ಉತ್ತರಪ್ರದೇಶ : ಭಾರತ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ, ತಮ್ಮ ಪತ್ನಿ ನಟಿ ಅನುಷ್ಕಾ ಶರ್ಮಾ ಜೊತೆ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರ ಮತ್ತು ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ದಂಪತಿಗಳು ಪ್ರಾರ್ಥನೆ ಸಲ್ಲಿಸುತ್ತಿರುವ ಹಲವಾರು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಇತ್ತೀಚೆಗೆ ಪತ್ನಿ ಸಮೇತ ಈ ತಿಂಗಳ ಆರಂಭದಲ್ಲಿ ಆಧ್ಯಾತ್ಮಿಕ ಗುರು ಪ್ರೇಮಾನಂದ್ ಜಿ ಮಹಾರಾಜ್ ಅವರಿಂದ ಆಶೀರ್ವಾದ ಪಡೆಯಲು ವೃಂದಾವನಕ್ಕೆ ಭೇಟಿ ನೀಡಿದ್ದರು.ಇದಾದ ನಂತರ ಈಗ ವಿರಾಟ್ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ದೇವಾಲಯ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ದಾಸ್ ಜಿ ಮಹಾರಾಜ್ ಮಹಂತ್, ಹನುಮಾನ್ ಗರ್ಹಿ, “ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಿಗೆ ಆಧ್ಯಾತ್ಮಿಕತೆ, ಸಂಸ್ಕೃತಿ, ದೇವರು ಮತ್ತು ಸನಾತನ ಧರ್ಮದ ಬಗ್ಗೆ ಆಳವಾದ ಪ್ರೀತಿ ಇದೆ. ಅವರು ಭಗವಾನ್ ರಾಮಲಲ್ಲಾ ದೇಗುಲಕ್ಕೆ ಭೇಟಿ ನೀಡಿ ನಂತರ ಭಗವಾನ್ ಹನುಮಂತನಿಂದ ಆಶೀರ್ವಾದ ಪಡೆದರು. ಅವರು ಇಲ್ಲಿ ಆಧ್ಯಾತ್ಮಿಕತೆ ಮತ್ತು ಪೌರಾಣಿಕ ವಿಷಯಗಳನ್ನು ಸಹ ಚರ್ಚಿಸಿದರು…” ಎಂದರು




