ಸೇಡಂ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ಕೊನೆಯ ಸ್ಥಾನ ಬಂದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಅಂಬೇಡ್ಕರ್ ಯುವ ಸೇನೆ ಸೇಡಂ ತಾಲೂಕ ಅಧ್ಯಕ್ಷರು ಗೋಪಾಲ ಎಲ್ ನಾಟೇಕಾರ ಬೇಸರ ವ್ಯಕ್ತಪಡಿಸಿದ್ದಾರೆ.
ಕೋಟ್ಯಂತರ ರೂ. ಹಣವನ್ನು ಅಕ್ಷರ ಆವಿಷ್ಕಾರದ ಹೆಸರಿನ ಮೇಲೆ ಖರ್ಚು ಮಾಡಲಾಗಿದ್ದರೂ ಕೂಡ ಫಲಿತಾಂಶ ಕೊನೆಯ ಸ್ಥಾನ ಬಂದಿರುವುದು ನೋವಿನ ಸಂಗತಿ. ಫಲಿತಾಂಶ ಸುಧಾರಣೆಗೆ ಸರಿಯಾದ ಯೋಜನೆ ಮತ್ತು ಮೇಲ್ವಿಚಾರಣೆ ಮಾಡುವಲ್ಲಿ ಕೆಕೆಆರ್‌ಡಿಬಿ ಮತ್ತು ಜಿಲ್ಲಾಡಳಿತ ಹಾಗೂ ಸರ್ಕಾರ ಸೋತಿದೆ. ಫಲಿತಾಂಶ ಕಡಿಮೆ ಬಂದಿದ್ದನ್ನು ರಾಜಕೀಯ ನಾಯಕರು ತಲೆಕೆಡಿಸಿಕೊಳ್ಳುವುದಿಲ್ಲ. ಸ್ವಲ್ಪ ದಿನದ ನಂತರ ಎಂದಿನಂತೆ ಮರೆತುಬಿಡುತ್ತಾರೆ. ಆದರೆ ಈ ಭಾಗದ ಪ್ರತಿಭೆಯನ್ನು ನಿಧಾನವಾಗಿ ಚಿವುಟಿ ಹಾಕಲಾಗುತ್ತಿದೆ. ಡಾಕ್ಟರ್, ಇಂಜಿನಿಯರ್ ವಕೀಲರು ಹಾಗೂ ಇತರೆ ಉನ್ನತ ಸ್ಥಾನಕ್ಕೆ ನಮ್ಮ ಮಕ್ಕಳು ಹೋಗಬೇಕಾದರೆ ಇಲ್ಲಿನ ಶಿಕ್ಷಕರ ಕೊರತೆ ಶಿಕ್ಷಣ ಹೆಚ್ಚಿಸಿ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಬೇಕಾಗಿದೆ .
ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳು ಪೈಪೋಟಿಗೆ ಬಿದ್ದು ರಾಜ್ಯದಲ್ಲಿಯೇ ಕೊನೆಯ ಸ್ಥಾನಗಳು ಪಡೆದುಕೊಂಡು ಅತ್ಯಂತ ಕಳಪೆ ಫಲಿತಾಂಶ ಬಂದಿರುವುದರಿಂದ ಕಲ್ಯಾಣ ಕರ್ನಾಟಕ ಮಂತ್ರಿಗಳು ಶಾಸಕರು ಪಕ್ಷಾತೀತವಾಗಿ ತುರ್ತು ಸಭೆ ನಡೆಸಿ ಶಿಕ್ಷಣ ಕುರಿತು ಕುಂದುಕೊರತೆಗಳನ್ನು ಸರಿಪಡಿಸಬೇಕು ಎಂದು ಗೋಪಾಲ ಎಲ್ ನಾಟೇಕಾರ ತಾಲೂಕ ಅಧ್ಯಕ್ಷರು ಅಂಬೇಡ್ಕರ್ ಯುವ ಸೇನೆ ಸೇಡಂ ರವರು ಒತ್ತಾಯಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




