Ad imageAd image

ನಿಮಗೆ ಮತ ಹಾಕಿದ್ದೇವೆ, ರಸ್ತೆ ನಿರ್ಮಿಸಿ ಎಂದ ಮತದಾರ

Bharath Vaibhav
ನಿಮಗೆ ಮತ ಹಾಕಿದ್ದೇವೆ, ರಸ್ತೆ ನಿರ್ಮಿಸಿ ಎಂದ ಮತದಾರ
WhatsApp Group Join Now
Telegram Group Join Now

ಚಾಮರಾಜನಗರ: ಕೊಳ್ಳೇಗಾಲ ಶಾಸಕರೇ ನಿಮ್ಮ ಗುತ್ತಿಗೆದಾರರನ್ನು ಬಗ್ಗೆ ಬಂದು ಗಮನಕೊಡಿ ಕಳಪೆ ಆಗುತ್ತಿರುವುದು ನಮ್ಮ ರಸ್ತೆ ನಿಮ್ಮ ರಸ್ತೆಯಲ್ಲ ಎಂದು ಸ್ಥಳೀಯರ ಆಕ್ರೋಶ.

ರಸ್ತೆಯ ಮಧ್ಯದಲ್ಲಿ ಹಳ್ಳವಾಗಿದೆ ವಾಹನ ಚಾಲಕರು ವಾಹನ ಚಲಾಯಿಸಿ ಬರುತ್ತಾರೆ ಗುಂಡಿಗಳೇ ಕಾಣುವುದಿಲ್ಲ ಮಳೆ ಬಂದು ನೀರು ತುಂಬಿರುತ್ತದೆ. ನಮ್ಮ ಮಕ್ಕಳು ಬಿದ್ದರೆ ನಿಮಗೇನು ಗುತ್ತಿಗೆದಾರರು, ಇಂಜಿನಿಯರಗಳು ಕಾರಿನಲ್ಲಿ ಆರಾಮಾಗಿ ತಿರುಗಾಡಿತ್ತಿದ್ದಾರೆ ಇಲ್ಲಿ ಬಿದ್ದು ಸಾಯಿತ್ತಿರುವವರು ಸಾರ್ವಜನಿಕರು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೋಕಿನ ಬಾಗಲಕೋಟೆ ಟು ಬಿ.ಆರ್. ಹಿಲ್ಸ್ ರಾಜ್ಯ ಹೆದ್ದಾರಿ 57ರ ರಸ್ತೆಯು 20ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿ ನೆಡೆಯುತ್ತಿದ್ದು ಗುಂಬಳ್ಳಿ ಪ್ರೌಢಶಾಲೆ ಹತ್ತಿರ ರಸ್ತೆಯು ಒಂದೇ ತಿಂಗಳಿಗೆ ಹಳ್ಳ ಬಿದ್ದು ಡಾಂಬರು ಕಿತ್ತೋಗಿದೆ ಈ ಕಾಮಗಾರಿಯು ಕಳಪೆ ಇಂದ ಕೂಡಿದೆ ಎಂದು ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಿ ಪಡಿಸಿದರು.

ಸ್ಥಳೀಯರಾದ ಪವನ್ ಗೌಡ ಮಾತನಾಡಿ ಈ ರಸ್ತಗೆ 20ಕೋಟಿ ವೆಚ್ಚದಲ್ಲಿ ಕಾಮಗಾರಿ ಆಗಬೇಕಿತ್ತು ಆದರೆ ಈ ರಸ್ತೆಗೆ 13ಕೋಟಿ ಬಳಕೆ ಮಾಡಿ ಶಾಸಕರು ಇನ್ನು 7 ಕೋಟಿ ವೆಚ್ಚದ ಹಣವನ್ನು ವೈ ಕೆ ಮೋಳೆ ಟು ಯಳಂದೂರು ರಸ್ತೆಗೆ ಬಳಸಿದ್ದಾರೆ ಮಾಧ್ಯಮಗಳಲ್ಲಿ ನೋಡಿದೆ ಆ ರಸ್ತೆಯಲ್ಲೂ ಕಳಪೆ ಕಾಮಗಾರಿ ನಡೆದಿದೆ ಇವಾಗ ನಮ್ಮ ರಸ್ತೆ ನೋಡಿದರೆ ಗೊತಾಗ್ತಿದೆ ಎರಡು ಕಾಮಗಾರಿಗಳಿಗೆ ಒಬ್ಬರೇ ಗುತ್ತಿಗೆದಾರ ಅಂದಮೇಲೆ ಇನ್ನು ಕಳಪೆ ಆಗದೆ ಇರುತ್ತ ಎಂದು ದೂರಿದರು ಈ ರಸ್ತೆಯನ್ನು ಬಂದು ಸಂಬಂದಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಬಂದು ಕೂಡಲೇ ಸರಿಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುಂಬಳ್ಳಿ ಗ್ರಾಮದ ಸಂತೋಷ್ ಅವರು ಮಾತನಾಡಿ ಶಾಸಕರ ಗೆಲುವಿಗೆ ನಾವು ಶ್ರಮಿಸಿದ್ದೇವೆ ನಮ್ಮ ಅಭಿವೃದ್ಧಿಗೆ ನೀವು ಶ್ರಮಿಸಬೇಕು ನಮ್ಮ ರಸ್ತೆಯನ್ನು ನಿಮ್ಮ ಗುತ್ತಿಗೆದಾರ ಕಳಪೆ ಇಂದ ಮಾಡಿದ್ದಾನೆ ಶಾಸಕರೇ ಬಂದು ನೀವು ನೋಡಬೇಕು. ಇಲ್ಲಿ ಬೈಕ್ ಸವಾರರು ಬಿದ್ದು ಕಾಲು ಕೈ ಮುರಿದು ಕೊಂಡು ಹೋಗಿದ್ದಾರೆ ನಾವೇ ಎತ್ತಿ ಅವರನ್ನು ಕಳಿಸಿದ್ದೀವಿ ಗುತ್ತಿಗೆದಾರರು ದುಡ್ಡು ಮಿಗಿಸಲು ಹೋಗಿ ರಸ್ತೆಯನ್ನು ಕಳಪೆ ಮಾಡಿದ್ದಾರೆ. ಮಳೆಬರುವ ಸಮಯದಲ್ಲಿ ಡಾಂಬರ್ ಹಾಕಿರೋದರಿಂದ ಡಾಂಬರ್ ಕಿತ್ತೋಗಿದೆ ಇದನ್ನು ಸರಿಪಡಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆಗೆ ನಡೆಸಬೇಕಾಗುತ್ತದೆ ಎಚ್ಚರ ಶಾಸಕರೇ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂತೋಷಗೌಡ ,ಪವನ್ ಗೌಡ,ಮಹೇಶ್, ಶೇಖರ್, ಚಂದನ್, ಶ್ರೀಕಾಂತ್, ರುದ್ರೇಶ್, ಹರೀಶ್,ಹಾಗೂ ಆಟೋ ಚಾಲಕರು ಹಾಗೂ ಸ್ಥಳೀಯರು ಹಾಜರಿದ್ದರು.

ವರದಿ: ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!