Ad imageAd image

ವಸತಿ ಗೃಹ ಕಟ್ಟಡ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ಉದ್ಘಾಟನೆ

Bharath Vaibhav
ವಸತಿ ಗೃಹ ಕಟ್ಟಡ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ಉದ್ಘಾಟನೆ
WhatsApp Group Join Now
Telegram Group Join Now

————————————–ಹುಕ್ಕೇರಿ ತಾಲೂಕಾ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಾಣ

ಹುಕ್ಕೇರಿ:  ತಾಲೂಕಾ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ವಸತಿಗೃಹ ಕಟ್ಟಡಗಳ ಸಂಕೇಶ್ವರ ಸಮುದಾಯ ಅರೋಗ್ಯ ಕೇಂದ್ರದಲ್ಲಿ ನಿರ್ಮಿಸಿರುವ ಹೆಚ್ಚುವರಿ ವಾರ್ಡಗಳು ಹಾಗೂ ಔಷಧ ಉಗ್ರಾಣ ಕಟ್ಟಡ ಮತ್ತು ಅಮ್ಮಣಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಅರೋಗ್ಯ ಕೇಂದ್ರ ಕಟ್ಟಡಗಳ ಉದ್ಘಾಟನೆ ಹಾಗೂ ಹುಕ್ಕೇರಿ ತಾಲೂಕ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬ್ಲಾಕ್ ಮಟ್ಟದ ಸಾರ್ವಜನಿಕ ಅರೋಗ್ಯ ಪ್ರಯೋಗಾಲಯದ ಶಂಕು ಸ್ಥಾಪನೆ

ಹುಕ್ಕೇರಿ ಮತ ಕ್ಷೇತ್ರದ ಶಾಸಕರಾದ ನಿಖಿಲ್ ಕತ್ತಿ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭವನ್ನು ಜರಗಿತು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ವೈದ್ಯರ ಬಗ್ಗೆ ಕೆಲವು ವಿಷಗಳನ್ನು ಹೇಳಲಾಯಿತು ಬರುವ ದಿನಗಳಲ್ಲಿ ಆದಷ್ಟು ಬೇಗನೆ ತಜ್ಞ ವೈದ್ಯರನ್ನು ನೇಮಕವನ್ನು ಮಾಡಲಾಗುವುದು ಎಂದು ಸಚಿವರು ಹೇಳಿದರು ಮತ್ತು ಹುಕ್ಕೇರಿ ತಾಲೂಕಗಳಲ್ಲಿ ನಿರ್ಮಿಸಿದ ಸಂಕೇಶ್ವರ ವಸತಿ ಗೃಹ ಉದ್ಘಾಟನಾ ಅಮ್ಮಣ್ಣಗಿ ಗ್ರಾಮದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ಉದ್ಘಾಟನಾ ಮಾಡಲಾಯಿತು.

ಈ ಸಂದರ್ಭದಲ್ಲಿ ಮಹಾವಿರ ನೀಲಜಗಿ, ಮುಖ್ಯ ವೈದ್ಯಧಿಕಾರಿಗಳಾದ ಡಾ. ಮಹಾಂತೇಶ್ ನರಸನ್ನವರ, ಪುರಸಭೆ ಅಧ್ಯಕ್ಷರಾದ ಇಮ್ರಾನ್ ಮೊಮೀನ್, ತಾಲೂಕ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಉದಯ್.ಎಸ್. ಕುಡಚಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಆಯ್. ಪಿ. ಗಡಾದ, ತಶೀಲ್ದಾರ್ ಬಲರಾಮ ಕಟ್ಟಿಮನಿ, ಇ. ಓ. ಟಿ. ಆರ್ ಮಲ್ದಾಡದ, ಸತ್ತೇಪ್ಪಾ ನಾಯಿಕ್, ಬಸವರಾಜ್ ಗಂಗಣ್ಣವರ ರಾಜು ಮುನ್ನೊಳಿ, ಗುರುಕುಲ ಕರ್ನಿ ಹಾಗೂ ಬಹು ಮುಖಂಡರು ಮತ್ತು ವೈದ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!