—————————–ಅಪ್ರತಿಮ ಸಾಧಕನ ಟೆಸ್ಟ್ ಕರಿಯರ್ ಯುಗಾಂತ್ಯ
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಕೊಹ್ಲಿ ಅವರ ಟೆಸ್ಟ್ ವೃತ್ತಿಜೀವನದಲ್ಲಿ ಈವರೆಗೂ 123 ಪಂದ್ಯಗಳನ್ನು ಆಡಿದ್ದು ಈ ಅವಧಿಯಲ್ಲಿ, ಅವರ 210 ಇನ್ನಿಂಗ್ಸ್‌ಗಳಲ್ಲಿ 9230 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳು ಸೇರಿವೆ. ನಿವೃತ್ತಿ ಬಗ್ಗೆ ಸ್ವತಃ ಕೊಹ್ಲಿ ಅವರೇ ಇನ್ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.






