ರಾಯಚೂರು: -ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆಯ ಭಾಗವಾಗಿ ಇಂದು 14 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಜನರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಆದರೆ ಲಿಂಗಸುಗೂರು ತಾಲ್ಲೂಕಿನ ಆಕನಾಳ-ಉಪನಾಳ ಗ್ರಾಮದಲ್ಲಿ
ದಲಿತ ಕಾಲೊನಿಗೆ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ಪರಿಶಿಷ್ಟ ಜಾತಿ ಸಮುದಾಯದವರು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ..
ಗ್ರಾಮದ ದಲಿತ ಕಾಲೊನಿಗೆ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ಪರಿಶಿಷ್ಟ ಜಾತಿ ಸಮುದಾಯದವರು
ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಜನರು ಮತದಾನದಿಂದ ಹಿಂದೆ ಸರಿದಿದ್ದಾರೆ
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಆಕನಾಳ-ಉಪನಾಳ ಗ್ರಾಮದಲ್ಲಿ ದಲಿತ ಕಾಲೊನಿಗೆ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ಪರಿಶಿಷ್ಟ ಜಾತಿ ಸಮುದಾಯದವರು ಚುನಾವಣೆ ಬಹಿಷ್ಕಾರ ಮಾಡಿದರು.
ಕಾಲೊನಿಯಲ್ಲಿ ರಸ್ತೆ ಅಭಿವೃದ್ಧಿ ಮಾಡಿಲ್ಲ. ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಶೌಚಾಲಯ ಸೌಲಭ್ಯ ಇಲ್ಲ. ಚರಂಡಿ ಸೌಲಭ್ಯ ಇಲ್ಲ. ಎಲ್ಲಿ ಅಂದ್ರೆ ಅಲ್ಲಿ ವಿದ್ಯುತ್ ತಂತಿ ಜೋತು ಬಿದ್ದಿವೆ.
ಹೀಗಾಗಿ ಮೂಲ ಸೌಲಭ್ಯ ಕಲ್ಪಿಸುವರಿಗೆ ಯಾವುದೆ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ಬಹಿಷ್ಕಾರ ಮಾಡಿದರು.
ಈ ಸಂದರ್ಭದಲ್ಲಿ: -ಹನುಮಪ್ಪ, ಸಿದ್ದಪ್ಪ, ಶಿವಪ್ಪ, ಕೆಂಚಪ್ಪ, ಹುಲ್ಲಪ್ಪ , ಶಿವಪ್ಪ ,ಹುಸೇನಪ್ಪ .ಸೋಮಪ್ಪ, ಗುರಪ್ಪ , ಲಕ್ಷ್ಮಣ, ಯಲವ್ವ, ಸೋಮವ್ವ ,ಯಮನಮ್ಮ, ಪೌಡೆಮ್ಮ, ಲಕ್ಷ್ಮೀ ಮ್ಮ ,ನಾಗಮ್ಮ, ಹುಲಗಮ್ಮ ಇತರರು ಉಪಸ್ಥಿತರಿದ್ದರು
ವರದಿ:- ಮಂಜುನಾಥ ಕುಂಬಾರ