————-ರಾಜ್ಯಾದ್ಯಂತ ಸುದ್ದಿ ಮಾಡಿರುವ ಬಿಡಿಸಿಸಿ ಬ್ಯಾಂಕ್ ಚುನಾವಣೆ
ಬೆಳಗಾವಿ: ಜಿಲ್ಲಾರಾಜ್ಯ ಕಾರಣದಲ್ಲಿ ಮಾತ್ರವಲ್ಲದೇ ರಾಜ್ಯಾದ್ಯಂತ ಸುದ್ದಿ ಮಾಡಿರುವ ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಚುನಾವಣೆಯ 17 ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಇನ್ನುಳಿದ 6 ಸ್ಥಾನಗಳಿಗೆ ಅಕ್ಟೋಬರ್ 19 ರಂದು ಚುನಾವಣೆ ಮತದಾನ ನಡೆಯಲಿದೆ. ಅಂದೇ ಸಂಜೆ ಫಲಿತಾಂಶವೂ ಹೊರ ಬೀಳಲಿದೆ.
ಬೆಳಗಾವಿಯಿಂದ ರಾಹುಲ್ ಜಾರಕಿಹೊಳಿ, ಗೋಕಾಕ ದಿಂದ ಅಮರನಾಥ ಜಾರಕಿಹೊಳಿ, ಚಿಕ್ಕೋಡಿ ಯಿಂದ ಗಣೇಶ ಹುಕ್ಕೇರಿ, ಖಾನಾಪುರ ಕ್ಷೇತ್ರದಿಂದ ಅರವಿಂದ ಪಾಟೀಲ, ಕಾಗವಾಡ ಕ್ಷೇತ್ರದಿಂದ ರಾಜು ಕಾಗೆ, ಸವದತ್ತಿಯಿಂದ ವೀರೂಪಾಕ್ಷಿ ಮಾಮನಿ, ಮೂಡಲಗಿಯಿಂದ ನೀಲಕಂಠ ಕಪ್ಪಲಗುದ್ದಿ,ಇತರೇ ಕ್ಷೇತ್ರದಿಂದ ಚನ್ನರಾಜ ಹಟ್ಟಿಹೊಳಿ, ಯರಗಟ್ಟಿ ಕ್ಷೇತ್ರದಿಂದ ವಿಶ್ವಾಸ ವೈದ್ಯ ಅವಿರೋಧ ಆಯ್ಕೆಯಾಗಿದ್ದಾರೆ.
7 ಸ್ಥಾನಗಳಿಗೆ ಚುನಾವಣೆ: ಇನ್ನುಳಿದ ಏಳು ಸ್ಥಾನಗಳಾದ ಹುಕ್ಕೇರಿ, ಬೈಲಹೊಂಗಲ, ಕಿತ್ತೂರ, ಅಥಣಿ, ರಾಮದುರ್ಗ, ನಿಪ್ಪಾಣಿ ಹಾಗೂ ರಾಯಬಾಗ್ ನ ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ಕ್ಕೆ ಮತದಾನ ಹಾಗೂ ಅಂದೇ ಫಲಿತಾಂಶ ಹೊರ ಬೀಳಲಿದೆ.
ಬೈಲಹೊಂಗಲದಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ವಿಶ್ವನಾಥ ಪಾಟೀಲ್ ಕಣದಲ್ಲಿದ್ದಾರೆ. ಕಿತ್ತೂರನಲ್ಲಿ ಶಾಸಕ ಬಾಬಾಸಾಹೇಬ್ ಪಾಟೀಲ್ ಅವರ ಸಹೋದರ ನಾನಾಸಾಹೇಬ್ ಪಾಟೀಲ್ ಹಾಗೂ ವಿಕ್ರಮ ಇನಾಮದಾರ ಸ್ಪರ್ಧೆಗೆ ಇಳಿದಿದ್ದಾರೆ. ಅಥಣಿಯಲ್ಲಿ ಶಾಸಕ ಲಕ್ಷಣ ಸವದಿ ಹಾಗೂ ಮಾಜಿ ಶಾಸಕ ಮಹೇಶ ಕುಮಟಳ್ಳಿ ನಡುವೆ ನಿರ್ಧೇಶಕ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿದೆ. ನಿಪ್ಪಾಣಿಯಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಉತ್ತಮ ಪಾಟೀಲ್ ಕಣದಲ್ಲಿದ್ದಾರೆ. ರಾಯಬಾಗದಲ್ಲಿ ಅಪ್ಪಾಸಾಹೇಬ್ ಕುಲಗೋಡೆ ವಿರುದ್ಧ ಬಸಗೌಡ ಆಸಂಗಿ ಸ್ಪರ್ಧಿಸಿದ್ದಾರೆ. ರಾಮದುರ್ಗ ದಲ್ಲಿ ಶ್ರೀಕಾಂತ ಢವಣ ವಿರುದ್ಧ ಮಲ್ಲಪ್ಪ ಯಾದವಾಡ್ ಸ್ಪರ್ಧೆಗೆ ಇಳಿದಿದ್ದಾರೆ. ಹುಕ್ಕೇರಿಯಲ್ಲಿ ರಮೇಶ ಕತ್ತಿ ಹಾಗೂ ರಾಜೇಂದ್ರ ಪಾಟೀಲ್ ಕಣದಲ್ಲಿದ್ದಾರೆ.




