ರಾಮದುರ್ಗ:- ಇಂದು ತಾಲೂಕು ಪಂಚಾಯತಿ ಆವರಣದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ರ ಪ್ರಯುಕ್ತ ರಾಮದುರ್ಗ ತಾಲೂಕಾ ಸ್ವೀಪ್ ಸಮಿತಿ ಹಾಗೂ ತಾಲೂಕಿನ ಎಲ್ಲ ಇಲಾಖೆಗಳ ವತಿಯಿಂದ ಮತದಾನ ಜಾಗೃತಿಗಾಗಿ ರಾಮದುರ್ಗ ಪಟ್ಟಣದಲ್ಲಿ ಬೈಕ ರ್‍ಯಾಲಿಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಐನಾಪೂರ ಚಾಲನೆ ನೀಡಿದರು.
ಬೈಕ ರ್‍ಯಾಲಿಯ ರಾಮದುರ್ಗ ಪಟ್ಟಣದ ಪ್ರಮುಖ ಸ್ಥಳಗಳಾದ ಲಕ್ಷ್ಮಮಿ ನಗರ, ಮಹಾಂತೇಶ ನಗರ ,ಹೋಸಬಸ್ಸ ನಿಲ್ದಾಣ,ಹಾಗೂ ಹರಳಯ್ಯ ಸರ್ಕಲ್, ತೇರ ಬಜಾರ, ನೇವಿಪೇಠಿ, ಸರ್ಕಾರಿ ಆಸ್ಪತ್ರೆ ಸರ್ಕಲ್ ವರಿಗೂ ಸಂಚರಿಸಿಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ವೃತ್ತದಲ್ಲಿ ಮಾತನಾಡಿದ ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಬಸವರಾಜ ಐನಾಪೂರ ಮಾತನಾಡಿ ರಾಮದುರ್ಗ ಕ್ಷೇತ್ರದಲ್ಲಿ ವಿವಿದ ಜಾಗೃತಿಗಳ ಮುಖಾಂತರ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರು ಬಾಗವಹಿಸಿ ಮತದಾನ ಚಲಾಯಿಸಿ ಪ್ರಜಾಪ್ರಭುತ್ವ ಹಬ್ಬವನ್ನು ಯಶಸ್ವಿಗೊಳಿಸೋಣ ಎಂದರು.
ಬೈಕ ರ್‍ಯಾಲಿಯ ಮೂಲಕ ಮರಳಿ ತಾಲೂಕ ಪಂಚಾಯತಿ ಕಾರ್ಯಲಯಕ್ಕೆ ಬಂದು ತಾಲೂಕ ಪಂಚಾಯತಿ ಆವರಣದಲ್ಲಿ ಮಾನವ ಸರಪಳಿ ಮತದಾನ ಪ್ರತಿಜ಼ಾ ಬೋದನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾನ್ಯ ಸಹಾಯಕ ನಿರ್ದೇಶಕರು (ಪಂ ರಾ) ಅಪ್ಪಯ್ಯಪ್ಪ ಕುಂಬಾರ ಹಾಗೂ ತಾಲೂಕಿನ ವಿವಿದ ಇಲಾಖೆ ಅದಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕ ಪಂಚಾಯತಿ ಸಿಬ್ಬಂದಿ ವರ್ಗ ಉಪಸ್ಥಿತಿರಿದ್ದರು.
ವರದಿ:-ಮಂಜುನಾಥ ಕಲಾದಗಿ