ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮೇ 12 ರಂದು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಮೂಲಕ ಕ್ರೀಡಾಭಿಮಾನಿಗಳಿಗೆ ಆಘಾತ ನೀಡಿದ್ದು ಗೊತ್ತೆ ಇದೆ. 2014ಕ್ಕೆ ಟೆಸ್ಟ್ಗೆ ಪಾದರ್ಪಣೆ ಮಾಡಿದ ಕಿಂಗ್ಸ್ ಕೊಹ್ಲಿ ಹಲವಾರು ಸ್ಮರಣೀಯ ಇನ್ನಿಂಗ್ಸ್ಗಳನ್ನು ಆಡಿದಿದ್ದಾರೆ. ಅದೇಷ್ಟೋ ಪಂದ್ಯಗಳ ಗೆಲುವಿನ ಪ್ರಮುಖ ಪಾತ್ರವಹಿಸಿದ್ದಾರೆ.
ಇನ್ನೂ 2-3 ವರ್ಷಗಳ ಕಾಲ ಟೆಸ್ಟ್ನಲ್ಲಿ ಮುಂದುವರೆಯುವ ಸಾಮರ್ಥ್ಯ ಇದ್ದರು ವಿರಾಟ್, ದೀರ್ಘ ಸ್ವರೂಪಕ್ಕೆ ದಿಢೀರ್ ವಿದಾಯ ಹೇಳಿದ್ದು ಭಾರೀ ಸಂಚಲನ ಸೃಷ್ಟಿಸಿದೆ. ಅವರ ನಿವೃತ್ತಿಗೆ ಕಾರಣ ಏನು ಎಂದು ಫ್ಯಾನ್ಸ್ಗಳು ಹುಡುಕಾಟ ನಡೆಸಿದ್ದಾರೆ. ಆದರೆ, ಅವರ ನಿವೃತ್ತಿ ನಿರ್ಧಾರಕ್ಕೆ ಕೆಲ ಕಾರಣಗಳಿವೆ ಎಂದು ವಿವಿಧ ಮಾಧ್ಯಮಗಳಲ್ಲಿ ವರದಿಗಳು ಹರಿದಾಡುತ್ತಿವೆ. ಕೆಲ ವರದಿಗಳ ಪ್ರಕಾರ, ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ಗೆ ನಾಯಕತ್ವದ ಜವಾಬ್ದಾರಿಯನ್ನು ಮರಳಿ ನೀಡುವುದಾಗಿ ಬಿಸಿಸಿಐ ಭರವಸೆ ನೀಡಿತ್ತು ಆದರೆ ಗಿಲ ಹೆಸರು ಕೇಳಿ ಬತುತ್ತಿದ್ದರಿಂದ ವಿರಾಟ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವರದಿಯೊಂದರ ಪ್ರಕಾರ, ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಮತ್ತೊಮ್ಮೆ ಕೊಹ್ಲಿಗೆ ನಾಯಕತ್ವದ ಜವಾಬ್ದಾರಿಗಳನ್ನು ಹಸ್ತಾಂತರಿಸುವ ಪ್ರಸ್ತಾಪಗಳನ್ನು ಮಾಡಲಾಗಿತ್ತು. ಆ ಸರಣಿಯಲ್ಲಿ ಟೀಮ್ ಇಂಡಿಯಾ 3-1 ಅಂತರದಲ್ಲಿ ಸೋತ ನಂತರ, ಬಿಸಿಸಿಐ ನಾಯಕತ್ವದ ವಿಷಯದಲ್ಲಿ ಯು-ಟರ್ನ್ ತೆಗೆದುಕೊಂಡು ಯುವ ಆಟಗಾರರಿಗೆ ನಾಯಕತ್ವ ಜವಾಬ್ದಾರಿ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು ಎಂದು ವರದಿಯಾದ ಲೇಖನದಲ್ಲಿದೆ.
ಮತ್ತೊಮ್ಮೆ ನಾಯಕತ್ವ ವಹಿಸಿಕೊಳ್ಳುವ ಭರವಸೆಯೊಂದಿಗೆ ಕೊಹ್ಲಿ ದೆಹಲಿ ಪರ ರಣಜಿ ಪಂದ್ಯವನ್ನು ಆಡಿದ್ದರು ಎಂದು ಹೇಳಲಾಗುತ್ತದೆ. ಅಡಿಲೇಡ್ ಟೆಸ್ಟ್ ನಂತರ ಅವರ ಆಪ್ತರು ನಾಯಕತ್ವದ ಬಗ್ಗೆ ಸುಳಿವು ನೀಡಿದ್ದರು ಮತ್ತು ಅಂದಿನಿಂದ ವಿಷಯಗಳು ಬದಲಾಗಿವೆ ಎಂದು ಲೇಖನಗಳು ಹೇಳಿವೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು.
ನಿನ್ನೆಯಷ್ಟೇ ಮಾಜಿ ಕೋಚ್ ರವಿಶಾಸ್ತ್ರಿ ಸಹ ಕೊಹ್ಲಿ ನಿವೃತ್ತಿಗ್ಗೂ ಮುನ್ನ ತಮ್ಮೊಂದಿಗೆ ಮಾತನಾಡಿದ್ದರು ಎಂದು ತಿಳಿಸಿದ್ದರು. ಈ ವೇಳೆ ಕೊಹ್ಲಿಗೆ ನಿವೃತ್ತಿ ನಿರ್ಧಾರದ ಬಗ್ಗೆ ಪ್ರಶ್ನಿಸಿದಾಗ, ನಾನು ತಂಡಕ್ಕೆ ಏನೆಲ್ಲ ಕೊಡಬೇಕಿತ್ತು ಅದನ್ನು ಕೊಟ್ಟಿದ್ದೇನೆ. ಮತ್ತು ನನಗೆ ಯಾವುದೇ ಬೇಸರ ಇಲ್ಲ ಎಂದು ತಿಳಿಸಿದ್ದಾಗಿ ಶಾಸ್ತ್ರಿ ಕೊಹ್ಲಿ ಜೊತೆಗಿನ ಸಂಭಾಷಣೆ ಬಹಿರಂಗ ಪಡಿಸಿದ್ದರು.
ಕೊಹ್ಲಿ ಪ್ರಸ್ತುತ ಐಪಿಎಲ್ ಋತುವಿನ ಉಳಿದ ಪಂದ್ಯಗಳನ್ನು ಆಡಲು ತಯಾರಿ ನಡೆಸುತ್ತಿದ್ದಾರೆ. ಇಂದು ಕೋಲ್ಕತ್ತಾ ಮತ್ತು ಬೆಂಗಳೂರು ನಡುವಿನ ಪಂದ್ಯದೊಂದಿಗೆ 18ನೇ ಆವೃತ್ತಿ ಪುನರಾರಂಭಗೊಳ್ಳಲಿದೆ. ಇದುವರೆಗೆ ಒಮ್ಮೆಯೂ ಪ್ರಶಸ್ತಿ ಗೆಲ್ಲದ ತಂಡದ ಕನಸನ್ನು ಕೊಹ್ಲಿ ಈ ಬಾರಿ ನನಸಾಗಿಸುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.




