Ad imageAd image

ಮುಂದಿನ ವಿಶ್ವಕಪ್ ಗೆಲ್ಲುವುದು ಪ್ರಮುಖ ಗುರಿ : ವಿರಾಟ್

Bharath Vaibhav
ಮುಂದಿನ ವಿಶ್ವಕಪ್ ಗೆಲ್ಲುವುದು ಪ್ರಮುಖ ಗುರಿ : ವಿರಾಟ್
WhatsApp Group Join Now
Telegram Group Join Now

ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್ (IPL)ನಲ್ಲಿ ಬ್ಯುಸಿ ಆಗಿದ್ದಾರೆ. ಆರ್​ಸಿಬಿ ತಂಡ ಪ್ರತಿನಿಧಿಸುತ್ತಿರುವ ಅವರು ಈ ಋತುವಿನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಈವರೆಗೂ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಉತ್ತಮ ಸ್ಕೋರ್​ ಕಲೆ ಹಾಕಿದ್ದು ಗುಜರಾತ್​ ವಿರುದ್ಧ ನಡೆದ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ಪೆವಿಲಿಯನ್​ ಸೇರಿದ್ದರು. ಇದೀಗ ಭಾನುವಾರ ಮುಂಬೈ ಇಂಡಿಯನ್ಸ್​ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಕೊಹ್ಲಿ ಸಿದ್ಧತೆ ನಡೆಸುತ್ತಿದ್ದಾರೆ.

ಈ ಮಧ್ಯೆ, ಕೊಹ್ಲಿ ಫ್ಯಾನ್ಸ್​ಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಇದರಿಂದಾಗಿ ದೊಡ್ಡ ಆತಂಕ ದೂರವಾಗಿದೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಸಂಬಂಧಿಸಿದಂತೆ ಬಿಗ್​ ಅಪ್​ಡೇಟ್​ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ನಿರೂಪಕರು ವಿರಾಟ್‌ಗೆ, “ನಿಮ್ಮ ವೃತ್ತಿಜೀವನದ ಮುಂದಿನ ದೊಡ್ಡ ಗುರಿ ಯಾವುದು? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ,”ವಿಶ್ವಕಪ್ ಗೆಲ್ಲುವುದು ನನ್ನ ದೊಡ್ಡ ಗುರಿ” ಎಂದರು. ಇದರೊಂದಿಗೆ, 2027ರ ಏಕದಿನ ವಿಶ್ವಕಪ್‌ವರೆಗೂ ತಂಡದಲ್ಲಿ ಮುಂದುವರೆಯುವ ಸುಳಿವು ನೀಡಿದ್ದಾರೆ. ಕೊಹ್ಲಿಯ ಉತ್ತರ ಕೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ನರೆದಿದ್ದ ಪ್ರೇಕ್ಷಕರು ಚಪ್ಪಾಳೆ ಬಾರಿಸಿದರು.

ಭಾರತ ಇತ್ತೀಚೆಗೆ 2025ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಸ್ವರೂಪಕ್ಕೆ ವಿದಾಯ ಹೇಳುತ್ತಾರೆಂದು ಜನ ಭಾವಿಸಿದ್ದರು. ಕಳೆದ ವರ್ಷ ಟಿ20 ವಿಶ್ವಕಪ್​ ಗೆದ್ದ ಬಳಿಕ ಕೊಹ್ಲಿ, ರೋಹಿತ್​, ಜಡೇಜಾ ಈ ಸ್ವರೂಪಕ್ಕೆ ವಿದಾಯ ಹೇಳಿದ್ದರು.

2027 ವಿಶ್ವಕಪ್ಎಲ್ಲಿ ನಡೆಯಲಿದೆ: ಏಕದಿನ ವಿಶ್ವಕಪ್ 2027ರಲ್ಲಿ ನಡೆಯಲಿದೆ. ಈ ಪ್ರತಿಷ್ಠಿತ ಟೂರ್ನಿಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯ ವಹಸಿಕೊಳ್ಳಲಿವೆ. ಭಾರತದಲ್ಲಿ ನಡೆದ 2023ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಫೈನಲ್​ನಲ್ಲಿ ಸೋಲನ್ನು ಕಂಡಿತ್ತು.

ಕೊಹ್ಲಿ ಏಕದಿನ ದಾಖಲೆ: ವಿರಾಟ್​ ಕೊಹ್ಲಿ ಏಕದಿನ ಮತ್ತು ಟೆಸ್ಟ್​ ಸ್ವರೂಪದಲ್ಲಿ ಭಾರತ ತಂಡ ಪ್ರತಿನಿಧಿಸುತ್ತಿದ್ದಾರೆ. ಈವರೆಗೂ 302 ಏಕದಿನ ಪಂದ್ಯಗಳನ್ನು ಆಡಿದ್ದು, 290 ಇನ್ನಿಂಗ್ಸ್​ಗಳಲ್ಲಿ 14,181 ರನ್​​ ಕಲೆಹಾಕಿದ್ದಾರೆ. ಇದರಲ್ಲಿ 51 ಶತಕ 74 ಅರ್ಧಶತಕ ಸೇರಿವೆ. 183 ಹೈಸ್ಕೋರ್​ ಆಗಿದೆ.

WhatsApp Group Join Now
Telegram Group Join Now
Share This Article
error: Content is protected !!