Ad imageAd image

ಪರಮ ಪವಿತ್ರವಾದ ಪತ್ರಿಕಾ ವೃತ್ತಿಗೆ ದಕ್ಕೆ ಬರದಂತೆ ಸತ್ಯ ಸಂಗತಿ ಅರಿತು ಸುದ್ದಿ ಪ್ರಸಾರ ಮಾಡಲು ಪ್ರಯತ್ನಿಸಿ: ವಿ.ಎಸ್.ವಿ ಪ್ರಸಾದ್ ಕಿವಿ ಮಾತು

Bharath Vaibhav
ಪರಮ ಪವಿತ್ರವಾದ ಪತ್ರಿಕಾ ವೃತ್ತಿಗೆ ದಕ್ಕೆ ಬರದಂತೆ ಸತ್ಯ ಸಂಗತಿ ಅರಿತು ಸುದ್ದಿ ಪ್ರಸಾರ ಮಾಡಲು ಪ್ರಯತ್ನಿಸಿ: ವಿ.ಎಸ್.ವಿ ಪ್ರಸಾದ್ ಕಿವಿ ಮಾತು
WhatsApp Group Join Now
Telegram Group Join Now

ಕಲಘಟಗಿ:– ದೇಶಾದ್ಯಂತ ಪತ್ರಿಕೆ ಹಾಗೂ ಮಾಧ್ಯಮದ ಮೂಲಕ ಬಿತ್ತರಿಸುವ ಸುದ್ದಿಯನ್ನ ಕೋಟ್ಯಾಂತರ ಜನರು ವೀಕ್ಷಣೆ ಮಾಡುತ್ತಾರೆ ಅಂತಹ ಪರಮ ಪವಿತ್ರವಾದ ಪತ್ರಿಕಾ ವೃತ್ತಿಗೆ ದಕ್ಕೆ ಬರದಂತೆ ಸತ್ಯ ಸಂಗತಿ ಅರಿತು ಸುದ್ದಿ ಪ್ರಸಾರ ಮಾಡಲು ಪ್ರಯತ್ನ ಮಾಡಿ ಎಂದು ಹುಬ್ಬಳ್ಳಿಯ ಸ್ವರ್ಣಾ ಗ್ರೂಪ್ ಆಫ್ ಕಂಪನಿ ಮಾಲೀಕರಾದ ಡಾ. ಸಿ. ಎಚ್ ವಿ. ಎಸ್.ವಿ ಪ್ರಸಾದ್ ಕಿವಿ ಮಾತು ಹೇಳಿದರು.

ಸ್ಥಳೀಯ ಗುಡ್ ನ್ಯೂಸ್ ಪದವಿ ಪೂರ್ವ ವಿದ್ಯಾಲಯದ ಸಭಾಭವನದಲ್ಲಿ ತಾಲ್ಲೂಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕಾ ವಿತರಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಮಾತನಾಡಿದರು.ಪತ್ರಿಕಾ ರಂಗ ಪ್ರಜಾಪ್ರಭುತ್ವದ ಬಲಿಷ್ಟತೆಗಾಗಿ ಹಾಗೂ ಸದೃಢ ಭಾರತ ನಿರ್ಮಾಣಕ್ಕೆ ಬಹು ಮುಖ್ಯ ಪಾತ್ರ ವಹಿಸಿದೆ ಯಾವ ಸರ್ಕಾರಗಳು ಏನೇ ತಪ್ಪು ಮಾಡಿದರು ಅವರ ಬಗ್ಗೆ ಸಮಾಜಕ್ಕೆ ತಪ್ಪು ಸರಿ ಪ್ರಸಾರ ಮಾಡುವದರ ಜೊತೆಗೆ ಸಮಾಜ ಮುಖಿ ಕೆಲಸದಲ್ಲಿ ತೊಡಗಿಕೊಂಡಿರುವ ವಿಶ್ವಾಸ ನನಗಿದೆ ಎಂದರು.

