ಚಾಮರಾಜನಗರ:-ಯಳಂದೂರು ತಾಲ್ಲೂಕು ಅಗರ ಮಾಂಬಳ್ಳಿ ಗ್ರಾಮದಲ್ಲಿ ಮಾಂಬಳ್ಳಿ ಪೊಲೀಸ್ ಠಾಣೆ ಯಿಂದ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಂಬ ಜಾಗೃತಿಯನ್ನು ಹಾಗೂ ಗ್ರಾಮದ ಜನರಿಗೆ ಬೈಕ್ ಹೊಡಿಸುವಾಗ ಬಿದ್ದು ಪ್ರಾಣ ಕಳೆದುಕೊಂಡವರ ಚಿತ್ರವನ್ನು ತೋರಿಸಿ ಜನರಿಗೆ ಬೈಕ್ ಹೊಡಿಸುವಾಗ ಹೆಲ್ಮೆಟ್ ಬೇಕೇ ಬೇಕು ಎಂದು ಜಾಗೃತಿ ಮೂಡಿಸಲಾಯಿತ್ತು.
ಮಾಂಬಳ್ಳಿ ಠಾಣೆಯ ಪಿ ಎಸ್ ಐ ಗೋಪಾಲ ಕೃಷ್ಣ ರವರು ಮಾತಾಡಿ ಬೈಕ್ ಹೊಡಿಸುವ ಜನರು ಹೆಲ್ಮೆಟ್ ಇಲ್ಲದೆ ಹೊಡಿಸಿದರೆ ಜೀವನ ಕಳೆದುಕೊಳ್ಳಬೇಕಾಗುತ್ತದೆ.ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಚಾಲನೆ ಮಾಡಲು ವಾಹನಗಳನ್ನು ಕೊಡಬೇಡಿ.ಸುರಕ್ಷತೆ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅತ್ಯಂತ ವಿಮೆಯಾಗಿರುವುದು.ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸಬೇಕು
ಹೆಲ್ಮೆಟ್ ಕೈಗೆ ಹಾಕಿಕೊಂಡು ಬೈಕ್ ಹೊಡಿಸುವಾಗ ಎಷ್ಟು ಜನರು ಬಿದ್ದು ಸಾವುಕೂಡ ಆಗಿದೆ ಆದುದರಿಂದ ಜನರು ಬೈಕ್ ಹೊಡಿಸು ಸವರರು ಹಾಗೂ ಹಿಂಬದಿ ಕುಳಿತು ಕೊಳ್ಳುವ ಸವರರು ಹೆಲ್ಮೆಟ್ ಧರಿಸಿ ಹೋಗ್ಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯಿಯ ಸದ್ಯಸರು ಗ್ರಾಮದ ಜನರು ಹಾಜರಿದ್ದರು
ವರದಿ :ಸ್ವಾಮಿ ಬಳೇಪೇಟೆ