ಕೊಲ್ಕೊತ್ತಾ: ನಾನು ಇಂಡಿಯಾ ಮೈತ್ರಿಕೂಟದ ಭಾಗ, ನಾಳೆಯ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಶರತ್ ಪವಾರ್, ಉದ್ದವ್ ಠಾಕ್ರೆ ಜೊತೆಗೆ ಮಾತುಕತೆ ನಡೆಸಿದ್ದೇನೆ. ನರೇಂದ್ರ ಮೋದಿ ಆಡಳಿತದ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿತ್ತು.ಇನ್ನು ಮುಂದೆ ತನಿಖಾ ಸಂಸ್ಥೆಗಳ ದುರ್ಬಳಕೆ ಆಗದಂತೆ ತಡೆಯಬೇಕು ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಹಿನ್ನೆಲೆ ಮೋದಿ ರಾಜೀನಾಮೆ ನೀಡಬೇಕು. ವಿಶ್ವಾಸ ಕಳೆದುಕೊಂಡ ಮೋದಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಮಮತಾ ಬ್ಯಾನರ್ಜಿ, ಬಿಜೆಪಿ ಬೆನ್ನೆಲುಬನ್ನು ನಾವು ಮುರಿದಿದ್ದೇವೆ ಎಂದು ಚುನಾವಣಾ ಫಲಿತಾಂಶದ ಬಗ್ಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂದೇಶ್ ಖಾಲಿ ಬಗ್ಗೆ ಸುಳ್ಳು ಹಬ್ಬಿಸಿದರು. ಬಿಜೆಪಿಯವರು ಟಿಡಿಪಿ, ಜೆಡಿಯು ಆಸರೆಯ ಮೇಲೆ ನಿಂತಿದ್ದಾರೆ. ಶ್ರೀರಾಮ ಮಂದಿರವನ್ನು ಚುನಾವಣೆ ವಿಷಯ ಮಾಡಿದರು. ಆದರೆ ಅಯೋಧ್ಯೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಮೂರನೇ ಎರಡರಷ್ಟು ಸೀಟು ಬಿಜೆಪಿಗೆ ಸಿಕ್ಕಿಲ್ಲ. ನರೇಂದ್ರ ಮೋದಿ ಸಂವಿಧಾನ ಬದಲಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.