ಘಟಪ್ರಭಾ : ಸಮೀಪದ ಶಿಂದಿಕುರಬೇಟ ಗ್ರಾಮದ ಭಾಗ್ಯದ ನಿಧಿ, ಭಂಡಾರದ ಒಡೆಯ ಎಂದು ಪ್ರಖ್ಯಾತಗೊಂಡಿರುವ ಶ್ರೀ ವಿಠ್ಠಪ್ಪ ದೇವರ ಜಾತ್ರೆಯು ದಿ.05 ರಂದು ವಿಜೃಂಭಣೆಯಿಂದ ಜರುಗಲಿದೆ ರವಿವಾರದಂದು ಬೆಳಗಿನ ಜಾವ ವಾಲಗ ಬಾರಿಸುವುದು. ನಂತರ ಶರಣರಿಂದ ಓಂಕಾರ ಮಂತ್ರ ನಡೆಯುವುದು.

ಮುಂಜಾನೆ 7ಘಂಟೆಗೆ ಶ್ರೀ ವಿಠ್ಠಪ್ಪ ದೇವರ ಅಭಿಷೇಕ ಹಾಗೂ ನೈವೇದ್ಯ ಹಾಗೂ ಅಂಬಲಿ ಕುಂಭಗಳ ಆಗಮನ ಮಧ್ಯಾಹ್ನ ಮಹಾಪ್ರಸಾದ ಜರಗುವುದು. ಅದೇ ದಿವಸ ಕಬ್ಬಿನ ಗಾಡಿಗೆ ಹೂಡಿದ ಎತ್ತುಗಳ ಪ್ರದರ್ಶನ ಜರುಗುವುದು.
ಸಂಜೆ 4ಘಂಟೆಗೆ ವಾಲಗ ಬಾರಿಸುವುದರೊಂದಿಗೆ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ವಿಠ್ಠಪ್ಪ ದೇವರ ದೇವಋಷಿಗಳಾದ ಮುರೇಪ್ಪ ಪೂಜೇರಿ ಇವರಿಂದ ಅಲಗ(ಖಡ್ಗ)ಹಾಯುವದು. ಮತ್ತು ಭಂಡಾರ ಹಾರಿಸುವುದು.ಕಬ್ಬಿನ ಗಾಡಿಗಳು ದೇವಸ್ಥಾನ ಸುತ್ತುವುದು. ಸಾಯಂಕಾಲ 6 ಘಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯುವದು. ನಂತರ ಡೊಳ್ಳಿನ ಪದಗಳು ಜರಗುವದೆಂದು ಜಾತ್ರಾ ಕಮೀಟಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.




