ಹುಬ್ಬಳ್ಳಿ : -ವಕ್ಫ್ ಎಂಬ ವೈರಸ್ ಇಡೀ ದೇಶದಲ್ಲಿ ಹರಡಿಕೊಳ್ಳುತ್ತಿದೆ. ಹೀಗೆ ಇನ್ನು ೧೫ ವರ್ಷ ನಡೆದರೆ ಭಾರತವನ್ನು ೨೦೪೭ ರಲ್ಲಿ ಇಸ್ಲ್ಮಾ ರಾಷ್ಟ್ರ ಮಾಡುವ ಅವರ ಯೋಜನೆ ಸಫಲವಾಗುತ್ತದೆ. ಇದು ಅತ್ಯಂತ ಗಂಭೀರವಾದ ವಿಚಾರ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಕಳವಳ ವ್ಯಕ್ತಪಡಿಸಿದರು. ಈ ಕುರಿತು ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಡೀ ದೇಶದಲ್ಲಿ ವಕ್ಫ ಬೋರ್ಡ್ ವಿಚಾರವಾಗಿ ಚರ್ಚೆ, ಚಿಂತನ-ಮಂಥನ ಸಂಘರ್ಷ ನಡೀತಿದೆ. ದೇಶದಲ್ಲಿ ದೇವಸ್ಥಾನ, ರೈತರ ಜಮೀನು, ಸರ್ಕಾರಿ ರಸ್ತೆ, ಆಪೀಸ್‌ಗಳು ವಕ್ಫ್‌ಗೆ ಹೋಗುತ್ತಿವೆ.

ವಕ್ಫ ಬೋರ್ಡ್ ಗೂಳಿ ತರಹ ನುಗ್ಗುತ್ತಿದೆ. ದೇಶಕ್ಕೆ ದೊಡ್ಡ ಗಂಡಾಂತರ ಎದುರಾಗಿದೆ ಎಂದು ಅವರು ಆರೋಪಿಸಿದರು. ಇಸ್ಲಾಂ ಜನಸಂಖ್ಯೆ ಹಾಗೂ ಭೂ-ಪ್ರದೇಶ ಜಾಸ್ತಿ ಮಾಡಿದ್ರೆ, ಇಸ್ಲಾಂ ದೇಶ ಮಾಡಿಬಿಡಬಹುದು.
ಇಲ್ಲಿಯ ವರೆಗೂ ಇಸ್ಲಾಂ ಮಾಡಿದ್ದೂ ಇದನ್ನೆ. ಇದೀಗ ನಮ್ಮ ದೇಶದಲ್ಲೂ ಇದೇ ಆಗುತ್ತಿದೆ ಎಂದು ಅವರು ವಿವರಿಸಿದರು. ಕೇಂದ್ರ ಸರ್ಕಾರ ವಕ್ಫ ಕಾನೂನು ತಿದ್ದುಪಡಿ ಅಂದ ತಕ್ಷಣ ಇಡೀ ದೇಶದಲ್ಲಿ ಮುಸ್ಲಿಂರು ಗಲಾಟೆ ಮಾಡಿದ್ರು. ಆದರೆ ಇದು ದೇಶದ ಅಸ್ತಿತ್ವದ ಪ್ರಶ್ನೆಯಾಗಿದೆ ಎಂದರು. ೨೦೦೬ ರಲ್ಲಿ ೧.೨೦ ಲಕ್ಷ ಎಕರೆ ವಕ್ಫ್ ಭೂಮಿ ಇತ್ತು. ಇವತ್ತು ೯ ಲಕ್ಷ ೪೦ ಸಾವಿರ ಎಕರೆ ಭೂಮಿಯಾಗಿದೆ.