ಹಲವು ಪತ್ರಿಕೆಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪರೀಕ್ಷೆ ಪೂರ್ವ ತಯಾರಿಗೆ ವಿದ್ಯಾರ್ಥಿ ಮಿತ್ರ ಹಾಗೂ ದಿಕ್ಸೂಚಿ ಮುದ್ರಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯ ಹಾಕುತ್ತಿರುವದು ಶ್ಲಾಘನೀಯ ಎಂದರು.
ಕರ್ನಾಟಕ ವಿಶ್ವ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಜೆ. ಎಂ ಚಂದುನವರ ಗ್ರಾಮೀಣ ವರದಿಗಾರಿಕೆ ಮತ್ತು ಸವಾಲುಗಳ ಕುರಿತು ಉಪನ್ಯಾಸ ನೀಡುತ್ತಾ ಪತ್ರಕರ್ತರು ತಮ್ಮ ಜೀವನ ನಿರ್ವಹಣೆಯೊಂದಿಗೆ ಪತ್ರಿಕೋದ್ಯಮದ ಮೌಲ್ಯದ ವೃತ್ತಿ ಕಾಪಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಯಾವುದಾದರು ವೃತ್ತಿ ಇದ್ದರೆ ಅದು ಪತ್ರಕರ್ತರಿಂದ ಸಾಧ್ಯ ಸಮಾಜದಲ್ಲಿ ಯಾವುದೇ ಘಟನೆಗಳು ನಡೆದಾಗ ಧೈರ್ಯದಿಂದ ಪ್ರಶ್ನೆ ಮಾಡುವ ಹಕ್ಕು ಪತ್ರಕರ್ತರಿಗೆ ಇದೆ ಅದನ್ನು ಉಳಿಸುವ ಪ್ರವೃತ್ತಿ ಬೆಳಿಸಿಕೊಳ್ಳಿ ಎಂದರು.

ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಾಗಿಂದ ನೇರವಾಗಿ ಕೋಟ್ಯಾಂತರ ಹಣ ಗ್ರಾಮ ಪಂಚಾಯತಿಗೆ ಹರಿದು ಬರುತ್ತಿದೆ ಆದರೂ ಕೂಡಾ ಹಲವು ಗ್ರಾಮಗಳು ಇನ್ನು ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ,ಗ್ರಾಮೀಣ ಭಾಗದಲ್ಲಿ ಹಾವು ಕಚ್ಚಿ ರೈತರ ಸಾವನೋಪ್ಪುವ ವರದಿಯಾಗುತ್ತಿವೆ ತಾಲ್ಲೂಕಮಟ್ಟದ ಆಸ್ಪತ್ರೆ ಹಾಗೂ ಗ್ರಾಮೀಣ ಭಾಗದ ಪ್ರಾಥಮಿಕ ಕೇಂದ್ರಗಳಲ್ಲಿ ಔಷದಿ ದೊರೆಯುವಂತಾಗಬೇಕು ಅಂತಹ ಮಾಹಿತಿ ಪಡೆದು ಸುದ್ದಿ ಬಿತ್ತರಿಸುವ ಕಡೆ ಗಮನಹರಿಸಿ ಎಂದರು.

