ಖಾನಾಪುರ : ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದ ಜನಪ್ರಿಯ ಶಾಸಕರು ಆದ ವಿಠಲ್ ಹಲಗೇಕರ್ ಜನ್ಮ ದಿನಾಚರಣೆ ನಿಮಿತ್ಯ 3 ದಿನಗಳ ಅದ್ದೂರಿ ಮಾದರಿ ಜನಪ್ರಿಯ ಕಾರ್ಯಕ್ರಮಗಳು ನಡೆದು, ನಿನ್ನೆ ಸಮಾರೋಪ ಸಮಾರಂಭವು ನಡೆದು ಅರ್ಥಪೂರ್ಣವಾಗಿ ಮುಕ್ತಾಯವಾಯಿತು.
ನಿನ್ನೆ ಕಾರ್ಯಕ್ರಮದಲ್ಲಿ ಖ್ಯಾತ ಮರಾಠಿ ಚಿತ್ರ ನಟ ಪ್ರಸಾದ್ ಪಂಡಿತ್, ವೈದ್ಯ ಡ್ಯಾಮನನವರ್, ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.
ನಂತರ ನಮ್ಮ ನ್ಯೂಸ್ ಸಮೂಹದೊಂದಿಗೆ ಮಾತನಾಡಿದ ನಟ ಮತ್ತು ವೈದ್ಯರು ವಿಠಲ ಹಲಗೇಕರ್ ರವರ ಕಾರ್ಯವೈಖರಿ ಶ್ಲಾಘನೆ ವ್ಯಕ್ತಪಡಿಸಿದರು.
ನಂತರ ಶಾಸಕ ವಿಠಲ್ ಹಲಗೇಕರ್ ಮತ್ತು ಎಂ.ಡಿ ಸದಾನಂದ ಪಾಟೀಲ್ ಮಾತನಾಡಿ ಈ ಕಾರ್ಯಕ್ರಮದ ಯಶಸ್ಸುಗಾಗಿ ಶ್ರಮಿಸಿದವರಿಗೆ, ಶುಭಾಶಯಗಳನ್ನು ಕೋರಿದವರಿಗೆ ಧನ್ಯವಾದಗಳನ್ನು ಹೇಳಿದರು
ವರದಿ :ಬಸವರಾಜು.