Ad imageAd image

ನವಲೂರನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಧಾರವಾಡ ಧ್ವನಿ ವತಿಯಿಂದ ಪಾದಯಾತ್ರೆ

Bharath Vaibhav
ನವಲೂರನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಧಾರವಾಡ ಧ್ವನಿ ವತಿಯಿಂದ ಪಾದಯಾತ್ರೆ
WhatsApp Group Join Now
Telegram Group Join Now

ಧಾರವಾಡ :-ಅವಳಿನಗರ ಮಧ್ಯೆದಲ್ಲಿನ ಬಿ.ಆರ್.ಟಿ.ಎಸ್. ಸಂಚಾರದಿಂದ ಆಗುತ್ತಿರುವ ಅನಾನುಕೂಲತೆ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಜುಲೈ.15 ರಂದು ನವಲೂರನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಧಾರವಾಡ ಧ್ವನಿ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ಸದ್ಯ ಬಿಆರ್ ಟಿಎಸ್ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಹಲವು ತೊಂದರೆಯಾಗುತ್ತಿದೆ.ಅವೈಜ್ಞಾನಿಕ ಈ ವ್ಯವಸ್ಥೆ ಸುಧಾರಣೆ ಮಾಡುವಂತೆ ಜಿಲ್ಲಾಡಳಿತ ಮತ್ತು ಸಚಿವರ ಗಮನಕ್ಕೂ ತರಲಾಗಿದೆ. ಆದರೂ ಸುಧಾರಣೆ ಕೈಕೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ.ಈ ಹಿನ್ನೆಲೆಯಲ್ಲಿ ಸಂಬಂಧಿಸಿದವರ ಗಮನ ಸೆಳೆಯುವುದರ ಜೊತೆಗೆ ಒತ್ತಡ ತರುವ ಪ್ರಯತ್ನ ಮಾಡಲಾಗುವುದು

ಜುಲೈ 15 ರಂದು ಕೈಗೊಳ್ಳುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಬಯಸುವ ಸಮಾನ ಮನಸ್ಕ ಸಂಘಟನೆಗಳು ಸಹಕಾರ ನೀಡಬಹುದು. ಆಸಕ್ತರು ಮಂಜುನಾಥ ನೀರಲಕಟ್ಟಿ (9448267451), ಮಂಜುನಾಥ ನಡಟ್ಟಿ(9964440262) ಸಂಪರ್ಕಿಸಬಹುದು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಧಾರವಾಡ ಧ್ವನಿ ಪದಾಧಿಕಾರಿಗಳಾದ ಮಂಜು ನಡಟ್ಟಿ, ವೆಂಕಟೇಶ ರಾಯ್ಕರ್, ಕಲಂದರ ಮುಲ್ಲಾ, ಭೀಮಪ್ಪ ಕಾಸಾಯಿ, ಶರಣಗೌಡ ಗಿರಡ್ಡಿ, ಮಂಜುನಾಥ ನೀರಲಕಟ್ಟಿ, ಪುಂಡಲೀಕ ತಳವಾರ, ಪಾಲ್ಗೊಂಡಿದ್ದರು.

ವರದಿ:-ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!