ಕ್ರಿಕೆಟ್ ಸ್ಟಾರ್‌ಗಳು, ಸಿನಿ ತಾರೆಯರು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಕುಂಭಮೇಳದ ಕೊನೇ ದಿನದ ವೇಳೆ ಕ್ರಿಕೆಟಿಗ ಕಿಂಗ್ ಕೊಹ್ಲಿ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಅವರು ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಬಗ್ಗೆ ಬಹುತೇಕರಲ್ಲಿ ಪ್ರಶ್ನೆ ಮೂಡಿರಬಹುದು. ಹಾಗಾದ್ರೆ ಸತ್ಯಾಸತ್ಯತೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇತ್ತೀಚೆಗಷ್ಟೇ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಕ್ಕೆ ಪಾಕಿಸ್ತಾನ ಸೋಲುಂಡಿತ್ತು. ಈ ಪಂದ್ಯದ ವೇಳೆ ಮಿಲ್ಕಿ ಬ್ಯೂಟಿ ತಮನ್ನಾ ಅವರು ವಿರಾಟ್ ಕೊಹ್ಲಿ ಅವರ ಜೊತೆ ಮಾತನಾಡಿದ್ದಾರೆ ಎನ್ನುವ ರೀತಿಯಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು.
ಇದೀಗ ಕುಂಭ ಮೇಳದಲ್ಲಿ ವಿರಾಟ್ ಹಾಗೂ ನಟಿ ತಮನ್ನಾ ಅವರು ಕುಂಭಮೇಳದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಲಾತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಸರ್ಕಾರಿ ನೌಕರರಿಗೆ ಶಿವರಾತ್ರಿಯಲ್ಲಿ ಸಿಹಿಸುದ್ದಿ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಆಗಿರುವ ವಿರಾಟ್ ಕೊಹ್ಲಿ ಹಾಗೂ ನಟಿ ತಮನ್ನಾ ಭಾಟಿಯಾ ಒಟ್ಟಿಗೆ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಫೋಟೋ ಭಾರೀ ವರಲ್ ಆಗುತ್ತಿದೆ.
ಈ ಬೆನ್ನಲ್ಲೇ ಇಬ್ಬರ ನಡುವೆಯೇ ಇಬ್ಬರ ಸಂಬಂಧದ ಬಗ್ಗೆ ನೆಟ್ಟಿಗರು ಭಾರೀ ಟ್ರೋಲ್ ಮಾಡುತ್ತಿದ್ದಾರೆ. ‘ತಮನ್ನಾಭಾಟಿಯಾ ಮತ್ತು ವಿರಾಟ್ ಕೊಹ್ಲಿ ಮಹಾ ಕುಂಭಮೇಳದಲ್ಲಿ’ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಫೇಸ್‌ಬುಕ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಈ ಫೋಟೋದೊಂದಿಗೆ ಹಾಕಲಾಗಿದ್ದು, ಈ ಫೇಸ್‌ಬುಕ್ ಪೋಸ್ಟ್‌ಗೆ ಈವರೆಗೂ 50,000ಕ್ಕೂ ಅಧಿಕ ಮೆಚ್ಚುಗೆಗಳು ಬಂದಿವೆ.
