Ad imageAd image

ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅನ್ನಸಂತರ್ಪಣೆ 

Bharath Vaibhav
WhatsApp Group Join Now
Telegram Group Join Now

ಕಲಬುರಗಿ:  ನಗರದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ದಿನಾಂಕ/೧೫/೦೯/೨೦೨೫ರಂದು ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಸಂಘದ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಪಗಡೆಯವರು ಚಾಲನೆ ನೀಡಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಅನಾಥರು, ವೃದ್ಧರು, ಮತ್ತು ಬಡ ಕುಟುಂಬಗಳು ಸೇರಿದಂತೆ ಬಂದ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು.

ಒಬ್ಬ ಪತ್ರಕರ್ತ ಮನಸ್ಸು ಮಾಡಿದರೆ ಸಮಾಜಕ್ಕಾಗಿ ಬಹುಮುಖ ಬದಲಾವಣೆ ತರಬಹುದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತೇವೆ ಎಂದು ಸಂಸ್ಥಾಪಕ ಪಗಡೆಯವರು ಹೇಳಿದರು. ಪತ್ರಕರ್ತರು, ಸ್ವಯಂಸೇವಕರು ಮತ್ತು ಸ್ಥಳೀಯರು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಪಯತ್ನ ಸಮಾಜಸೇವೆಯಲ್ಲಿ ಪತ್ರಕರ್ತರ ನೈತಿಕ ಹೊಣೆಗಾರಿಕೆಯನ್ನು ಹಿರಿದಾಗಿ ತೋರಿಸಿತು.

ಈ ಸಂಧರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ರಾಜಶೇಖರ ಮಾತೋಳಿ, ರವಿ ಬಡಿಗೇರ, ಶ್ರೀಶೈಲ್ ಪಗಡೆ, ಪವನ್ ಕುಲಕರ್ಣಿ, ಕರುಣಯ್ಯ ಸ್ವಾಮಿ, ಮಹಾಂತೇಶ್ ರೋಜಿ, ವಿನಾಯಕ, ರಮೇಶ್ ಕುಡ್ಡಹಳ್ಳಿ, ಮಾರುತಿ, ಪ್ರವೀಣ್, ವಿಠ್ಠಲ ಪೂಜಾರಿ, ಸೇರಿದಂತೆ ಹಲವಾರು ಪತ್ರಕರ್ತರು ಭಾಗಿಯಾಗಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!