Ad imageAd image

ಕ್ರೀಡಾಳು ಮೇರಿಕೋಮ್ ಬಾಳಲ್ಲಿ ಬಿರುಗಾಳಿ:  ಗಂಡ- ಹೆಂಡತಿ ದೂರ, ದೂರ

Bharath Vaibhav
ಕ್ರೀಡಾಳು ಮೇರಿಕೋಮ್ ಬಾಳಲ್ಲಿ ಬಿರುಗಾಳಿ:  ಗಂಡ- ಹೆಂಡತಿ ದೂರ, ದೂರ
WhatsApp Group Join Now
Telegram Group Join Now

ಇಂಫಾಲ: ಬಾಲಿವುಡ್ ಸೇರಿದಂತೆ ಸಿನಿ ಸೆಲೆಬ್ರೆಟಿಗಳಲ್ಲಿ ಬಾಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ ವಿಚ್ಚೇದನ ಎಲ್ಲೆಡೆ ವ್ಯಾಪಿಸಿದೆ. ಇದು ಕ್ರಿಕೆಟ್ ಸೇರಿದಂತೆ ಬಹುತೇಕ ಸೆಲೆಬ್ರೆಟಿಗಳ ಬಾಳಿಗೆ ಕೊಳ್ಳಿ ಇಡುತ್ತಿದೆ. ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಶಿಖರ್ ಧವನ್, ಯಜುವೇಂದ್ರ ಚಹಾಲ್ ಸೇರಿದಂತೆ ಪ್ರಮುಖರ ದಾಂಪತ್ಯ ಜೀವನ ಬಿರುಕು ಬಿಟ್ಟು ಬೇರೆ ಬೇರೆಯಾಗಿದ್ದಾರೆ. ಇದೀಗ ಮೇರಿ ಕೋಮ್ ಬಾಳಲ್ಲಿ ಬಿರುಗಾಳಿ ಎದ್ದಿದೆ. ಮೇರಿ ಕೋಮ್ ವೈವಾಹಿಕ ಬದುಕು ವಿಚ್ಚೇದನತ್ತ ಸಾಗಿದೆ. ಇಬ್ಬರೂ ಬೇರೆ ಬೇರೆಯಾಗಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಮೇರಿ ಕೋಮ್ ಹಾಗೂ ಪತಿ ಕೆ ಒನ್ಲರ್ ಇದೀಗ ಬೇರೆ ಬೇರೆಯಾಗಿ ನೆಲೆಸಿದ್ದಾರೆ. ಇಬ್ಬರ ನಡುವಿನ ಮನಸ್ತಾಪ ತೀವ್ರಗೊಂಡ ಹಿನ್ನಲೆಯಲ್ಲಿ ಈಗಾಗಲೇ ಇಬ್ಬರ ಬೇರೆ ಬೇರೆಯಾಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮೇರಿ ಕೋಮ್ ತನ್ನ ನಾಲ್ವರು ಮಕ್ಕಳೊಂದಿಗೆ ಫರೀದಾಬಾದ್‌ಗೆ ಸ್ಥಳಾಂತರಗೊಂಡಿದ್ದಾರೆ. ಇತ್ತ ಪತಿ ಕೆ ಒನ್ಲರ್ ದೆಹಲಿಯಲಿ ನೆಲೆಸಿದ್ದಾರೆ ಎಂದು ವರದಿಯಾಗಿದೆ. ಮಾತುಕತೆ, ಸಂಧಾನ ಎಲ್ಲಾ ಪ್ರಕ್ರಿಯೆ ಅಂತ್ಯಗೊಂಡು ಇಬ್ಬರು ಬೇರೆ ಬೇರೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಚ್ಚೇದನಕ್ಕೆ ಕಾರಣವೇನು?
ಮೇರಿ ಕೋಮ್ ಹಾಗೂ ಕೆ ಒನ್ಲರ್ ಪ್ರೀತಿಸಿ ಮದುವೆಯಾದ ಜೋಡಿ. ಇಬ್ಬರಿಗೆ ನಾಲ್ವರು ಮಕ್ಕಳಿದ್ದಾರೆ. ಮೇರಿ ಕೋಮ್ ಬಾಕ್ಸಿಂಗ್ ಪಯಣಕ್ಕ ನೀರೆರದ ಪತಿ ಕೆ ಒನ್ಲರ್ ಪ್ರತಿ ಸಾಧನೆಯಲ್ಲೂ ಕೈಜೋಡಿಸಿದ್ದರು. ಈ ಅನ್ಯೋನ್ಯ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡು ಕೆಲ ವರ್ಷಗಳೇ ಉರುಳಿದೆ. ಪ್ರಮುಖ 2022ರ ಬಳಿಕ ಇವರ ಸಂಸಾರದಲ್ಲಿ ಮನಸ್ತಾಪಗಳೇ ಹೆಚ್ಚಾಗಿತ್ತು ಅನ್ನೋದು ಬಯಲಾಗಿದೆ.  ಪತಿ ಕೆ ಒನ್ಲರ್ ಸಾಹಸದಿಂದ 2 ರಿಂದ 3 ಕೋಟಿ ರೂಪಾಯಿ ನಷ್ಟವಾಗಿದೆ. ಇಷ್ಟೇ ಅಲ್ಲ ಪತಿ ಹೆಚ್ಚಿನ ಸಮಯವನ್ನು ರಾಜಕೀಯ ಎಂದು ಕಳೆಯಲು ಆರಂಭಿಸಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ. ಇವೆಲ್ಲಾ ಸಮಸ್ಯೆಗಳು ಮೇರಿ ಕೋಮ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ.

WhatsApp Group Join Now
Telegram Group Join Now
Share This Article
error: Content is protected !!