ನಾಲ್ಕು ಮುಸ್ಲಿಂ ರಾಷ್ಟ್ರಗಳು ಸೇರಿದರೂ ಇಷ್ಟು ಜಮೀನು ಇಲ್ಲ. ವಕ್ಫ್ ಬೋರ್ಡ್ ದೇಶದಲ್ಲಿ ಇಷ್ಟು ಜಮೀನು ಅತಿಕ್ರಮಣ ಮಾಡಿಕೊಂಡಿದೆ. ಈ ಅಪಾಯ ಕಂಡು ಮೋದಿ ಕ್ರಮ ಕೈಗೊಳ್ಳುತ್ತಿದ್ದಾರೆ.ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿ ರೈತರ ಹೆಸರು ತೆಗೆದು ಹಾಕಿದ್ದಾರೆ.ಗರಗದಲ್ಲೂ ಹಾಗೆ ಆಗಿದೆ. ಪ್ರಾಚ್ಯ ವಸ್ತು ಇಲಾಖೆಯ ಕಟ್ಟಡಗಳು ವಕ್ಫಗೆ ಸೇರಿವೆ ಅಂತಿದ್ದಾರೆ. ಕಟ್ಟಡದ ಮೇಲೆ ಬೋರ್ಡ್ ಇದ್ರು, ಒಳಗಡೆ ಮಸೀದಿ, ಮದರಸಾ ಆಗಿವೆ. ಹೊನಗೋಡು ಗ್ರಾಮದಲ್ಲಿ ಅಂದಾ ದಂಧೆ ನಡೀತಿದೆ.ಇದಕ್ಕೆ ಕಾರಣವಾಗಿರುವ ಕಾಂಗ್ರೆಸ್ ಇಡೀ ದೇಶದ ಕ್ಷಮೆ ಕೇಳಬೇಕು ಎಂದು ಮುತಾಲಿಕ ಆಗ್ರಹಿಸಿದರು.ಸುಪ್ರೀಂ ಕೋರ್ಟ್ ಅಧಿಕಾರ ಮೀರಿ ಇವರಿಗೆ ಅಧಿಕಾರ ಕೊಟ್ಟವರು ಯಾರು? ವಕ್ಫ್ ಬೋರ್ಡ್‌ಗೆ ಅಧಿಕಾರ ಕೊಟ್ಟವರು ಯಾರೂ ? ನಮ್ಮಲ್ಲಿ ಬಾಬರ್, ಔರಂಗಜೇಬ್ ಆಡಳಿತ ಇದೆಯಾ ? ಎಂದು ಪ್ರಶ್ನಿಸಿದರು.
ಜಮೀರ್ ಅಹಮ್ಮದ್ ದೇಶ ದ್ರೋಹಿ:ಇಡೀ ರಾಜ್ಯದಲ್ಲಿ ವಕ್ಫ ಅದಾಲತ್ ನಡೆಸಿ ಆರ್ಡರ್ ಮಾಡಿದ್ದೇನೆ. ಸಿಎಂ ಆದೇಶದಂತೆ ಬಂದಿದ್ದೇನೆಂದು ಸಚಿವ ಜಮೀರ್ ಹೇಳ್ತಾರೆ. ಜಮೀರ್ ಅಹಮ್ಮದ್‌ರನ್ನು ಗಡಿಪಾರು ಅಷ್ಟೇ ಅಲ್ಲ, ಜಮೀರ್‌ರನ್ನ ಗಲ್ಲಿಗೇರಿಸಬೇಕು. ಜಮೀರ್‌ನಿಂದ ಸಾವಿರಾರು ರೈತರು ಅತಂತ್ರ ಆಗುತ್ತಿದ್ದಾರೆ. ಅಧಿಕಾರದ ಮದ ಏರಿದೆ. ಚಾಮರಾಜನಗರದಲ್ಲಿ ೨೫ ಸಾವಿರ ಬಾಂಗ್ಲಾ ಮುಸ್ಲಿಂರನ್ನು ಜಮೀರ್ ಸಾಕಿದ್ದಾನೆ.
ಸಿಎಂಗೆ ತಾಕತ್ತಿದ್ರೆ ಅವರನ್ನು ಒದ್ದು ಹೊರಗೆ ಹಾಕಲಿ. ಕರ್ನಾಟಕದಲ್ಲಿನ ಬೆಳವಣಿಗೆಗೆ ಜಮೀರ್ ಕಾರಣ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು.ಕೆಲವು ಮುಸ್ಲಿಂ ಡಿಸಿಗಳು, ತಹಸೀಲ್ದಾರರು, ಅಧಿಕಾರಿಗಳು ಇವರ ಜೊತೆ ಕೈ ಜೋಡಿಸಿದ್ದಾರೆ. ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿಯಲ್ಲಿ ಮುಸ್ಲಿಂ ಪಿಡಿಓ ಇದಾನೆ. ಮುಸ್ಲಿಂ ಅಧಿಕಾರಿಗಳ ವಿರುದ್ಧ ತನಿಖೆ ಆಗಬೇಕು.ಅವರಿಗೆ ಶಿಕ್ಷೆಯಾಗಬೇಕು ಎಂದೂ ಆಗ್ರಹಿಸಿದರು.
ವರದಿ:- ಸುಧೀರ್ ಕುಲಕರ್ಣಿ




