ಚಿಕ್ಕೋಡಿ: ವಿರಾಟ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಜನವರಿ ೩ ರಂದು ಸಂಜೆ ಇಲ್ಲಿನ ಕಿವಡ ಮೈದಾನದಲ್ಲಿ ವಿರಾಟ ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಚಾಲನಾ ಸಮಿತಿ ಪ್ರಕಟಣೆ ತಿಳಿಸಿದೆ.
ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರರ‍್ತಿ ಸೂಲಿಬೆಲೆ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸುವರು.
ಸಂಚಾಲನಾ ಸಮಿತಿ ಅಧ್ಯಕ್ಷ ಜಗದೀಶ ಕವಟಗಿಮಠ, ಉಪಾಧ್ಯಕ್ಷ ಸುಭಾಷ ಕವಲಾಪುರೆ, ಶ್ರೀಫಾಲ ಮುನ್ನೋಳಿ, ಅನಿಲ ಮಾನೆ, ಸಂಜಯ ಅರಗಿ, ಪ್ರವೀಣ ಕಾಂಬಳೆ, ಶಾಂಭವಿ ಅಶ್ವಥಪುರ, ಶಿವಪುತ್ರಪ್ಪ ಜತ್ತಿ, ಬಾಹುಬಲಿ ನಸಲಾಪುರೆ, ರಮೇಶ, ವಿನಾಯಕ ಬನಹಟ್ಟಿ, ಸದಾಶಿವ ಮಾಳಿ, ಸುರ‍್ಶನ್ ತಮ್ಮಣ್ಣವರ, ರಾಜು ದೀಕ್ಷಿತ್, ಪ್ರಾಣೇಶ ಕೌಜಲಗಿ ಭಾಗವಹಿಸುವರು.
ಮಧ್ಯಾಹ್ನ ಶೋಭಾಯಾತ್ರೆ: ಸಮಾವೇಶದ ನಿಮಿತ್ತ ಅಂದು ಮಧ್ಯಾಹ್ನ ಪಟ್ಟಣದ ಬಸವೇಶ್ವರ ವೃತ್ತದಿಂದ ಶೋಭಾಯಾತ್ರೆ ಹೊರಡುವುದು, ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವವರು ೩೦ ನಿಮಿಷ ಮುಂಚಿತವಾಗಿ ಸ್ಥಳದಲ್ಲಿ ಉಪಸ್ಥಿತರಿರುವಂತೆ ಸಂಚಾಲನಾ ಸಮಿತಿ ಪ್ರಕಟಣೆ ತಿಳಿಸಿದೆ.




