Ad imageAd image

ನಾಳೆ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ ಅರ್ಧವೂರ

Bharath Vaibhav
ನಾಳೆ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ ಅರ್ಧವೂರ
WhatsApp Group Join Now
Telegram Group Join Now

ಅಥಣಿ: ನಾಳೆ ನಡೆಯಲಿರುವ ಒಳಮೀಸಲಾತಿ ಹೋರಾಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಅಥಣಿ ತಾಲೂಕಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಹಣಮಂತ ಅರ್ಧವೂರ ತಿಳಿಸಿದರು. ಅವರ ಅಥಣಿಯಲ್ಲಿ ಮಾತನಾಡಿ ನಾಳೆ ನಡೆಯುವ ಒಳಮೀಸಲಾತಿ ಹೋರಾಟ ಬಿಜಿಪಿ ನೇತೃತ್ವದಲ್ಲಿ ಹೋರಾಟವಾಗಿದೆ ನಾವು ಕಾಂಗ್ರೆಸ್ ಪಕ್ಷದ ನಿಷ್ಡಾವಂತ ಕಾರ್ಯಕರ್ತರಾದಿದ್ದು ಸರ್ಕಾರದ ಮೇಲೆ ನಂಬಿಕೆ ಇದೆ ಈ ತಿಂಗಳಲ್ಲಿ ನಮಗೆ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಗೆ ಮಾಡುತ್ತೆ ಎಂದು ಎರಡು ಮೂರು ದಿನಗಳಲ್ಲಿ ನ್ಯಾಯಮೂರ್ತಿ ನಾಗಮಹೊನದಾಸ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಅದನಂತರ ಸರ್ಕಾರದ ಮೇಲೆ ನಮ್ಮ ಸಮುದಾಯದ ಸಚಿವರಾದ ಆರ್ ಬಿ ತಿಮ್ಮಾಪೂರ ಹಾಗೂ ಕೆ ಎಚ್ ಮುನಿಯಪ್ಪ ಅವರು ಸರ್ಕಾರ ಮೇಲೆ ಒತ್ತಡ ಹೇರಿ ಒಳಮೀಸಲಾತಿ ಜಾರಿಮಾಡುತ್ತಾರೆ ಈ ತಿಂಗಳಲ್ಲಿ ವರದಿ ಜಾರಿ ಯಾಗದಿದ್ದರೆ ನಾವು ನೀವು ಕೂಡಿ ಹೋರಾಟ ರೂಪಿಸೊಣ ಎಂದರು. ರಾಜ್ಯದಲ್ಲಿ ಒಳ ಮೀಸಲಾತಿ ಹೋರಾಟ ಹಿಂದಿನಿಂದಲೂ ಇತ್ತು 2005 ರಲ್ಲಿ ಅದಿನ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣಾ ಸರ್ಕಾರದ ಅವದಿ ಯಲ್ಲಿ ರಾಜ್ಯದ ಮಾದಿಗ ಸಮುದಾಯದ ಪ್ರಬಲ ನಾಯಕರು ಆರ್ ಬಿ ತಿಮ್ಮಾಪೂರ ಅವರು ಎಪಿಎಮ್ ಸಿ ಕ್ಯಾಬಿನೆಟ್ ಸಚಿವರಾಗಿದ್ದರು ಒಳಮೀಸಲಾತಿ ಜಾರಿಗೆ ಸತತ ಪ್ರಯತ್ನ ಮಾಡಿ ಮುಖ್ಯಂಮತ್ರಿ ಎಸ್ ಎಮ್ ಕೃಷ್ಣಾ ಅವರ ಮೇಲೆ ಒತ್ತಡ ಹೇರಿ ನ್ಯಾಯಮೂರ್ತಿ ಏ ಜೆ ಸದಸಾಶಿ ಆಯೋಗ ರಚನೆ ಮಾಡಲು ಆರ್ ಬಿ ತಿಮ್ಮಪೂರ ರವರು ಶ್ರಮಿಸಿದರು ಸದಾಶಿವ ಅಸಯೋಗ 2012 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅದಿನಿಂದ ಇಲ್ಲಿಯವರಿಗೆ ರಾಜ್ಯದಲ್ಲಿ ಒಳ ಮೀಸಲಾತಿ ಹೋರಾಟದ ಕಾವು ಜೋರಾಗಿದ್ದು ಏ ಜೆ ಸದಾಶಿವ ಆಯೋಗವನ್ನು ಬಿಜೆಪಿ ಸರ್ಕಾರ ರದ್ದು ಮಾಡಿತು ಈಗ ಕಾಂಗ್ರೆಸ್ ಸರ್ಕಾರ ಮತ್ತೆ ಒಳಮೀಸಲಾತಿ ಜಾರಿಗೆ ನ್ಯಾಯಮೂರ್ತಿ ನಾಗಮಹೋನದಾಸ್ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿದೆ ವರದಿ ಸಿದ್ದವಾಗಿದ್ದು ಈ ವಾರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಜ್ಜಾಗಿದೆ ಈ ಸಂದರ್ಭದಲ್ಲಿ ಬಿಜಿಪಿ ನೇತೃತ್ವದಲ್ಲಿ ಆಯಾ ಜಿಲ್ಲಾ ಅಧಿಕಾರಿಗಳ ಕಚೇರಿ ಮುಂದೆ ನಾಳೆ ಶುಕ್ರವಾರ ಹೋರಾಟ ಹಮ್ಮಿಕೊಳ್ಳಲಾಗಿದೆ ಈ ಹೋರಾಟಕ್ಕೆ ಅಥಣಿಯಿಂದ ನಾವು ಬೆಂಬಲ ನೀಡುತ್ತಿಲ್ಲ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕಾಂಗ್ರಸ್ ಮುಖಂಡರಾದ ಸುನೀತಾ ಐಹೊಳೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಕುಮಾರ ಗಸ್ತಿ ಸಂತೋಷ ಹಾದಿಮನಿ ರಾಜು ರಾಜಿಂಗಳೆ ಪರಶುರಾಮ ಮಾದರ ಮುಂತಾದವರು ಸಮಾಜದ ಮುಖಂಡರು ಉಪಸ್ಥಿತಿ ಇದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!