ಮುದಗಲ್ಲ :- ಸಾರ್ವತ್ರಿಕ ಲೋಕಸಭಾ ಚುನಾವಣಾ ಅಂಗವಾಗಿ ಲಿಂಗಸೂರು ತಾಲೂಕಿನ ಐತಿಹಾಸಿಕ ಮುದಗಲ್ಲ ಪಟ್ಟಣದ ಪುರಸಭೆ ಆವರಣದಲ್ಲಿ
ಮತದಾನ ಜಾಗೃತಿ ಪ್ರಯುಕ್ತ ವಿನೂತನವಾಗಿ ರಂಗೋಲಿ ಬಿಡಿಸುವ ಮೂಲಕ ಜನರಲ್ಲಿ ಅರಿವಿನ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.
ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಿ, ವೋಟರ್ಸ್ ವೋಟ್ ಡೇ, ನನ್ನ ಮತ ಮಾರಟಕ್ಕಿಲ್ಲ ಧ್ವಜಸ್ತಂಭ ಎನ್ನುವ- ಚಿತ್ರಗಳು ರಂಗೋಲಿಯಲ್ಲಿ ಆಕರ್ಷಕವಾಗಿ ಮೂಡಿ ಬಂದವು.
ಪುರಸಭೆಯ ಕಂದಾಯ ಅಧಿಕಾರಿಯಾದ ದೇವರಾಜ ಅವರು ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಮೂಲಕ ಮತದಾನ ಮಹತ್ವ ತಿಳಿಸಿದರು.
ಈ ಸಂದರ್ಭ ಪುರಸಭೆ ಕಂದಾಯ ವಿಭಾಗದ ಅಧಿಕಾರಿಗಳಾದ ದೇವರಾಜ ಹಾಗೂ ,ಜಸ್ಸ್ ಪಾಲ್ ಸಿಂಗ್ ಮತ್ತು ನೈಮಲ್ಯ ಅಧಿಕಾರಿ ರೈಮತ್ ಹುನ್ನಿಸಾ ಬೇಗಂ, ಚನ್ನಮ್ಮ ದಳವಾಯಿ ಮಠ ಸಮುದಾಯ ಸಂಘಟಕರು, ಸಿಬ್ಬಂದಿ ಗಳಾದ ಮಾಲಿಂಗರಾಯ , ರೇಣುಕಾ,ದೀಪಾ ಹಾಗೂ ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು..
ವರದಿ : ಮಂಜುನಾಥ ಕುಂಬಾರ