ದೆಹಲಿ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯ 48 ನೇ ಲೀಗ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ರೋಚಕ ಹಣಾಹಣಿಯಲ್ಲಿ 14 ರನ್ ಗಳಿಂದ ಮಣಿಸಿತು.
ಇಲ್ಲಿ ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರುಗಳಲ್ಲಿ 9 ವಿಕೆಟ್ ಗೆ 204 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ ದೆಹಲಿ ಕ್ಯಾಪಿಟಲ್ಸ್ ತಂಡವು 9 ವಿಕೆಟ್ ಗೆ 190 ರನ್ ಗಳನ್ನು ಮಾತ್ರ ಗಳಿಸಿ 14 ರನ್ ಗಳಿಂದ ಸೋಲನುಭವಿಸಿತು.
ಈ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತಾನಾಡಿದ 10 ಪಂದ್ಯಗಳಿಂದ 4 ರಲ್ಲಿ ಗೆಲುವು 5 ರಲ್ಲಿ ಸೋಲು ಒಂದು ಪಂದ್ಯ ಅನಿರ್ನಿತ ಸೇರಿದಂತೆ 9 ಅಂಕಗಳನ್ನು ಸಂಪಾದಿಸಿ 7 ನೇ ಸ್ಥಾನದಲ್ಲಿದೆ. ದೆಹಲಿ ಕ್ಯಾಪಿಟಲ್ಸ್ ತಂಡವು 10 ಪಂದ್ಯಗಳಿಂದ 12 ಅಂಕಗಳಿಸಿ 4 ನೇ ಸ್ಥಾನವನ್ನು ಕಾಯ್ದುಕೊಂಡಿದೆ.
ಸ್ಕೋರ ವಿವರ:
ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರುಗಳಲ್ಲಿ 9 ವಿಕೆಟ್ ಗೆ 204
ಅಂಕ್ರಿಶ್ ರಘುವಂಶಿ 44 ( 32 ಎಸೆತ, 3 ಬೌಂಡರಿ, 2 ಸಿಕ್ಸರ್, ರಿಂಕು ಸಿಂಗ್ 36 (25 ಎಸೆತ, 3 ಬೌಂಡರಿ, 1 ಸಿಕ್ಸರ್)
ನರೇನ್ 27 ( 16 ಎಸೆತ, 2 ಬೌಂಡರಿ, 2 ಸಿಕ್ಸರ್) ಗುರಬಾಜ್ 26 ( 12 ಎಸೆತ, 5 ಬೌಂಡರಿ, 1 ಸಿಕ್ಸರ್ )
ಮಿಚೆಲ್ ಸ್ಟಾರ್ಕ್ 43 ಕ್ಕೆ 3
ದೆಹಲಿ ಕ್ಯಾಪಿಟಲ್ಸ್ 9 ವಿಕೆಟ್ ಗೆ 190
ಅಕ್ಷರ ಪಟೇಲ್ 43 ( 23 ಎಸೆತ, 4 ಬೌಂಡರಿ, 3 ಸಿಕ್ಸರ್) ವಿಪ್ರಾಜ್ ನಿಗಮ 38 ( 19 ಎಸೆತ, 5 ಬೌಂಡರಿ, 2 ಸಿಕ್ಸರ್)
ಪ್ಲಾಪ್ ಡುಪ್ಲೆಸಿಸ್ 62 ( 45 ಎಸೆತ, 7 ಬೌಂಡರಿ, 2 ಸಿಕ್ಸರ್ ) ಸುನೀಲ್ ನರೇನ್ 29 ಕ್ಕೆ 3)
ಪಂದ್ಯ ಶ್ರೇಷ್ಠ : ಸುನೀಲ್ ನರೇನ್