ಠಾಣೆಯ ಪಿಎಸ್ ಐ ಬಸವರಾಜ ಯದ್ದಲಗುಡ್ಡ ಮಾತನಾಡಿ ವಿದ್ಯಾರ್ಥಿಗಲು ಮೊಬೈಲ್ ಗಿಳು ಹಾಗೂ ಸಾಮಾಜಿಕ ಜಾಲ ತಾಣ ಕಡೆ ಸಮಯ ನೀಡದೆ ದಿನನಿತ್ಯ ಪತ್ರಿಕೆ ಓದುವ ಹವ್ಯಾಸ ರೂಡಿಸಿಕೊಂಡರೆ ನಿಮ್ಮ ಜೀವನಕ್ಕೆ ಸಹಾಯಕವಾಗುತ್ತದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಜನರು ಮನೆಯಲ್ಲಿ ಕುಳಿತುಕೊಂಡರೆ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಸಾಮಾಜಿಕ ಕಳಕಳಿ ವರದಿ ಬಿತ್ತರಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಅವರ ಕಾರ್ಯ ಅವಿಸ್ಮರಣೀಯವಾಗಿದೆ ಎಂದು ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ ಮಾತನಾಡಿ ಈಗಾಗಲೇ ಸರ್ಕಾರ ಪತ್ರಕರ್ತರಿಗೆ ಕಾರ್ಮಿಕ ಕಾರ್ಡ್,ವಸತಿ ಹಾಗೂ ಬಸ್ ಪಾಸ್ ನೀಡುವ ಬಗ್ಗೆ ಸಿದ್ಧತೆ ನಡೆಸಿದೆ ಅದರ ಜೊತೆಗೆ ಪತ್ರಕರ್ತರನ್ನ ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಬೇಕೆಂದು ಮನವಿ ಮಾಡಲಾಗಿದೆ ಎಂದರು.ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಪ್ರಲ್ಹಾದಗೌಡ ಗೊಲ್ಲಗೌಡರ ಈರಪ್ಪ ನಾಯ್ಕರ ಹಾಗೂ ಪತ್ರಿಕಾ ವಿತರಕರಿಗೆ ಜಾಕೆಟ್ ವಿತರಿಸಿ ಸನ್ಮಾನಿಸಿದರು.

ಕಲಾವಿದ ಹಾಗೂ ಹಿರಿಯ ಪತ್ರಕರ್ತ ರವಿ ಬಡಿಗೇರ ಬಿಡಿಸಿದ ಚಿತ್ರಕಲಾ ಪ್ರದರ್ಶನ ಜರುಗಿತು.ಪತ್ರಕರ್ತ ಸಂಘದಿಂದ ಎಲ್ಲ ಗಣ್ಯರಿಗೆ ನೆನಪಿನ ಕಾಣಿಕೆ ಹಾಗೂ ಶಾಲು ಮಾಲೆ ಹೊದಿಸಿ ಸನ್ಮಾನಿಸಿದರು.ಪಟ್ಟಣದ ಅನ್ನಪೂರ್ಣ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಅನ್ನಪೂರ್ಣ ಹರಮಣ್ಣವರಿಂದ ನೃತ್ಯ ಹಾಗೂ ಗುಡ್ ನ್ಯೂಸ್ ಕಾಲೇಜ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪತ್ರಕರ್ತರ ಸಂಘದ ತಾಲ್ಲೂಕ ಅಧ್ಯಕ್ಷ ಕಲ್ಲಪ್ಪ ಮಿರ್ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಚಿವ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಸೋಮಶೇಖರ್ ಬೆನ್ನೂರ, ವಕೀಲರ ಸಂಘದ ತಾಲ್ಲೂಕಧ್ಯಕ್ಷ ಅಣ್ಣಪ್ಪ ಓಲೇಕಾರ, ಸುಶೀಲೇಂದ್ರಾಚಾರ್ಯ ಕುಂದರಗಿ, ಪರಮಾನಂದ ಒಡೆಯರ, ಹಿರಿಯ ಪತ್ರಕರ್ತ ಎಸ್. ಆರ್ ಪಾಟೀಲ,ಸರ್ಕಾರಿ ನೌಕರ ಸಂಘದ ತಾಲ್ಲೂಕಧ್ಯಕ್ಷ ಆರ್. ಎಂ ಹೊಲ್ತಿಕೋಟಿ, ಗುಡ್ ನ್ಯೂಸ್ ಕಾಲೇಜಿನ ಆಡಳಿತಧಿಕಾರಿ ವರ್ಗಿಸ್ ಕೆ. ಜೆ, ಪ್ರಾಚಾರ್ಯ ನವೀನಾ ರಡ್ಡೇರ ಹಾಗೂ ತಾಲ್ಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ:- ನಿತೀಶಗೌಡ ತಡಸ ಪಾಟೀಲ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!