿ ತಿಳಿದು ಬರುವದೇನೆಂದರೆ ಮೊದಲಿಗೆ ಬಯಲಿನಲ್ಲಿ ಪೂಜೆಗೊಳ್ಳುತ್ತಿದ್ದ ವೀರಭದ್ರದೇವರಿಗೆ ಕಲ್ಯಾಣ ಚಾಲುಕ್ಯ ಅರಸರಾದ ಎರಡನೇ ಜಗದೇಕಮಲ್ಲ ಹಾಗೂ ಎರಡನೇ ಚಾವುಡರಾಯರು ಕ್ರಿ ಶ 1012 ರಿಂದ 1015 ರಲ್ಲಿ ದೊಡ್ಡ ಹಾಸು ಬಂಡೆಗಳಲ್ಲಿ ನಿರ್ಮಿಸಿದ ಭವ್ಯ ದೇವಸ್ಥಾನ ಇದಾಗಿದ್ದು ಅಂದಿನಿಂದ ಇಂದಿನವರೆಗೆ ಭಕ್ತರ ಇಷ್ಟಾರ್ಥ ಪೂರೈಸುವ ಜಾಗ್ರತ ನಂಬಿಕೆಯುಳ್ಳ ದೇವರೆಂದು ಭಕ್ತರ ನಂಬಿಕೆಯಾಗಿದೆ ಈ ದೇವರ ಪವಾಡ ಇಂದೆಯೂ ಉಂಟು ಇಂದಿಗೂ ಉಂಟು ಎಂದು ಭಕ್ತರು ಮನದುಂಬಿ ಹೇಳುತ್ತಾರೆ ಹೀಗಾಗಿ ಕಂದಗಲ್ಲ ವೀರಭದ್ರ ದೇವರ ಮಹಿಮೆ ಎಲ್ಲೆಡೆ ಹರಡಿದ್ದು ರಾಜ್ಯ ಸೇರಿದಂತೆ ಮಹಾರಾಷ್ಟ್ರ, ಅಂದ್ರ, ತೆಲಂಗಾಣ, ತಮಿಳುನಾಡು ಹಾಗೂ ಇತರೆ ರಾಜ್ಯಗಳಲ್ಲಿ ಸಾಕಷ್ಟು ಜನ ಭಕ್ತರು ಇದ್ದು ಅವರೆಲ್ಲರೂ ವರ್ಷಕ್ಕೊಮ್ಮೆ ನೆಡೆಯುವ ವೀರಭದ್ರೇಶ್ವರ ಜಾತ್ರೆಗೆ ಭಕ್ತರ ದಂಡು ಆಗಮಿಸಿ ಭಕ್ತಿ ಸಲ್ಲಿಸಿ ಕ್ರತಾರ್ಥರಾಗುತ್ತಾರೆ.
ಕಂದಗಲ್ಲ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಡಿ 16 ಮತ್ತು 17 ರಂದು ನೆಡೆಯಲಿದೆ.
ಡಿ 16 ರಂದು ಕಾರ್ತಿಕೋತ್ಸವ ಡಿ 17 ರಂದು ಮಹಾರಥೋತ್ಸವವು ವಿವಿಧ ಮಠಗಳ ಶ್ರೀಗಳ ದಿವ್ಯ ಸನ್ನಿಧಿಯಲ್ಲಿ ವಿಜ್ರoಭಣೆಯಿಂದ ಜರುಗಲಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಜಾತ್ರಾ ಮಹೋತ್ಸವ ಸಮಿತಿಯವರು ಎರಡು ದಿನಗಳ ಕಾಲ ನಿರಂತರ ಅನ್ನ ಸಂತರ್ಪಣೆ ಏರ್ಪಡಿಸಿರುತ್ತಾರೆ. ಜಾತ್ರೆಯ ಅಂಗವಾಗಿ ಕಬಡ್ಡಿ, ಕ್ರಿಕೆಟ್, ಟಗರಿನ ಕಾಳಗ, ವಾಲಿಬಾಲ್, ವಚನ ಗಾಯನ ರಸಮಂಜರಿ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿವೆ.
ವರದಿ ವೀರೇಶ ಶಿಂಪಿ ಕಂದಗಲ್ಲ.
ವರದಿ : ದಾವಲ್ ಶೇಡಂ




