Ad imageAd image

ವಿಶ್ವಕರ್ಮ ದಿನಾಚರಣೆಯನ್ನು ಅತಿ ವಿಜೃಂಭಣೆಯಿಂದ….

Bharath Vaibhav
ವಿಶ್ವಕರ್ಮ ದಿನಾಚರಣೆಯನ್ನು ಅತಿ ವಿಜೃಂಭಣೆಯಿಂದ….
WhatsApp Group Join Now
Telegram Group Join Now

ರಾಮದುರ್ಗ:–  ಕಾಮಗಾರಿ ಮಜದೂರ್ ಸಂಘದ ವಿಶ್ವ ಕಾರ್ಮಿಕರ ದಿನಾಚರಣೆ ಮತ್ತು ವಿಶ್ವಕರ್ಮ ದಿನಾಚರಣೆಯನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿರುವ ಹೊಸ ಬಸ್ ನಿಲ್ದಾಣ ಎದುರುಗಡೆ ಇರವು ಕಾರ್ಮಿಕ ಇಲಾಖೆಯಿಂದ ವಿಶ್ವ ಕಾರ್ಮಿಕರ ದಿನಾಚರಣೆ ಮತ್ತು ವಿಶ್ವಕರ್ಮ ದಿನಾಚರಣೆಯನ್ನು ತಮ್ಮ ಕಚೇರಿಯಿಂದ ನೇರವಾಗಿ ಅಂಬೇಡ್ಕರ್ ರಸ್ತೆ ಮೂಲಕ ಹಳೆ ಪೊಲೀಸ್ ಸ್ಟೇಷನ್ ಮಾರ್ಗವಾಗಿ ಸರ್ಕಾರಿ ಆಸ್ಪತ್ರೆ ಸರ್ಕಲ್ ದಿಂದ ನವಿಪೇಠ ಮಾರ್ಗವಾಗಿ ಮರಳಿ ತಮ್ಮ ಕಾರ್ಮಿಕ ಸಂಘದ ಜಿಲ್ಲಾ ಕಚೇರಿವರಿಗೂ ಮೆರವಣಿಗೆ ಮುಖಾಂತರ ಬಂದು ಮುಕ್ತಾಯಗೊಳಿಸಿದರು

ತಮ್ಮ ಕಚೇರಿಗೆ ಆಗಮಿಸಿದ ಗಣ್ಯ ಮಾನ್ಯರು ಕೂಡಿಕೊಂಡು ವಿಶ್ವಕರ್ಮ ಫೋಟೋಗೆ ಪೂಜೆ ಸಲ್ಲಿಸಿ ನಂತರ ಶಶಿಗೆ ನೀರು ಉಣ್ಣಿಸುವುದರ ಮೂಲಕ ಉದ್ಘಾಟನೆ ಮಾಡಿ ಕಾರ್ಯಕ್ರಮ ಪ್ರಾರಂಭಿಸಿದರು.ಈ ಕಾರ್ಯಕ್ರಮದಲಿ ಮಾತನಾಡಿದ ಸಮಾಜ ಸೇವಕರಾದ ನಿಂಗಪ್ಪ ಕರಿಗಾರ ಅವರು ಕಾರ್ಮಿಕರ ಬಗ್ಗೆ ಮತ್ತು ಕಾರ್ಮಿಕಗೆ ಸರ್ಕಾರದಿಂದ ಸಿಗುವಂತ ಸೌಲಭ್ಯಗಳ ಬಗ್ಗೆ ಮಾತನಾಡಿದರು.

