ಬೆಂಗಳೂರು : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇರೆಗೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.ಈ ಕುರಿತು ಸುದ್ದಿಗಾರರ ಜೊತೆ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿದರು.
‘ಸಮಸ್ಯೆ ಹೇಳಿಕೊಂಡು ತಾಯಿ-ಮಗಳು ಅನೇಕ ಬಾರಿ ನನ್ನ ಬಳಿ ಬಂದು ಹೋಗುತ್ತಿದ್ದರು.ಕಣ್ಣೀರು ಹಾಕುತ್ತಿದ್ದಾರೆ ಅಂತ ಒಳಗಡೆ ಕರೆದು ಸಮಸ್ಯೆ ಕೇಳಿದೆ, ತುಂಬಾ ಅನ್ಯಾಯ ಆಗಿದೆ ಅಂತ ಹೇಳಿದರು.
ನಾನು ಪೊಲೀಸ್ ಕಮಿಷನರ್ ಅವರಿಗೆ ಕಾಲ್ ಮಾಡಿ ಅನ್ಯಾಯ ಆಗಿದೆ ನ್ಯಾಯ ಕೊಡಿಸಿ ಎಂದು ಕಮಿಷನರ್ ಹತ್ತಿರ ಕಳುಹಿಸಿಕೊಟ್ಟಿದ್ದೇನೆ, ಇದಾದ ನಂತರ ನನ್ನ ಮೇಲೆ ಬಾಯಿಗೆ ಬಂದ ಹಾಗೆ ಮಾತನಾಡೋಕೆ ಶುರು ಮಾಡಿದರು” ಎಂದರು.
”ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಳೆ ಎಂಬುದು ತಿಳಿದು ಬಂದಿದೆ. ಉಪಕಾರ ಮಾಡಿದ್ರೆ ಈಗ ನನ್ನ ಮೇಲೆ ಹೀಗೆ ಮಾಡಿದ್ದಾರೆ. ಅಲ್ಲದೇ ಪಾಪ ಹೆಣ್ಣು ಮಗಳು ಅಂತ ಹಣದ ಸಹಾಯ ಕೂಡ ಮಾಡಿದೆ.
ಯಾರಿಗೂ ಉಪಕಾರ ಮಾಡಬಾರದು, ಮಾಡಿದ್ರೆ ಹೀಗೆ ಮಾಡ್ತಾರೆ. ನೋಡೋಣ ಎಲ್ಲವನ್ನು ಎದುರಿಸೋಣ ಬಿಡಿ..ಇಂತಹದ್ದೆನ್ನೆಲ್ಲಾ ನಾನು ನಿರೀಕ್ಷೆ ಮಾಡಿರಲಿಲ್ಲ. ಇದು ರಾಜಕೀಯ ಪ್ರೇರಿತ ಘಟನೆ ಎಂದು ನಾನು ಹೇಳುವುದಕ್ಕೆ ಇಷ್ಟ ಪಡಲ್ಲ” ಎಂದರು.