Ad imageAd image

ಬೇಡಕಿಹಾಳದಲ್ಲಿ ಡೊಳ್ಳುವಾದ್ಯದೊಂದಿಗೆ ಬಂಗಾರದ ಒಡೆಯ ವಿಠ್ಠಲ ಬೀರದೇವರ ವಿಶಾಳಿಜಾತ್ರೆ ಸಂಪನ್ನ

Bharath Vaibhav
ಬೇಡಕಿಹಾಳದಲ್ಲಿ ಡೊಳ್ಳುವಾದ್ಯದೊಂದಿಗೆ ಬಂಗಾರದ ಒಡೆಯ ವಿಠ್ಠಲ ಬೀರದೇವರ ವಿಶಾಳಿಜಾತ್ರೆ ಸಂಪನ್ನ
WhatsApp Group Join Now
Telegram Group Join Now

ನಿಪ್ಪಾಣಿ : ಹಾಲುಮತ ಸಮಾಜವೆಂದರೆ ಬೀರದೇವರ ಅಪರಿಮಿತ ಭಕ್ತ ಸಾಗರವೇ ಹೌದು. ಭಂಡಾರದ ಒಡೆಯನನ್ನು ಹೆಗಲ ಮೇಲೆ ಹೊತ್ತು ನರ್ತಿಸುತ್ತ ಭಂಡಾರ ಎರಚುತ್ತ ಕೈಯಲ್ಲಿ ಕತ್ತಿ ಹಿಡಿದು, ಭವಿಷ್ಯ ವಾಣಿ ನುಡಿಯುವ ಪರಂಪರೆ ಮುನ್ನಡೆಸುವುದರೊಂದಿಗೆ, ಭಕ್ತಿಯ ಪರಾಕಾಷ್ಟೆ ಮೆರೆಯುವ ಪರಂಪರೆ. ಹಾಗಾದರೆ ಬನ್ನಿ ವೀಕ್ಷಕರೇ ನಿಪ್ಪಾಣಿ ತಾಲೂಕಿನ ಬೇಡಕಿ ಹಾಳ ಹಾಗೂ ಚಾಂದಶಿರದವಾಡ ಗ್ರಾಮಗಳ ಹಾಲುಮತ ಸಮಾಜದ ಆರಾಧ್ಯ ದೇವರುವಿಠ್ಠಲ ಬೀರದೇವ ಹಾಗೂ ಮಹಾಲಕ್ಷ್ಮಿದೇವಿಯ ವಿಶಾಳಿ ಅಮಾವಾಸ್ಯೆಯಂದು ರವಿವಾರ ದೂದಗಂಗಾ ನದಿ ದಡದಲ್ಲಿ ದೇವರ ಸ್ನಾನ, ಭೆಟ್ಟಿ ಹಾಗೂ ಪಲ್ಲಕ್ಕಿ ಉತ್ಸವ ನೋಡುಗರ ಕನ್ಮನ ಸೆಳೆದಿದ್ದು ಬಿವಿ 5 ನ್ಯೂಸ್ ಕನ್ನಡ ವಾಹಿನಿಯ ವರದಿಗಾರರು ಸುಂದರ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ ನಾವು ತೋರಿಸ್ತಿವಿ ನೋಡಿ …….. ವಿಡಿಯೋ ಪ್ಲೇ ಮಾಡಿ….. ರವಿವಾರ ಬೆಳಗಿನ ಜಾವ ರಾಮನಗರದಲ್ಲಿಯ ಮಂದಿರದಲ್ಲಿ ದೇವಋಷಿ ನಾಗಪ್ಪ ಕೋರೆ ಮಾಯಪ್ಪ ಕೋರೆ ಹಾಗೂ ವಿಠ್ಠಲ್ ಕೋರೆಯವರ ಹಸ್ತದಿಂದ ಅಭಿಷೇಕ ಪೂಜೆ ನಡೆಯಿತು.

ತದನಂತರ ಪಲ್ಲಕ್ಕಿ ಉತ್ಸವ ಪ್ರಾರಂಭವಾಯಿತು. ಪಲ್ಲಕ್ಕಿ ದೂದಗಂಗಾ ನದಿ ಕಟ್ಟಿಗೆ ತಲುಪುತ್ತಿದ್ದಂತೆ ಭಕ್ತರ ವತಿಯಿಂದ ದೇವರ ಸ್ನಾನ ಪಾದಪೂಜೆ ಹಾಗೂ ಆರತಿ ಮುಗಿಯುತ್ತಿದ್ದಂತೆ ಕಾಶಿ ಲಿಂಗ ದೇವರು, ವಿಟ್ಟಲ ಬೀರ ದೇವರು ಹಾಗೂ ಮಹಾಲಕ್ಷ್ಮಿ ಹೆಸರಿಗೆ ಚಾಂಗಬಲೋ ಎನ್ನುತ್ತಾ ಭಂಡಾರ ಹಾರಿಸಿ ಪಲ್ಲಕ್ಕಿ ಎತ್ತಿ ಹಿಡಿದು ನೃತ್ಯದೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು. ಇದೇ ವೇಳೆ ಚಾಂದ ಶಿರದವಾಡ ಗ್ರಾಮದ ಮಹಾಲಕ್ಷ್ಮಿ ದೇವರ ಪಲ್ಲಕ್ಕಿಗಳು ಆಗಮಿಸಿ ಭೆ ಟ್ಟಿಯಾಗಿ ಉತ್ಸವದಲ್ಲಿ ಪಾಲ್ಗೊಂಡವು.ಉತ್ಸವದ ನಂತರ ಮಹಾಪ್ರಸಾದ ಕಾರ್ಯಕ್ರಮ ಜರುಗಿತು ಕಾರ್ಯಕ್ರಮದಲ್ಲಿ ಮಮದಾಪುರದ ಬಾಳಾ ಸಾಹೇಬ ಕದಂ, ಚಂದ್ರಕಾಂತ ಡೋನೆ ಅಶೋಕ್ ಘಾಟಗೆ ಜನಗೊಂಡ ಪಾಟೀಲ್ ಮಾಳುಕೋರೆ ಸೇರಿದಂತೆ ಬೇಡಕೀಹಾಳ ಶಿರದವಾಡ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವರದಿ : ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!