ನಂತರ ಮಾತನಾಡಿದ ಕಾರ್ಮಿಕ ಘಟಕದ ಜಿಲ್ಲಾ ಗೌರವ ಅಧ್ಯಕ್ಷರಾಗಿ ನೇಮಕಗೊಂಡ ಚಿದಾನಂದ ದೊಡ್ಡಮನಿ ಅವರು ಕಾರ್ಮಿಕರು ಮತ್ತು ಕಾರ್ಮಿಕರ ಬಗ್ಗೆ ಏನಾದರೂ ವಿಷಯ ಇದ್ದರೆ ಅದು ಪತ್ರಿಕೆಯಲ್ಲಿ ನಾವು ನೋಡ್ತಾ ಇದ್ದೀವಿ ಇವಾಗ ಕರ್ನಾಟಕ ರಾಜ್ಯ ಕಟ್ಟಡ ಮಜದೂರ್ ಸಂಘ ಬಂದಮೇಲೆ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವಂತ ಸೌಲಭ್ಯಗಳು ಕೋಡಿಸುವುದರಲ್ಲಿ ಮುಂದಾಗಿದೆ ಈ ಒಂದು ಸಂಘಟನೆ ಇಲ್ಲಿ ಇಷ್ಟು ದೊಡ್ಡ ಮಟ್ಟಿಗೆ ಬೆಳೆಬೇಕಾದರೆ ಪ್ರಶಾಂತ ಕಲಾದಗಿ ಅವರು ಎಷ್ಟು ಶ್ರಮ ಪಟ್ಟಿದ್ದಾರೆ ಅನ್ನೋದು ನನಗೆ ಗೊತ್ತು ಮೊದಲು ಸೈಕಲ್ ಮುಖಾಂತರ ಓಡಾಡಿ ನಂತರ ಬೈಕಿ ಮೇಲೆ ಪ್ರತಿಯೊಂದು ಹಳ್ಳಿ ಹಳ್ಳಿಗೆ ಹೋಗಿ ಇಷ್ಟೊಂದು ಕಾರ್ಮಿಕರನ್ನು ಕೂಡಿಸಿ ಇಲ್ಲಿಂದ ಒಂದು ರಾಜ್ಯ ಮಟ್ಟದವರೆಗೂ ಬೆಳೆದಿದ್ದಾರೆ ಅಂದರೆ ಇವತ್ತು ಅವರ ಪಟ್ಟ ಶ್ರಮದಿಂದ ಎಂದು ನಾನು ಈ ವೇದಿಕೆ ಮೇಲೆ ಹೇಳಲಿಕ್ಕೆ ಇಷ್ಟಪಡುತ್ತೇನೆ ಎಂದು ಮಾತನಾಡಿದರು.

ಕೊನೆಯದಾಗಿ ಮಾತನಾಡಿದ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜದೂರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಪ್ರಶಾಂತ್ ಕಲಾದಗಿ ನಾನು ಎಲ್ಲ ಕಾರ್ಮಿಕರಿಗೂ ಸರಕಾರದಿಂದ ಸಿಗುವು ಸೌಲಭ್ಯಗಳು ಸರಿಯಾಗಿ ಸಿಗ್ತಾಇಲ್ಲ. ಮತ್ತು ಸಿಗುವ ಸೌಲಭ್ಯ ಸಲವಾಗಿ ಅನೇಕ ವರ್ಷಗಳಿಂದ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ,ನಾನು ಮೊದಮೊದಲು ಸೈಕಲ್ ಪ್ರವಾಸದ ಮೇಲೆ ನಂತರ ಮೋಟಾರ್ ಬೈಕ್ ಮೇಲೆ ಹಳ್ಳಿ ಹಳ್ಳಿಗೂ ತಿರುಗಿ ಕೂಲಿ ಕಾರ್ಮಿಕರನ್ನು ಒಟ್ಟುಗೂಡಿಸಿ ಕಾರ್ಮಿಕರ ಸಂಘಟನೆ ಇಂದು ಬಲಾಢ್ಯವಾಗಿದೆ ಎಂದರು ಕೆಲವೊಂದು ಕಾರ್ಮಿಕರನ್ನು ಈ ಸಭೆಯಲ್ಲಿ ಪ್ರಶಾಂತ್ ಕಲಾದಗಿಯವರು ತಮ್ಮ ಅನುಭವವನ್ನು ಸಭೆಯ ಮುಖಾಂತರ ತೋಡಿಕೊಂಡರೂ.

ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ ಕಲಾದಗಿ, ಚಿದಾನಂದ ದೊಡಮನಿ,ಶಂಕರ್ ಕಾರ್ಮಿಕ ಮುಖಂಡರು, ನಿಂಗಪ್ಪ ಕರಿಗಾರ ಸಮಾಜ ಸೇವಕರು ರಾಮದುರ್ಗ,ಶೇಖರಪ್ಪ ಬಡಿಗೇರ್ ಕಾರ್ಮಿಕ ಮುಖಂಡರು ಹೊಸಕೋಟಿ, ಈ ಸುಂದರ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ಶಂಕರ್ ಬಣಪ್ಪನವರ ನೆರವೇರಿಸಿಕೊಟ್ಟರು ಈ, ಕಾರ್ಯಕ್ರಮದಲ್ಲಿ ಇನ್ನೂ ಅನೇಕ ಗಣ್ಯ ಮಾನ್ಯರು ಕಾರ್ಮಿಕರು ಪಾಲ್ಗೊಂಡಿದ್ದರು.

ವರದಿ:-ಮಂಜುನಾಥ ಕಲಾದಗಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!