ನಿಪ್ಪಾಣಿ: ದೇಶಭಕ್ತ ರತ್ನಪಣ್ಣಾ ಕುಂಬಾರರ ತತ್ವ ವಿಚಾರಗಳನ್ನು ಹೊತ್ತು ನಡೆಸುತ್ತಿರುವ ಸಕ್ಕರೆ ಕಾರ್ಖಾನೆಗೆ ಗತ ವೈಭವ ಪ್ರಾಪ್ತವಾಗಿದ್ದು ನಿಪ್ಪಾಣಿ ಮತಕ್ಷೇತ್ರದ ಹಳ್ಳಿಗಳಲ್ಲಿಯ ಸದಸ್ಯರು ಪಿ.ಎಂ. ಪಾಟೀಲ ಗುಂಪಿಗೆ ಮತ ನೀಡುವ ಒಮ್ಮತದ ನಿರ್ಧಾರ ಕೈಗೊಂಡಿರುವುದಾಗಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.
ಅತ್ಯಂತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರ್ಖಾನೆಯನ್ನು ಸದಸ್ಯರ ಒಮ್ಮತದಿಂದ ರೇಣುಕಾ ಶುಗರ್ಸ್ ಕಂಪನಿಗೆ ಲೀಜ ಮೇಲೆ ನೀಡಿದ್ದು ಸದ್ಯ ಆರ್ಥಿಕ ಮಟ್ಟ ಸುಧಾರಿಸಿದೆ. ರೈತರ ಕಬ್ಬಿಗೆ ಅಧಿಕ ಬೆಲೆಯನ್ನು ನೀಡಲಾಗುತ್ತಿದೆ ಎಂದರು. ನಿಪ್ಪಾಣಿ ತಾಲೂಕಿನ ಕಾರದಗಾ,ಭೋಜ, ಮಾಂಗೂರ್, ಬೇಡಕಿಹಾಳ, ಡೋನೇವಾಡಿ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಿ ಪಿಎಂ ಪಾಟೀಲರ ಗುಂಪಿನ ಪರ ಶಶಿಕಲಾ ಜೊಲ್ಲೆ ಮಾತನಾಡಿದರು.
ಪ್ರಾರಂಭದಲ್ಲಿ ಡೋನೇವಾಡಿ ಗ್ರಾಮದ ಮಹಾತ್ಮ ಬಸವೇಶ್ವರ ಪ್ರತಿಮೆಗೆ ಪಿ ಎಂ ಪಾಟೀಲರ ಹ ಸ್ತದಿಂದ ಮಾಲಾರ್ಪಣೆ ಮಾಡಿದರು.ಹಾಗೂ ವಿಠಲ ಮಾಳಿ ಮಹಾರಾಜರಿಂದ ಸಂತ ಅಪ್ಪಾ ಮಹಾರಾಜ ಹಾಗೂ ದೇಶಭಕ್ತ ರತ್ನಪ್ಪ ಕುಂಬಾರ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಾಲಸಿದ್ದನಾಥ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಪವನ್ ಪಾಟೀಲ್ ಅಣ್ಣಾಸಾಹೇಬ ನಾಗರಾಳೆ ಸಂತೋಷ ಹಿರೇಕುಡಿ, ಶಿವಾಜಿ ಖೋತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಮೇದುವಾರ ಮಹಾವೀರ್ ಚೌಗುಲೆ ಸಂಜಯ್ ದೇಸಾಯಿ ಪ್ರಮೋದ್ ಪಾಟೀಲ, ಶರದ ಜಂಗಟೆ ಯುನೋಸ್ ಮುಲ್ಲಾನಿ,ಶ್ರೀಕಾಂತ ಬನ್ನೆ ಬಾಳಗೊಂಡ ಸಂಸುದ್ಧಿ ಸಖಾರಾಮ ನಾಗರಾಳೆ, ಸುರೇಖಾ ಪಾಟೀಲ್ ತುಕಾರಾಮ ಪಾಟೀಲ ಸೇರಿದಂತೆ ಗ್ರಾಮದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಮಹಾವೀರ ಚಿಂಚಣೆ