ಬೆಂಗಳೂರು : ಕನ್ನಡ ನಟಿ ಕಾರುಣ್ಯಾ ರಾಮ್ ಅವರು ತಂಗಿ ಸಮೃದ್ಧಿ ಅವರು ಬೆಟ್ಟಿಂಗ್ ಆಡಿ, ಸಾಲ ಮಾಡಿದ್ದಾರೆ ಎಂದು ಆರೋಪ ಮಾಡಿ, ಸ್ವಂತ ತಂಗಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ನಟಿ ಕಾರುಣ್ಯಾ ರಾಮ್ ಅವರು ತಂಗಿ ಸಮೃದ್ಧಿ ರಾಮ್ ಕೂಡ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು.ಈ ವೇಳೆ ಸಮೃದ್ಧಿ ಅವರು ಮೇಕಪ್ ಆರ್ಟಿಸ್ಟ್, ಬ್ಯೂಟಿಕ್ ಆಗಿ ಕೂಡ ಕೆಲಸ ಮಾಡುತ್ತಿದ್ದರು.
ಕೆಲ ವರ್ಷಗಳಿಂದ ಕಾರುಣ್ಯಾ ರಾಮ್ ಅವರು ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಸಮೃದ್ಧಿ ರಾಮ್ ಅವರು ಒಂದೂರಲ್ಲಿ ರಾಜ ರಾಣಿ, ಮನೆ ದೇವ್ರು ಧಾರಾವಾಹಿಯಲ್ಲಿ ನಟಿಸಿದ್ದರು.
ಸೀರಿಯಲ್‌ನಲ್ಲಿ ನಟಿಸಿದ್ದ ಸಮೃದ್ಧಿ ರಾಮ್ ಅವರು ಇತ್ತೀಚೆಗೆ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದು ಕಡಿಮೆ. ಸೀರಿಯಲ್ ಬಿಟ್ಟ ಬಳಿಕ ಅವರು ಬ್ಯುಸಿನೆಸ್ ಕಡೆಗೆ ಮುಖ ಮಾಡಿದ್ದರು.
ಸಮೃದ್ಧಿ ರಾಮ್ ಅವರು ಬೆಟ್ಟಿಂಗ್ ಆಟ ಆಡಿ 25 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬ್ಯುಸಿನೆಸ್‌ನಲ್ಲಿಯೂ ನಷ್ಟ ಮಾಡಿಕೊಂಡಿದ್ದರು. ಆಮೇಲೆ ಖಾಸಗಿ ವ್ಯಕ್ತಿಗಳಿಂದ ಸಾಲ ಕೂಡ ಪಡೆದಿದ್ದರು. ಹೀಗಾಗಿ ಅವರು ಮನೆಯಲ್ಲಿದ್ದ ಹಣ, ಚಿನ್ನವನ್ನು ಸಾಲಕ್ಕೆ ಬಳಸಿದ್ದಾರೆ




