ರಾಮದುರ್ಗ: ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿ ಎಸ್ ಅಪ್ಡೇಟ್ ಸೋಶಿಯಲ್ ಅಸೋಸಿಯೇಷನ್ ರಾಮದುರ್ಗ ವಾರ್ಷಿಕ ಸರ್ವಸಾಧಾರಣ ಸಭೆ ರಾಮದುರ್ಗದ ಸೋಶಿಯಲ್ ಕ್ಲಬ್ಬಿನಲ್ಲಿ ನಡೆಸಲಾಯಿತು.
ಸೋಶಿಯಲ್ ಕ್ಲಬ್ಬಿನ ಅಧ್ಯಕ್ಷರಾದ ಬಿ ಆರ್ ಮಳಲಿ ಉಪಾಧ್ಯಕ್ಷರು ವೈ ಎಚ್ ಪಾಟೀಲ್ ಸಹ ಕಾರ್ಯದರ್ಶಿ ವಿ ಎ ಚಿಕ್ಕಮಠ ಕಾರ್ಯದರ್ಶಿ ಬಿ ಆರ್ ಗಂಗಣ್ಣವರ್ ಹಾಗೂ ಸರ್ವ ಸದಸ್ಯರು ಸಹ ಸದಸ್ಯರು ನೇತೃತ್ವದಲ್ಲಿ ವಾರ್ಷಿಕ ಸರ್ವಸಾಧಾರಣ ಸಭೆ ನಡೆಸಿದರು.
ವಿ ಎಸ್ ಆಪ್ಟೆ ಸೋಶಿಯಲ್ ಅಸೋಸಿಯನ್ ಕ್ಲಬ್ಬಿನ ಬರುವಂತ ಆದಾಯ ಮತ್ತು ಖರ್ಚಿನ ಲಕ್ಕಪತ್ರವನ್ನು ಕ್ಲಬ್ಬಿನ ಕಾರ್ಯದರ್ಶಿಗಳಾದ ಬಿ ಆರ್ ಗಂಗನ್ನವರ್ ಖರ್ಚು ವೆಚ್ಚನ ವಿವರವನ್ನು ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಮುಂದೆ ವಿವರಿಸಿದರು.
ಹಾಗೂ ಈ ಕ್ಲಬ್ಬಿನ ಪ್ರತಿ ವರ್ಷದಂತೆ ಈ ವರ್ಷವೂ 76ನೇ ವರ್ಷ ಸಾಧಾರಣ ಸಭೆ ಅಧ್ಯಕ್ಷತೆ ವಹಿಸಿದ್ದ ಬಿ ಆರ್ ಮಳಲಿ ಮಾತನಾಡಿ ಈ ಸಂಸ್ಥೆಗೆ ನಡೆದಂತ ಎಲ್ಲ ಕಾರ್ಯಕ್ರಮವು ಯಶಸ್ವಿಯಾಗಿ ಮುಂದೆಯೂ ಹೀಗೆ ಯಶಸ್ವಿಯಾಗಿ ನಡೆಸುವಂತೆ ಅನುಕೂಲ ಮಾಡುವುದಾಗಿ ಹಾಗೂ ಹೊಸ ಹೊಸ ಸದಸ್ಯರನ್ನು ನೇಮಕ ಮಾಡುವ ಬಗ್ಗೆ ಯೋಚನೆ ಮಾಡಬೇಕು ಎಂದು ವಿವರಿಸಿದರು. ಹಾಗೂ ಒಳ್ಳೆಯ ಲಾಭದಿಂದ ಬರುವಂತ ನಮ್ಮ ಸಂಸ್ಥೆಯ ಹಣವನ್ನ ಒಳ್ಳೆ ಕಾರ್ಯಕ್ಕೆ ಬಳಸುವುದು ಉತ್ತಮ ವಾಗಿ ನಡೆಸಿಕೊಂಡು ಹೋಗುವುದು ಎಂದು ತಿಳಿಸಿದರು. ಹಾಗೂ ಅಂತಿಮವಾಗಿ ಕಾರ್ಯಕ್ರಮಕ್ಕೆ ಸಹ ಕಾರ್ಯದರ್ಶಿ ವಿ ಎ ಚಿಕ್ಕಮಠ ವಂದಿಸಿದರು.
ವರದಿ: ಮಂಜುನಾಥ್ ಕಲಾದಗಿ