
ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಕಲಿಕೆಯ ಹಸಿವು ಹಾಗೂ ಅವರ ಕ್ರಿಕೆಟ್ ಫ್ಯಾಶನ್ ನಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ಭಾರತ ಟೆಸ್ಟ್ ತಂಡದ ನಾಯಕ ಶುಭಮಾನ್ ಗಿಲ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತೋರ್ವ ಕ್ರಿಕೆಟ್ ಲೆಜೆಂಡ್. ಅವರ ಕ್ರಿಕೆಟ್ ಮೇಲಿನ ಪ್ರೀತಿ, ಅವರ ಕ್ರಿಕೆಟ್ ಹಸಿವು, ಅವರು ತಮ್ಮ ಅಚ್ಚುಮೆಚ್ಚಿನ ಆಟಕ್ಕೆ ವಿನಿಯೋಗಿಸುವ ಸಮಯ ಹಾಗೂ ಅವರ ದೈಹಿಕ ಸಾಮರ್ಥ್ಯ ಎಲ್ಲದರಿಂದ ನಾನು ಪ್ರಭಾವಿತನಾಗಿ ಅವರಿಂದ ಕ್ರಿಕೆಟ್ ಕಲಿತಿದ್ದೇನೆ. ಕಲಿಯುತ್ತಿದ್ದೇನೆ ಎಂದು ಅವರು ಮಾಜಿ ಟೆಸ್ಟ್ ತಂಡದ ನಾಯಕನ ಕುರಿತು ಗುಣಗಾನ ಮಾಡಿದ್ದಾರೆ.




