ಅಮೇರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ನ ತೆಹರಾನ್ ಮೇಲೆ ನಡೆಸಿರುವ ದಾಳಿಯಲ್ಲಿ ೬ ಮಕ್ಕಳು ಸಾವನ್ನಪಿದ್ದಾರೆ ಎಂದು ವರದಿಯಾಗಿದೆ.
ಫೆ. ೨೮ ರಂದು ಆರಂಭವಾಗಿರುವ ಪಶ್ಚಿಮ ಏಷ್ಯಾ ಸಂಘರ್ಷ ತಿಂಗಳು ಕಳೆದು ಹೋಗಿದ್ದು, ದಾಳಿ, ಪ್ರತಿದಾಳಿಗಳು ನಡೆಯುತ್ತಲೇ ಇವೆ.
ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಫ್ ಪದೇ ಪದೇ ಇರಾನ್ಗೆ ಹೋರ್ಮುಜ್ ಜಲಸಂಧಿ ಮಾರ್ಗ ಮುಕ್ತಗೊಳಿಸಲು ಎಚ್ಚರಿಕೆ ನೀಡುತ್ತಲೇ ಇದ್ದಾರೆ.
ಏತನ್ಮಧ್ಯೆ ಡೋನಾಲ್ಡ್ ಟ್ರಂಫ್ ಮೊದಲ ಬಾರಿಗೆ ಆಕ್ರಮಣಕಾರಿ ಭಾಷೆಯಲ್ಲಿ ಮಾತನಾಡಿದ್ದು, ಹೋರ್ಮುಜ್ ಜಲಸಂಧಿ ಮುಕ್ತಗೊಳಿಸದಿದ್ದರೆ ದಾಳಿಯನ್ನು ಮತ್ತಷ್ಟು ವಿಸ್ತರಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷ: ತೆಹರಾನ್ ಮೇಲಿನ ದಾಳಿಯಲ್ಲಿ ೬ ಮಕ್ಕಳ ಸಾವು




