ಹುಬ್ಬಳ್ಳಿ:-ಈದ್ಗಾ ಮೈದಾನದ ಗಣೇಶ ಪ್ರತಿಷ್ಠಾಪನೆ ವಿಚಾರದಲ್ಲಿ ಗಲಾಟೆ ಆಗತ್ತೆ, ಗಲಭೆ ಆಗತ್ತೆ,ಬೆಂಕಿ ಹತ್ತತ್ತೆ ಎಂದು ಬಹಳ ಜನ ಕಾಯ್ತಾ ಇದ್ರು.
ಆದ್ರೆ ಹಿಂದೂಗಳ ಶಾಂತಪ್ರೀಯರು.ಯಾವದೇ ಗಲಾಟೆ ಆಗಿಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.ಹುಬ್ಬಳ್ಳಿಯ ರಾಣಿ ಚನ್ನಮ್ಮಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮುತಾಲಿಕ್ ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆ ಯಶಶ್ವಿಯಾಗಿದೆ.
ಅತ್ಯಂತ ಶಾಂತವಾಗಿ ಗಣೇಶ ಹಬ್ಬ ನಡೆದಿದೆ.ಆದ್ರೆ ಸರ್ಕಾರ ಡಿಜೆ ವಿಚಾರದಲ್ಲಿ ಬಹಳ ಕಿರಿಕಿರಿ ಮಾಡ್ತೀದೆ.ನೀವು ಡಬಲ್ ಡಿಜೆ ಹಚ್ಚಿ ಎಂದು ಕರೆ ಕೊಟ್ಟ ಪ್ರಮೋದ್ ಮುತಾಲಿಕ್.ಡಿಜೆ ವಿಚಾರದಲ್ಲಿ ಸರ್ಕಾರ ಕಿರಿಕಿರಿ ಮಾಡೋದು ಸರಿ ಅಲ್ಲ ಎಂದಿದ್ದಾರೆ.ಡಿಜೆ ಅಲ್ಲ ಆಜಾನ್ ವಿರುದ್ದವೂ ಕ್ರಮ ಕೈಗೊಳ್ಳಿ.ಆಜಾನ್ ವಿಚಾರದಲ್ಲಿ ಎಲ್ಲ ಪಕ್ಷದವರು ಅಷ್ಟೆ..ಬಿಜೆಪಿಯವರು ಏನ ಸಾಚಾ ಅಲ್ಲ.ಬಿಜೆಪಿಯವರು ನಿರ್ಲಜ್ಜರು.ಕೇವಲ ಅವರಿಗೆ ಹಿಂದೂಗಳು ಬೇಕು.
ಆಜಾನ್ ವಿರುದ್ದ ಹೋರಾಟ ಮಾಡಿದಾಗ ಇದೇ ಬಿಜೆಪಿಯವರು ಅರೆಸ್ಟ್ ಮಾಡಿದ್ರು ಎಂದು ಬಿಜೆಪಿ ವಿರುದ್ದ ಮುತಾಲಿಕ್ ಅಸಮಾಧಾನ ಹೊರಹಾಕಿದರು.ನಮಗೆ ಮೋದಿ ಬೇಕು, ಇಲ್ಲಿನ ಬಿಜೆಪಿ ಸರಿ ಇಲ್ಲ.ಮೋದಿ ಇರದೆ ಇದ್ರೆ ರಾಹುಲ್ ಗಾಂಧಿ ಬರ್ತಾರೆ.ರಾಹುಲ್ ಗಾಂಧಿ ದೇಶ ಮಾರ್ತಾರೆ ಎಂದು ಮುತಾಲಿಕ್ ಹೇಳಿದರು.
ವರದಿ:- ಸುಧೀರ್ ಕುಲಕರ್ಣಿ