ಇನ್ನು ವಿರಾಟ್ ಕೊಹ್ಲಿ ಹಾಗೂ ತಮನ್ನಾ ಅವರ ಫೋಟೋದಲ್ಲಿ ಮೊದಲ ನೋಟದಲ್ಲೇ ಅಸ್ವಾಭಾವಿಕತೆ ಕಾಣಬಹುದು. ಇಬ್ಬರ ಮುಖವೂ ಅಸಾಧಾರಣವಾಗಿದೆ. ಇದು ಎಐ ಟೂಲ್ ಬಳಸಿ ತಯಾರಿಸಿದ ಫೋಟೋ ಎಂಬಂತೆ ಕಾಣುತ್ತಿದೆ. ಯಾಕೆಂದರೆ ಈಗಾಗಲೇ ತುಂಬಾ ನಟ, ನಟಿಯರು, ಸ್ಟಾರ್‌ಗಳ ಫೋಟೋಗಳು ಎಐ ಟೂಲ್‌ನಲ್ಲಿ ಕ್ರಿಯೆಟ್ ಆಗಿರುವ ಉದಾಹರಣೆಗಳಿವೆ. ಇವುಗಳು ಸಖತ್ ವೈರಲ್ ಆಗಿವೆ. ಹಾಗೆಯೇ ಇದೀಗ ವಿರಾಟ್ ಹಾಗೂ ತಮನ್ನಾ ಭಾಟಿಯಾ ಅವರ ಫೋಟೋ ಕೂಡ ಭಾರೀ ವೈರಲ್ ಆಗುತ್ತಿದ್ದಂತೆ ಈ ಫೋಟೋ ಎಐ ಹೌದೋ ಅಲ್ಲವೋ ಎಂದು ಪರಿಶೀಲನೆ ನಡೆಸಲಾಯಿತು. ಕೊಹ್ಲಿಯ ಕುತ್ತಿಗೆಯ ರುದ್ರಾಕ್ಷಿ ಮಾಲೆ ಮುರಿದಂತೆ ಕಾಣುತ್ತಿರುವುದು ಇದೀಗ ಅನುಮಾನಕ್ಕೆ ಕಾರಣವಾಗಿದೆ. ಕುಂಭಮೇಳ ಮೊನಾಲಿಸಾಗೆ ಹೊಸ ಸಂಕಷ್ಟ!” ಫೋಟೋವನ್ನು ಕೃತಕ ಬುದ್ಧಿಮತ್ತೆ (ಎಐ) ಸಾಧನಗಳನ್ನು ಬಳಸಿ ತಯಾರಿಸಲಾಗಿದೆಯೇ ಎಂದು ಎಐ ಡಿಟೆಕ್ಷನ್ ಟೂಲ್‌ಗಳ ಸಹಾಯದಿಂದ ಪರಿಶೀಲಿಸಲಾಯಿತು. ಈ ಫ್ಯಾಕ್ಟ್ ಚೆಕ್‌ನಲ್ಲಿ ದೊರೆತ ಫಲಿತಾಂಶಗಳು ಈ ಫೋಟೋ ಎಐ ನಿರ್ಮಿತ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿದುಬಂದಿದೆ. ಹೀಗೆ ನಟಿ ತಮನ್ನಾ ಭಾಟಿಯಾ ಮತ್ತು ವಿರಾಟ್ ಕೊಹ್ಲಿ ಮಹಾ ಕುಂಭಮೇಳದಲ್ಲಿ ಒಟ್ಟಿಗೆ ಭಾಗವಹಿಸಿರುವ ಚಿತ್ರವು ತಪ್ಪುದಾರಿಗೆಳೆಯುವ ಮತ್ತು ಎಐ ನಿರ್ಮಿತವಾಗಿದೆ. ಇದೇ ರೀತಿಯ ಹಲವು ಎಐ ಚಿತ್ರಗಳು ಮಹಾ ಕುಂಭಮೇಳದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇತ್ತೀಚೆಗಷ್ಟೇ ನ್ಯಾಷನಲ್ ಕ್ರಷ್ ಅಂತಲೇ ಹೆಸರುವಾಸಿಯಾಗಿರುವ ನಟಿ ರಷ್ಮಿಕಾ ಮಂದಣ್ಣ ಅವರ ಡಿಫೇಕ್ ಮಾಡಿರುವ ವಿಡಿಯೋಗಳು ಕೂಡ ಇದೇ ರೀತಿ ವೈರಲ್ ಆಗಿದ್ದವು. ನಟಿ ರಶ್ಮಿಕಾ ಮಂದಣ್ಣ ಕೆಂಪು ಬಿಕಿನಿಯಲ್ಲಿ ಜಲಪಾತದ ಬಳಿ ಪೋಸ್ ನೀಡಿದ ವೀಡಿಯೋ ಎಂದು ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಬಳಿಕ ಈ ವೀಡಿಯೋವನ್ನು ಎಐ ಪತ್ತೆ ಸಾಧನವಾದ ಟ್ರೂಮೀಡಿಯಾ ಮೂಲಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ವೇಳೆ ಇದನ್ನು ತಿರುಚಲ್ಪಟ್ಟ ಬಗ್ಗೆ ಸಾಕಷ್ಟು ಪುರಾವೆಗಳಿರುವುದು ಕಂಡುಬಂದಿತ್ತು.




