Ad imageAd image

ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಜೈನ ಧರ್ಮದ ತತ್ವಗಳನ್ನು ನಾವು ಅನುಸರಿಸಬೇಕು: ಅಮರನಾಥ ಜಾರಕಿಹೋಳಿ

Bharath Vaibhav
ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಜೈನ ಧರ್ಮದ ತತ್ವಗಳನ್ನು ನಾವು ಅನುಸರಿಸಬೇಕು: ಅಮರನಾಥ ಜಾರಕಿಹೋಳಿ
WhatsApp Group Join Now
Telegram Group Join Now

ಗೋಕಾಕ : ಜಗತ್ತಿಗೆ ಶಾಂತಿ ಹಾಗೂ ಅಹಿಂಸೆಯನ್ನು ಬೋಧಿಸಿ ಜೈನಧರ್ಮದ ಉಗಮದಲ್ಲಿ ಪ್ರಮುಖ ಪಾತ್ರವಹಿಸಿರುವ ಮಹಾವೀರರ ಆದರ್ಶ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜಗತ್ತಿನ ಸರ್ವತೋಮುಖ ಒಳಿತನ್ನು ಬಯಸಬೇಕು ಎಂದು ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದ ಭಗವಾನ ಮಹಾವೀರ ಜಯಂತಿಯಲ್ಲಿ ಕೆ,ಎಮ್,ಎಪ್, ನಿರ್ದೇಶಕ ಅಮರನಾಥ ಜಾರಕಿಹೋಳಿ ಇವರು ನೂತನ ಕೀರ್ತಿ ಸ್ತಂಭ ಉದ್ಘಾಟಿಸಿ ಹೇಳಿದರು.

ಜೈನ ಭಾಂದವರಿಗೆ ಶುಭ ಕೊರಿ ಜಗತ್ತಿಗೆ ಹಾಗೂ ಮನುಕುಲಕ್ಕೆ ಅಹಿಂಸಾ ತತ್ವ ಬಹಳ ಅವಶ್ಯಕವಾಗಿದೆ. ಅಂತಹ ಮನುಕುಲಕ್ಕೆ ದಾರಿದೀಪವಾಗಿ ಜಗತ್ತಿಗೆ ಬೆಳಕು ನೀಡಿದವರು ಭಗವಾನ್ ಮಹಾವೀರರು.ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಜೈನ ಧರ್ಮದ ತತ್ವಗಳನ್ನು ನಾವು ಅನುಸರಿಸಬೇಕು.

ಜೈನಧರ್ಮದ ಮೂಲ ತತ್ವ ‘ನೀನು ಜೀವಿಸು ಇತರರನ್ನು ಜೀವಿಸಲು ಬಿಡು’ ಎಂಬುದಾಗಿದೆ.ಜೈನಧರ್ಮದ ಕೊಡುಗೆ ಅಪಾರವಾದುದು ಎಂದರು.

ಇನ್ನು ಪಾರಶ್ವನಾಥ ಪುರಾತನ ಜೈನಮಂದಿರ ಬಸದಿ ಮತ್ತು ಹೊಸ ಪಾರಶ್ವನಾಥ ಬಸದಿಯಿಂದ ಎತ್ತಿನ ಬಂಡಿಯಲ್ಲಿ ಭಗವಾನ ಮಹಾವೀರ ಭಾವ ಚಿತ್ರವನ್ನಿಟ್ಟು ಜಾಜ ಪತಂಗ, ಬ್ಯಾಂಡಗಳ ವಾದ್ಯಗಳೊಂದಿಗೆ ಪ್ರಾರಂಭವಾದ ಮೆರವಣಿಗೆಯೂ ಮುಖ್ಯ ಬಜಾರ,ಮಹಾವೀರ ವೃತ್ತದ ಮೂಲಕ ತೆರಳಿ ಮಹಾವೀರ ನಗರದಲ್ಲಿ ಪಲ್ಲಕ್ಕಿಯಲ್ಲಿದ್ದ ವಿಗ್ರಹಕ್ಕೆ ಶ್ರಾವಕ ಶ್ರಾವಕಿಯರು ಪೂಜೆ ಸಲ್ಲಿಸಿದರು.ದಾರಿಯೂದ್ದಕ್ಕೂ ಭಗವಾನ್ ಮಹಾವೀರ ಕಿ ಜೈ ಘೋಷಣೆಯನ್ನು ಕೂಗುತಿದ್ದರು.

ಇದೇ ಸಂದರ್ಭದಲ್ಲಿ ಕ್ರಾಂತಿ ಸ್ತಂಭ ನಿರ್ಮಿಸಿದ ಶಿಲ್ಪಿಗಳಿಗೆ ಜೈನ ಭಾಂದವರು ಸತ್ಕರಿಸಿದರು.
ಅಪ್ಪಾಸಾಬ ಪಾಟೀಲ, ದರೆಪ್ಪಾ ಪಾಟೀಲ, ನೇಮಣ್ಣಾ ಖನಗಾಂವಿ, ನೇಮಿನಾಥ ಚೌಗಲಾ, ಸಚೀನ ಸಮಯ, ಸಂಜು ಖನಗಾವಿ, ಸುಭಾಸ ಚೌಗಲಾ, ಕಲ್ಲಪ್ಪಾ ಚೌಗಲಾ, ಅರುಣ ಹೊಳಿ ಸೇರಿದಂತೆ ಇನ್ನೂಳಿದ ಮುಖಂಡರು, ಹಿರಿಯರು ಬಾಗಿಯಾಗಿದ್ದರು.

ಮನೋಹರ ಮೇಗೇರಿ

WhatsApp Group Join Now
Telegram Group Join Now
Share This Article
error: Content is protected !!