ಕುಡಿಯುವ ನೀರಿನ ಸಮಸ್ಯೆ ಕರವೇಯಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ

Bharath Vaibhav
ಕುಡಿಯುವ ನೀರಿನ ಸಮಸ್ಯೆ ಕರವೇಯಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ
WhatsApp Group Join Now
Telegram Group Join Now

ಮುದಗಲ್ಲ:– ಇಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎ.ನಯೀಮ್ ಅವರು ತಮ್ಮ ನಿವಾಸದಲ್ಲಿ ಕರೆದ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಐತಿಹಾಸಿಕ ಮುದಗಲ್ ಪಟ್ಟಣವನ್ನು ತಾಲೂಕು ಮಾಡಬೇಕು ಎಂದು ಮೂರು ದಶಕ ದಿಂದ ಹೋರಾಟ ಮಾಡುತ್ತ ಬಂದಿದ್ದು ಇನ್ನೂ ತಾಲೂಕು ಮಾಡದೆ ಇರುವುದು ಬೇಸರದ ಸಂಗತಿ ಯಾಗಿದೆ, ಹಾಗು ಸುಮಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು ಹತ್ತು, ಹನ್ನೊಂದು ದಿವಸಕ್ಕೆ ಒಮ್ಮೆ ಅನಿಯಮಿತವಾಗಿ ಸರಬರಾಜು ಆಗುತ್ತಿದ್ದು ಹಲವಾರು ಬಾರಿ ಹೋರಾಟ ಮಾಡಿದರೂ ಜನ ಪ್ರತಿನಿಧಿಗಳು ಹಾಗು ಅಧಿಕಾರಿಗಳು ಕಣ್ಣಿದ್ದರೂ ಕುರುಡರಂತೆ ಮತ್ತು ಕಿವುಡರಂತೆ ವರ್ತಿಸುತ್ತಿದ್ದಾರೆ.

ಐತಿಹಾಸಿಕ ಕೋಟೆಯ ಮುಂದೆ ಇರುವ ಕಂದಕದ ನೀರು ಕಲುಷಿತವಾಗಿ ದುರ್ವಾಸನೆ ಬರುತ್ತಿದ್ದು ಪಕ್ಕದ ರಸ್ತೆಯ ಮೇಲೆ ನಡೆದಾಡುವ ಜನರು ಬಾಯಿಗೆ ಬಟ್ಟೆ ಕಟ್ಟಿ ಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ.

ಮತ್ತು ನಿಂತ ನೀರಿನಲ್ಲಿ ಸೊಳ್ಳೆಗಳು ಇದ್ದು ಇದರಿಂದ ಹಲವಾರು ಜನರಿಗೆ ಸಾಂಕ್ರಾಮಿಕ ರೋಗಗಳು ತಗುಲಿ ಮಲೇರಿಯಾ, ಟೈಫಾಯಿಡ್,ನ ಚಿಕಿತ್ಸೆಗಾಗಿ ಬಾಗಲಕೋಟೆ, ರಾಯಚೂರು, ಲಿಂಗಸೂಗೂರು, ಸಿಂಧನೂರು ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಹೋಗುತ್ತಿದ್ದಾರೆ, ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಜನಪ್ರತಿನಿಧಿಗಳು ಚುನಾವಣೆ ಬಂದಾಗ ನಾನು ತಾಲೂಕು ಮಾಡತ್ತೀನಿ, ನಾನು ಕೋಟೆ ಉತ್ಸವ ಮಾಡತ್ತೀನಿ, ನಾನು ಕುಡಿಯುವ ನೀರಿನ ವ್ಯವಸ್ಥೆ ಮಾಡತ್ತಿನಿ ಎಂದು ಆಶ್ವಾಸನೆ ಕೊಡುತ್ತಾರೆ ಗೆದ್ದು ಬಂದ ಮೇಲೆ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಆದಕಾರಣ ಪಟ್ಟಣದ ಜನರಿಗೆ ಸಮರ್ಪಕವಾಗಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆಯನ್ನು ಕೊಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾಬು ಹುಸೇನ್, ಸಂತೋಷ ಗಬ್ಬೂರ, ಎಸ್. ಖಾದ್ರಿ, ಮಹಾಂತೇಶ್ ಚಟ್ಟರ್, ರೆಹೆಮಾನ ದೂಲಾ ಜಂಬಾಳಿ, ಜಮಾಲಿ ಸಾಬು, ಬಾಲಪ್ಪ ಉಪ್ಪಾರ್, ಮಜೀದ್ ಆಟೋ, ಹನೀಫ ಖಾನ್, ಜಮೀರ್ ಪಾಷಾ, ಇಮಾಮ್ ಹುಸೇನ್, ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!