ಬೆಳಗಾವಿ : ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ ಎಚ್ ಮುನಿಯಪ್ಪ ಮಾದಿಗ ಸಮಾಜ ಆರ್ಥಿಕವಾಗಿ ನೌಕ್ರಿಗಳಲ್ಲಿ 25% ನಲ್ಲಿ 1% ಕೂಡ ನಾವಿಲ್ಲ ಎಂದು ಸಮಾಜದ ಆರ್ಥಿಕ ಸ್ಥಿತಿ ಹಾಗೂ ಸಮಾಜಕ್ಕೆ ಸಮಾನತೆ ಕುರಿತಾಗಿ ತಮ್ಮ ವಿಷಾದ ವ್ಯಕ್ತಪಡಿಸಿದರು ,
ಇದೇ ಸಂದರ್ಭದಲ್ಲಿ ನಾವು ಯಾವ ಜಾತಿ ಉಪಜಾತಿ ಗಳ ವಿರೋಧಿಯಲ್ಲ ಆದರೆ ಜಾತಿಯ ಜನಸಂಖ್ಯೆದ ಆಧಾರದ ಮೇಲೆ ಪಡೆಯುವುದು ನಮ್ಮ ಹಕ್ಕಾಗಿದೆ ಒಳ ಮೀಸಲಾತಿ 35 ವರ್ಷಗಳ ನಿರಂತರ ಹೋರಾಟದಿಂದ ದೇಶದ ಸರ್ವೋಚ್ಚ ನ್ಯಾಯಾಲಯ ಆದೇಶ ಮಾಡಿದೆ ಅದರಂತೆ ಬೇರೆ ರಾಜ್ಯಗಳಲ್ಲಿ ಎಲ್ಲೆಲ್ಲಿ ಈ ಹೋರಾಟ ನಡೆದಿದೆ ಅಲ್ಲಿಯೂ ಕೂಡ ಒಳಮ್ಮ ಮೀಸಲಾತಿ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ತೆಲಂಗನ ಮುಖ್ಯಮಂತ್ರಿಗಳಾದ ಜಯವಂತ ರೆಡ್ಡಿ ಅವರು ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಹರಿಯಾಣ ಈಗಾಗಲೇ ಒಳ ಮೀಸಲಾತಿ ಜಾರಿಗೆ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದೆ . ನಿವೃತ್ತ ನ್ಯಾಯಾಧೀಶರ ಒಂದು ಕಮಿಟಿ ರಚನೆ ಮಾಡಲಾಗಿದ್ದು 60 ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ತೀರ್ಮಾನಿಸಲಾಗಿದೆ ಅದರಂತೆ ರಾಜ್ಯದಲ್ಲೂ ಕೂಡ ಒಳ ಮೀಸಲಾತಿ ನೀಡುವ ಪ್ರಕ್ರಿಯೆ ಪ್ರಾರಂಭವಾಗಬಹುದು ಎಂಬ ಆಶಾ ವ್ಯಕ್ತಪಡಿಸಿದರು ಬ್ಯಾಕ್ಲಾಕುದ್ದೆಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಶೀಘ್ರದಲ್ಲಿ ಮುಖ್ಯಮಂತ್ರಿಗಳ ಜೊತೆ ಈ ವಿಷಯದಲ್ಲಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು ಕರ್ನಾಟಕ ಮಾದರ ಮಹಾಸಭಾ ಸಮುದಾಯದ ಸಭೆಯಲ್ಲಿ ಒಳ ಮೀಸಲಾತಿ ಕುರಿತು ಸಮುದಾಯದ ನಾಯಕರುಗಳ ಜೊತೆ ಸಭೆ ನಡೆಸಿದ್ದರು.
ವರದಿ : ಪ್ರತೀಕ ಚಿಟಗಿ