Ad imageAd image

ಅದ್ದೂರಿಯಾಗಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ .

Bharath Vaibhav
ಅದ್ದೂರಿಯಾಗಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ .
WhatsApp Group Join Now
Telegram Group Join Now

ನಿಪ್ಪಾಣಿ :  12ನೇ ಶತಮಾನದ ವಿಶ್ವಗುರು ಬಸವೇಶ್ವರರ ತತ್ವ ವಿಚಾರಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಮಾನವನ ಬದುಕಿನಲ್ಲಿ ಸಮಾನತೆಯ ಹಕ್ಕನ್ನು ತಂದು ಕೊಟ್ಟವರು ಬಸವಣ್ಣನವರು.ಇಂತಹ ಬಸವಣ್ಣನವರ ಜಯಂತಿ ಆಚರಿಸುವುದು ನಮ್ಮೆಲ್ಲರ ಭಾಗ್ಯ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬೇಡಕಿಹಾಳ ಗ್ರಾಮದ ಶ್ರೀ ಬಸವೇಶ್ವರ ಯುವಕ ಮಂಡಳ ಹಾಗೂ ಕಿತ್ತೂರು ಕದಳಿ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಬಸವೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಬೆಳಗಿನ ಜಾವ ಶಿವಾನಂದ ಸ್ವಾಮಿಗಳ ಹಸ್ತದಿಂದ ಮಹಾದೇವನಿಗೆ ಮಹಾಭಿಷೇಕ ಹಾಗೂ ಬಸವಣ್ಣನವರ ಪ್ರತಿಮೆ ಪೂಜೆ ನಡೆಯಿತು. ಬೆಳಿಗ್ಗೆ 8:30ಕ್ಕೆ ಬಸವೇಶ್ವರ ಯುವಕ ಮಂಡಲದ ಕಾರ್ಯಕರ್ತರಿಂದ ಶ್ರೀ ಕ್ಷೇತ್ರ ಕೂಡಲಸಂಗಮದಿಂದ ಬಸವ ಜ್ಯೋತಿಯನ್ನು ತರಲಾಯಿತು. ಹೊಸ ಬಸ್ ನಿಲ್ದಾಣ ಬಳಿ ಬಸವ ಜ್ಯೋತಿ ಆಗಮಿಸಿದಾಗ ಶಿವಾನಂದ ಹಾಗೂ ಉಮೇಶ ಸ್ವಾಮಿಯವರಿಂದ ಆರತಿ ಬೆಳಗಿ ಬಸವ ಜ್ಯೋತಿಗೆ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಗ್ರಾಮದ ಗಣ್ಯರು ಬಸವಜ್ಯೋತಿಗೆ ಆರತಿ ಬೆಳಗಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಹೊಸ ಬಸ ನಿಲ್ದಾಣದಿಂದ ಹೊರಟಿದ್ದ ಮೆರವಣಿಗೆಯಲ್ಲಿ ಕರಂಡೋಳು ಹಲಗಿ ವಾದ್ಯ ಹಾಗೂ ಡೊಳ್ಳು ವಾದನ ಹಾಗೂ 5ಅಡಿ ಎತ್ತರದ ಬಸವಲಿಂಗ 5ಜೋಡಿ ಎತ್ತುಗಳ ಸಮಾವೇಶದೊಂದಿಗೆ *ಸಂಗಮ ಬಂತಯ್ಯ ಕೂಡಲಸಂಗಮ ಬಂತಯ್ಯ… ಮೂರು ಬಟ್ಟ ಆ ವಿಭೂತಿಯೊಳಗ ಸಂಗಯ್ಯ ಅಡಿಗ್ಯಾನ*ಎಂಬ ಭಕ್ತಿಗೀತೆಯ ಮಧ್ಯೆ ಸಾಗಿದ ಮೆರವಣಿಗೆ ನೋಡುಗರ ಕಣ್ಮನ ಸೆಳೆಯಿತು.

ಬೆಳಿಗ್ಗೆ 10 ಗಂಟೆಗೆ ಸಿದ್ದೇಶ್ವರ ಮಂದಿರದಲ್ಲಿ ಬಸವೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಬಸವಣ್ಣನವರಿಗೆ ಆರತಿ ಬೆಳಗಿ ತೊಟ್ಟಿಲ ತೂಗುವ ಕಾರ್ಯಕ್ರಮ ನಡೆಯಿತು ಇದೇ ಸಂದರ್ಭದಲ್ಲಿ ಆರತಿ ಶಿವಾನಂದ ಸ್ವಾಮಿ ಹಾಗೂ ವರ್ಷ ರಾಜೀವ್ ಸ್ವಾಮಿ ದಂಪತಿಗಳಿಂದ ಬಸವಣ್ಣನವರಿಗೆ ನಾಮಕರಣ ನಡೆಯಿತು ತದನಂತರ ಭಕ್ತರಿಂದ ಜೋಗುಳ ಪದ ಮಂಗಳಾರತಿ ಹಾಗೂ ಪುಷ್ಪವೃಷ್ಠಿಯೊಂದಿಗೆ ನಾಮಕರಣ ಸಮಾರಂಭ ಪೂರ್ಣಗೊಂಡಿತು ಬಸವೇಶ್ವರ ನಾಮಕರಣದ ನಂತರ ನಾಮಕರಣಕ್ಕೆ ಸೇರಿದ ಸಾವಿರಾರು ಶರಣ ಭಕ್ತರಿಗೆ ಶುಂಠಿ ಸಕ್ಕರೆ ಕೂಬ್ಬರಿ ಹಾಗೂ ಗುಗ್ಗರಿ ಹಂಚಲಾಯಿತು.

ಬಸವಣ್ಣನವರ ನಾಮಕರಣ ಸಮಾರಂಭದಲ್ಲಿ ಶಮನೇವಾಡಿ ಬೇಡಕಿಹಾಳ ಜನವಾಡ ಗ್ರಾಮದಿಂದ ಸಾವಿರಾರು ಶರಣರು, ಮುತ್ತೈೆದೆ ಯರು ಭಾಗವಹಿಸಿದ್ದರು. ನಾಳೆ ಗುರುವಾರ ಬಸವ ಜಯಂತಿ ಪ್ರಯುಕ್ತ 20ಸಾವಿರಕ್ಕೂ ಅಧಿಕ ಭಕ್ತರಿಗೆ ಮಹಾಪ್ರಸಾದ ವಿತರಣೆ ಸಮಾರಂಭ ನಡೆಯಲಿದೆ ಎಂದು ಬಸವೇಶ್ವರ ಕಮಿಟಿ ಅಧ್ಯಕ್ಷರು ತಿಳಿಸಿದ್ದಾರೆ.

ವರದಿ: ಮಹಾವೀರ ಚಿಂಚಣೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!