Ad imageAd image

ನಗರದಲ್ಲಿ ಜೂ. 11 ರಿಂದ ವಿಜನ್ ಕರ್ನಾಟಕ ಬೃಹತ್ ಮೇಳ

Bharath Vaibhav
ನಗರದಲ್ಲಿ ಜೂ. 11 ರಿಂದ ವಿಜನ್ ಕರ್ನಾಟಕ ಬೃಹತ್ ಮೇಳ
WhatsApp Group Join Now
Telegram Group Join Now

ಬೆಳಗಾವಿ: ವಿಜನ್ ಕರ್ನಾಟಕ 2025 ಬೃಹತ್ ಮೇಳ ನಗರದ ಕೆ.ಎಲ್ ಇ ಸಂಸ್ಥೆಯ ಡಾ. ಬಿ.ಎಸ್. ಜಿರಗೆ ಸಭಾಂಗಣದಲ್ಲಿ ಜೂನ್ 11 ರಿಂದ 13 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದರು.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ  ಈ ವಿಷಯ ತಿಳಿಸಿದ ಅವರು, ಐವತ್ತಕ್ಕೂ ಹೆಚ್ಚು ಸಚಿವರು, ಸರಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು ಬೃಹತ್ ಮೇಳದಲ್ಲಿ ಭಾಗವಹಿಸಲಿದ್ದು, ವಿಜ್ಞಾನ ತಂತ್ರಜ್ಞಾನ, ಶಿಕ್ಷಣ ಹಾಗೂ ಭವಿಷ್ಯ ನಿರ್ಮಾಣ, ಆಧಾರ ಕಾರ್ಡ ಕ್ಯಾಂಪ್, ಔಷಧಿ ಹಾಗೂ ರಸಗೊಬ್ಬರ, ವಾಣಿಜ್ಯ ಹಾಗೂ ಹಣಕಾಸು ಸಂಸ್ಥೆಗಳು ಬೃಹತ್ ಮೇಳದಲ್ಲಿ  ಪಾಲ್ಗೊಳ್ಳಲಿವೆ ಎಂದು ಅವರು ಹೇಳಿದರು.

ಮೇಳದ ಭಾಗವಾಗಿ ರಕ್ಷಣೆ, ವಿಜ್ಞಾನ ಹಾಗೂ ತಂತ್ರಜ್ಞಾನ, ಆರೋಗ್ಯ ರಕ್ಷಣೆ, ವಿದ್ಯುತ್ ಹಾಗೂ ಮಾಹಿತಿ ತಂತ್ರಜ್ಞಾನ, ರೇಲ್ವೇ, ಬ್ಯಾಂಕಿಂಗ್ ಕ್ಷೇತ್ರ, ವಸತಿ, ಪೆಟ್ರೋಲಿಯಂ, ಜಲ ಸಂಪನ್ಮೂಲ  ಮೇಳದ  ವಿಶೇಷ ಆಕರ್ಷಣೆಗಳಾಗಲಿವೆ ಎಂದು ಅವರು ತಿಳಿಸಿದರು. 2047 ರ ವಿಕಾಸ ಭಾರತ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದು, ಇದರ ಪ್ರಯತ್ನದ ಒಂದು ಭಾಗವೂ ಕೂಡ ಈ ಬೃಹತ್ ಮೇಳದ್ದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮನೀಷ್ ಗುಪ್ತಾ, ಮೀಟು ಪಾಲ್, ದಿನೇಶ ಗುಪ್ತಾ, ಶಾಸಕರಾದ ಅಭಯ್ ಪಾಟೀಲ್, ಮಾಜಿ ಶಾಸಕರಾದ ಅನಿಲ್ ಬೆನಕೆ, ಸಂಜಯ ಪಾಟೀಲ,ವಿಶ್ವನಾಥ ಪಾಟೀಲ್ ಇತರರು ಇದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!