ನವದೆಹಲಿ: ಪಹಲ್ಗಾಮ್ ದಾಳಿ ಬಳಿಕ ಇಡೀ ದೇಶವೇ ಆಕ್ರೋಶಗೊಂಡಿರುವ ಸಮಯದಲ್ಲಿ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಟೋಯ್ ಗ್ಯಾಂಗ್ 26 ಅಮಾಯಕರ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಶಪಥ ಮಾಡಿದೆ.
ಬಿಷ್ಟೋಯ್ ಗ್ಯಾಂಗ್ ಪಾಕಿಸ್ತಾನದ 1 ಲಕ್ಷ ಜನರನ್ನು ಕೊಲ್ಲುವುದಾಗಿ ಬೆದರಿಕೆ ಈ ಕುರಿತು ಬಿಷ್ಟೋಯ್ ಗ್ಯಾಂಗ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಪ್ರಕಟಿಸಿದೆ.
26/11 ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್-ಎ-ತೊಯ್ಯಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನೂ ಕೂಡ ಕೊಲ್ಲುವುದಾಗಿ ತಿಳಿಸಿದೆ.
ಹಫೀಜ್ ಸಯೀದ್ ಭಾರತಕ್ಕೆ ಅತ್ಯಂತ ಬೇಕಾಗಿರುವ ಭಯೋತ್ಪಾದಕ. ಸಯೀದ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಮುಖ್ಯಸ್ಥ. ಈ ಭಯೋತ್ಪಾದಕ ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಕೂಡ ಆಗಿದ್ದಾನೆ.
ಇದಲ್ಲದೆ, ಭಾರತದ ಮೇಲಿನ ಹೆಚ್ಚಿನ ಭಯೋತ್ಪಾದಕ ದಾಳಿಗಳಲ್ಲಿ ಹಫೀಜ್ ಭಾಗಿಯಾಗಿದ್ದಾನೆ. ಭಾರತವನ್ನು ಹೊರತುಪಡಿಸಿ, ವಿಶ್ವದ ಹಲವು ದೇಶಗಳು ಹಫೀಜ್‌ನನ್ನು ಭಯೋತ್ಪಾದಕ ಎಂದು ಘೋಷಿಸಿವೆ.
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಟೋಯ್ ಗ್ಯಾಂಗ್ ಬಹಿರಂಗವಾಗಿ ಪಾಕಿಸ್ತಾನಕ್ಕೆ ಬೆದರಿಕೆ ಹಾಕಿದೆ. ಹಫೀಜ್ ಸಯೀದ್‌ನ ಫೋಟೋವನ್ನು ಪೋಸ್ಟ್ ಮಾಡಿ, ನೀವು ನಮ್ಮ ಮುಗ್ಧ ಜನರನ್ನು ಕೊಂದಿದ್ದೀರಿ, ಈಗ ನಾವು ಅದಕ್ಕೆ ಸೇಡು ತೀರಿಸಿಕೊಳ್ಳಲೇಬೇಕು. ಪಾಕಿಸ್ತಾನಕ್ಕೆ ಪ್ರವೇಶಿಸಿ 1 ಲಕ್ಷ ಜನರನ್ನು ನಾವು ಕೊಂದು ಹಾಕುತ್ತೇವೆ. ಈ ಚಿತ್ರವನ್ನು “ಜೈ ಶ್ರೀ ರಾಮ್” ಎಂಬ ಫೇಸ್‌ಬುಕ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
ಆದರೆ ಇದನ್ನು ನಿಜವಾಗಿಯೂ ಬಿಷ್ಟೋಯ್ ಗ್ಯಾಂಗ್ ಪೋಸ್ಟ್ ಮಾಡಿದೆಯೇ ಇಲ್ಲವೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಲಾರೆನ್ಸ್ ಬಿಷ್ಟೋಯ್ ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲಿನ ಜೈಲಿನಲ್ಲಿದ್ದಾನೆ.




