Ad imageAd image

ಬಿಸಿಸಿಐ ನಿಯಮದ ಬಗ್ಗೆ ವಿರಾಟ್ ಕೊಹ್ಲಿ ಬೇಸರ

Bharath Vaibhav
ಬಿಸಿಸಿಐ ನಿಯಮದ ಬಗ್ಗೆ ವಿರಾಟ್ ಕೊಹ್ಲಿ ಬೇಸರ
WhatsApp Group Join Now
Telegram Group Join Now

ಪಿಎಲ್‌ 2025ರ ಆವೃತ್ತಿಗೆ ಇನ್ನು ಕೆಲವೇ ದಿನಗಳಿದ್ದು ಎಲ್ಲಾ ತಂಡಗಳು ಅಭ್ಯಾಸ ಆರಂಭಿಸಿವೆ. ವಿರಾಟ್ ಕೊಹ್ಲಿ ಕೂಡ ಬೆಂಗಳೂರಿಗೆ ಬಂದಿದ್ದು ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಕೊಹ್ಲಿ ಅಭ್ಯಾಸ ಆರಂಭಿಸುವ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇನ್ನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್‌ ಸಮಿಟ್‌ನಲ್ಲಿ ಭಾಗವಹಿಸಿದ್ದು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಐಪಿಎಲ್‌ ಪಂದ್ಯಗಳ ಸಂದರ್ಭದಲ್ಲಿ ಆಟಗಾರರು ಕುಟುಂಬಸ್ಥರ ಜೊತೆ ಇರಬಾರದು ಎನ್ನುವ ಬಿಸಿಸಿಐ ನಿಯಮದ ಬಗ್ಗೆ ವಿರಾಟ್ ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಆಟಗಾರರ ಕಠಿಣ ಸಮಯದಲ್ಲಿ ಕುಟುಂಬಸ್ಥರು ಜೊತೆಗೆ ಇದ್ದರೆ ಸಮತೋಲನ ಸಾಧಿಸಲು ಸಹಾಯವಾಗುತ್ತದೆ ಎಂದು ಹೇಳಿರುವುದಾಗಿ ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 3-1 ಅಂತರದಲ್ಲಿ ಸೋತ ನಂತರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರವಾಸಗಳಲ್ಲಿ ಆಟಗಾರರರು ಕುಟುಂಬದವರ ಜೊತೆ ಇರುವುದ್ಕೆ ಕಠಿಣ ನಿಯಮಗಳನ್ನು ರೂಪಿಸಿದೆ. 45 ದಿನಗಳಿಗಿಂತ ಹೆಚ್ಚಿನ ದಿನ ಪ್ರವಾಸ ಕೈಗೊಂಡಾಗ ಮೊದಲ ಎರಡು ವಾರಗಳ ಬಳಿಕ ಮಾತ್ರ ಆಟಗಾರರ ಕುಟುಂಬದವರು, ಹೆಂಡತಿ ಮತ್ತು ಮಕ್ಕಳು 14 ದಿನಗಳವರೆಗೆ ಮಾತ್ರ ಜೊತೆಯಲ್ಲಿ ಇರಬಹುದು ಎಂದು ಎಂದು ತಿಳಿಸಿದೆ.

ಕಡಿಮೆ ಅವಧಿಯ ಪ್ರವಾಸದಲ್ಲಿ ಆಟಗಾರರು ಒಂದು ವಾರದವರೆಗೆ ಅವರ ಕುಟುಂಬಗಳೊಂದಿಗೆ ಇರಬಹುದಾಗಿದೆ.  ಹೊರಗೆ ನಡೆಯುವ ಯಾವುದೇ ತೀವ್ರವಾದ ಘಟನೆಗಳ ಸಮಯದಲ್ಲಿ ನಿಮ್ಮ ಕುಟುಂಬದವರು ಜೊತೆಗಿಲ್ಲದೇ ಇದ್ದರೆ ಎಷ್ಟು ಹಿಂಸೆಯಾಗುತ್ತದೆ ಎಂದು ವಿವರಿಸುವುದು ತುಂಬಾ ಕಷ್ಟ ಎಂದು ಹೇಳಿದರು. ಕುಟುಂಬದವರು ಯಾವ ರೀತಿಯ ವಿಶ್ವಾಸ ತರುತ್ತಾರೆ ಎನ್ನುವುದು ಅವರಿಗೆ ತಿಳಿದಿದೆ ಎನಿಸಲ್ಲ.

ಆ ನಿಯಮದ ಬಗ್ಗೆ ನನಗೆ ನಿರಾಸೆಯಾಗಿದೆ, ಪ್ರವಾಸದ ಸಮಯದಲ್ಲಿ ಕಳಪೆ ಪ್ರದರ್ಶನದ ಬಳಿಕ ಯಾವುದೇ ಆಟಗಾರ ಒಂಟಿಯಾಗಿ ಕೂತು ದುಃಖಪಡಲು ಬಯಸಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದರು.

WhatsApp Group Join Now
Telegram Group Join Now
Share This Article
error: Content is protected !!